ಅಂಬೇಡ್ಕರ್ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ….
1 min read
ಅಂಬೇಡ್ಕರ್ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಆಲ್ದೂರು: ಸಮೀಪದ ಕೂದುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ನಗರದ ಸಮುದಾಯ ಭವನದಲ್ಲಿ ಮಂಗಳವಾರ ಡಾ. ಬಿಆರ್, ಅಂಬೇಡ್ಕರ್ ಯುವಕ ಸಂಘ (ರಿ)ಕೂದುವಳ್ಳಿ ಇದರ 2026- 27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘದ ಅಧ್ಯಕ್ಷರಾಗಿ ಇಂದ್ರೇಶ್ ಕೆಎನ್, ಉಪಾಧ್ಯಕ್ಷ ಯಶ್ವಂತ್ ಕೆಬಿ, ಕಾರ್ಯದರ್ಶಿ ಸಾರ್ಥಕ್ ಕೆಆರ್, ಸಹಕಾರ್ಯದರ್ಶಿ ಪ್ರತಾಪ್ ಎಸ್, ಖಜಾಂಚಿ ಸೂರ್ಯ ಕೆಎಸ್, ಸಹ ಖಜಾಂಚಿ ಶಾಶ್ವತ್ ಕೆ ಎಸ್,ಕ್ರೀಡಾ ಕಾರ್ಯದರ್ಶಿ ಗಳಾಗಿ ರಂಜಿತ್ ಎಸ್, ಪ್ರಜ್ವಲ್ ಎಂ, ಸಾಗರ್ ಕೆಎಚ್, ಶಶಾಂಕ್ ಕೆ ಎಸ್, ಕಲಾಮಂಡಳಿ ರಾಹುಲ್ ಕೆಜೆ, ತೇಜಸ್ ಕೆಎನ್, ಕಿಶೋರ್ ಕೆಎಚ್, ಆಯ್ಕೆಯಾದರು.
ಸಂಘವನ್ನು ಮತ್ತು ನೀತಿ ನಿಯಮಗಳನ್ನು ನೂತನ ಪದಾಧಿಕಾರಿಗಳು ಪರಿಪಾಲಿಸಿ ಹಿರಿಯರ ಸಲಹೆ ಸೂಚನೆ ಮತ್ತು ಮಾರ್ಗದರ್ಶನಗಳನ್ನು ಪಡೆದು ಯಶಸ್ವಿಯಾಗಿ ಮುನ್ನಡೆಸುವಂತೆ ಮುಖಂಡರುಗಳು ಶುಭ ಹಾರೈಸಿದರು.
ಆಯ್ಕೆ ಪ್ರಕ್ರಿಯೆಯ ನೇತೃತ್ವವನ್ನು ಗ್ರಾಮದ ಅಧ್ಯಕ್ಷ ಮಂಜುನಾಥ್ ಕೆಎಂ, ಮಂಜಯ್ಯ, ಮಂಜುನಾಥ್ ಕೆಜೆ, ಭದ್ರಯ್ಯ ಕೆ ಪಿ, ಚಂದ್ರಶೇಖರ್ ಕೆ ಬಿ ವಹಿಸಿದ್ದರು.
ನಿಕಟ ಪೂರ್ವ ಪದಾಧಿಕಾರಿಗಳಾದ ಸಂದೀಪ್ ಕೆಜಿ, ಚೇತನ್ ಕೆ ಎಂ, ಲೋಕೇಶ್ ಕೆ ಹೆಚ್, ಸುರೇಶ್ ಕೆಎನ್, ಜಯಪ್ರಕಾಶ್ ಕೆ ಎನ್, ಅಶೋಕ್ ರಾಜರತ್ನಂ, ರವಿ ಕೆ ಆರ್, ಪ್ರದೀಪ್ ಕೆಕೆ, ಕೃಷ್ಣಪ್ರಸಾದ್ ಕೆ ಎಚ್, ಯಶೋಧರ ಕೆಎಚ್ ಹಾಜರಿದ್ದರು.

