ಕ್ರಿಕೆಟ್ ಪ್ರೀಮಿಯರ್ ಲೀಗ್ ಜೈ ಭೀಮ್ ತಂಡ ಚಾಂಪಿಯನ್….
1 min read
ಕ್ರಿಕೆಟ್ ಪ್ರೀಮಿಯರ್ ಲೀಗ್ ಜೈ ಭೀಮ್ ತಂಡ ಚಾಂಪಿಯನ್
ಆಲ್ದೂರು: ಸಮೀಪದ ಹಾಂದಿಯ ಮಾಚಗೊಂಡನಹಳ್ಳಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ದೇವಿರಮ್ಮ ಫ್ರೆಂಡ್ಸ್ ಕ್ರಿಕೆಟರ್ಸ್ ಆಯೋಜಿಸಿದ್ದ ಜೈ ಭೀಮ್ ಪ್ರಥಮ ಆವೃತ್ತಿ ಮಂಗಳವಾರ ಮುಕ್ತಾಯವಾಯಿತು.
ಮೂರು ದಿನಗಳ ಕಾಲ ಆಯೋಜಿಸಿದ್ದ ಲೀಗ್ ಮಾದರಿಯ ಕ್ರೀಡಾಕೂಟದಲ್ಲಿ ಒಟ್ಟು 24 ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನಗಳಿಸಿದ ಹೊಸಪೇಟೆಯ ಜೈ ಭೀಮ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ 30 ಸಾವಿರ ನಗದು ಬಹುಮಾನ ಗಳಿಸಿತು.
ದ್ವಿತೀಯ ಬಹುಮಾನ ಪಡೆದ ದೇವಿರಮ್ಮ ಫ್ರೆಂಡ್ಸ್ ತಂಡ 20 ನಗದು, ತೃತಿಯ ಸ್ಥಾನ ಪಡೆದ ಟೀಮ್ ಈಗಲ್ ಕೀತೂರು 10 ಸಾವಿರ ನಗದು, ಚತುರ್ಥ ಸ್ಥಾನ ಪಡೆದ ಹಾಂದಿಯ ಫ್ರೆಂಡ್ಸ್ ತಂಡ 5 ಸಾವಿರ ನಗದು ಗಳಿಸಿತು.
ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಮಹೇಶ್ ಹಾಗೂ ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ಜೈ ಭೀಮ್ ತಂಡದ ಸುನಿಲ್ ಜೋಶಿ ಪಡೆದರು.
ಕ್ರೀಡಾಕೂಟದ ಬೆಸ್ಟ ಬೌಲರ್ ಮಹೇಶ್, ಬೆಸ್ಟ್ ಬ್ಯಾಟ್ಸ್ ಮ್ಯಾನ್ ತನು.
ಸಮಾರೋಪ ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಚನ್ನಕೇಶವ, ಶಿವಣ್ಣ, ಉಮೇಶ್ ರಘು ಸಿದ್ದಿಕ್ ಸಂದೀಪ್ ರವಿ ಅಶೋಕ್, ಆಯೋಜಕರಾದ
ದೇವಿರಮ್ಮ ಫ್ರೆಂಡ್ಸ್ ತಂಡದವರು ಭಾಗವಹಿಸಿದ್ದರು.

