लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತೀಯ ಸನಾತನ ಧರ್ಮ ಮತ್ತು ವೀರಶೈವ ಸಿದ್ಧಾಂತದ ಇತಿಹಾಸದಲ್ಲಿ ಜಗದ್ಗುರು ರೇಣುಕಾಚಾರ್ಯ ರು ಹಾಗೂ ಪ್ರೀತಿ ಮತ್ತು ಸಮಾನತೆಯ ಸಂದೇಶ ನೀಡದವರು ಜಗಜ್ಯೋತಿ ಬಸವಣ್ಣರ ಹೆಸರು ಅಜರಾಮರ :

1 min read

ಮೂಡಿಗೆರೆ :ಭಾರತೀಯ ಸನಾತನ ಧರ್ಮ ಮತ್ತು ವೀರಶೈವ ಸಿದ್ಧಾಂತದ ಇತಿಹಾಸದಲ್ಲಿ ಜಗದ್ಗುರು ರೇಣುಕಾಚಾರ್ಯ ರು ಹಾಗೂ ಪ್ರೀತಿ ಮತ್ತು ಸಮಾನತೆಯ ಸಂದೇಶ ನೀಡದವರು ಜಗಜ್ಯೋತಿ ಬಸವಣ್ಣರ ಹೆಸರು ಅಜರಾಮರ :ಷ. ಬ್ರ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ.

ಮೂಡಿಗೆರೆ :ಭಾರತೀಯ ಸನಾತನ ಧರ್ಮ ಮತ್ತು ವೀರಶೈವ ಸಿದ್ದಾಂತದ ಇತಿಹಾಸ ದಲ್ಲಿ ಜಗದ್ಗುರು ರೇಣುಕಾಚಾರ್ಯ ರ ಹೆಸರು ಅಜರಾಮರ ವಾದದ್ದು “ಸಿದ್ದಾಂತ ಶಿಖಾಮಣಿ “ಎಂಬ ಪವಿತ್ರ ಗ್ರಂಥದ ಮೂಲಕ ಮಾನವ ಕುಲಕ್ಕೆ ಧರ್ಮ ದ ಸಾರ ವನ್ನು ಊಣಬಡಿಸಿ ದವರು ಇವರು. ಇವರನ್ನು ರೇಣುಕಾ ಭಾಗವತ್ಪಾದರು ಎಂದು ಭಕ್ತಿ ಯಿಂದ ಕರೆಯಲಾಗುತ್ತಿದೆ ಎಂದು ಬೇರುಗಂಡಿ ಬ್ರಹನ್ಮಠದ ಶ್ರೀ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿ ಹೇಳಿದರು.

ಅವರು ಸೋಮವಾರ ಮೂಡಿಗೆರೆ ಐಸಿರಿ ಲೇಔಟ್ ಶ್ರೀಮತಿ ರಾಜಾಲಕ್ಸ್ಮಿ ಕಾಂತರಾಜ್ ರವರ” ಇಷ್ಟ “ನೂತನ ಮನೆಯoಗಳದಲ್ಲಿ. ಜಗಜ್ಯೋತಿ ಬಸವೇಶ್ವರ ಹಾಗೂ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರ ಮಹಾನ್ ಸಂತರ ಭಾವಚಿತ್ರ ಕ್ಕೆ ಪುಷ್ಪರ್ಚನೆ ನೆರವೇರಿಸಿ ಆಶ್ರೀವಚನ ನೀಡಿದರು.

ಅನುಭವ ಮಂಟಪ :ಪ್ರಜಾಪ್ರಭುತ್ವದ ಮೊದಲ ಹೆಜ್ಜೆ. ಬಸವಣ್ಣ ನವರು ಸ್ಥಾಪಿಸಿದ ಅನುಭವ ಮಂಟಪ ವು ವಿಶ್ವದ ಮೊದಲ ಸಂಸತ್ತು ಎನ್ನುಬಹುದು. ಕಾಯಕವೇ ಕೈಲಾಸ ಮಾಡುವ ಕೆಲಸ ವೇ ದೇವರು. ಯಾವುದೇ ಕೆಲಸ ಕಿಳಿಲ್ಲ. ಶ್ರದ್ದೆ ಯಿಂದ ಮಾಡುವ ಕಾಯಕವೇ ಮೋಕ್ಷ ಕ್ಕೆ ದಾರಿ. ದಾಸೋಹ ತನ್ನ ಕಾಯಕ ದಿಂದ ಬಂದ ಗಳಿಕೆ ಯಲ್ಲಿ ಒಂದು ಭಾಗವನ್ನು ಸಮಾಜದ ಹಸಿದವರಿಗಾಗಿ ಮಿಸಲಿಡುವುದು ಹಾಗೂ ಪ್ರತಿಯೊಬ್ಬ ಮನುಷ್ಯನೂ ತನ್ನ ಅಂತರಂಗ ಶಿವ ನನ್ನು ಅರಿತು ಮುಕ್ತಿ ಪಡೆಯಬುಹುದು ಎಂದರು.

ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಸ್ವಾಗತಿಸಿ ಜಗದ್ಗುರು ರೇಣುಕಾಚಾರ್ಯ ರು ಜೀವನದ ಮೂಲ ಮಂತ್ರ “ಸರ್ವೇ ಜನೋ ಸುಖಿನೋ ಭವಂತು “ದ್ವೇಷ ವನ್ನು ಬಿಟ್ಟು ಪ್ರೀತಿ ಯಿಂದ ಬಾಳುವುದು. ಪರಶಿವನ ಆರಾಧನೆ ಯೊಂದಿಗೆ ಸತ್ಯದ ಹಾದಿಯಲ್ಲಿ ನಡೆಯುವುದೇ ರೇಣುಕಾಚಾರ್ಯ ರು ನಮಗೆ ನೀಡಿದ ಅತೀ ದೊಡ್ಡ ಸಂದೇಶ ಹಾಗೂ ಬಸವಣ್ಣ ನವರು ಕೇವಲ ಮಾತು ಗರರಾಗಿರಲಿಲ್ಲ ಅವರು ಕ್ರಿಯಾ ವಾದಿ ಯಾಗಿದ್ದರು. ಅಸ್ಪೃಶ್ಯತೆ ವಿರುದ್ಧ ಹೋರಾಡಲು ಅವರುಅಂತರಜಾತಿ ವಿವಾಹ ವನ್ನು ಪ್ರೋತ್ಸಾಹಿಸಿ ದವರು “ದಯವಿಲ್ಲದ ಧರ್ಮ ಯಾವುದಯ್ಯ ಎಂದು ಪ್ರಶ್ನೆ ಮಾಡುವ ಮೂಲಕ ಧರ್ಮ ದಲ್ಲಿ ಪ್ರೀತಿ ಮತ್ತು ಕರುಣೆಯೇ ಪ್ರಧಾನ ವಾಗಿರಬೇಕು ಎಂದು ಒತ್ತಿ ಹೇಳುತ್ತಿದ್ದರು ಎಂದರು.

ಕಾರ್ಯಕ್ರಮ ದಲ್ಲಿ ಮೂಡಿಗೆರೆ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಅಧ್ಯಕ್ಷಣಿ ರಾಜಾಲಕ್ಸ್ಮಿ ಕಾಂತರಾಜ್ ಹಾಗೂ ಮಹಾಂತಿನ ಮಠದ ಪುರೋಹಿತ ಸಂಗಮೇಶ ಶಾಸ್ತಿ. ಮೂಡಿಗೆರೆ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕರುಗಳಾದ.ಬಸವರಾಜ್.ಕಾಂತರಾಜ್. ಬಸವರಾಜ್.ಸಣ್ಮುಖ.
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ತಿ ಉಮಾ ಮೋಹನ್. ಗೌರವ ಟ್ರಸ್ತಿ ಸಿ.ಸಿ.ರಾಜಣ್ಣ.ಹುರುಡಿ ಬಾಲರಾಜ್. ರಾಜೇಗೌಡ. ಪ್ರಕಾಶ್. ಸತೀಶ್. ಚಾಂದಿನಿ.ಕೌಶಿಕ್. ಡಿಂಪಲ್ ಗುತ್ತಿಗೆದಾರ ಸೈಯದ್ ಹಾಗೂ ಅಪಾರ ಬಂದು ಬಳಗ ಭಾಗವಹಿಸಿ ದ್ದರು

About Author

Leave a Reply

Your email address will not be published. Required fields are marked *

You may have missed