लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ನಗರದಲ್ಲಿ ಟ್ರಾಫಿಕ್‌ ಸಮಸ್ಯೆ: ಕ್ರಮಕ್ಕೆ ಆಗ್ರಹ

ಚಿಕ್ಕಮಗಳೂರು: ನಗರದಲ್ಲಿ ದಿನೇ ದಿನೇ ಉಲ್ಬಣಿಸುತ್ತಿರುವ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಸಾಮಾಜಿ-ಕ ಹೋರಾಟಗಾರ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
‎ಈ ಸಂಬಂಧ ಹೇಳಿಕೆ ನೀಡಿರುವ ಅವರು, ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದರೂ ಅದಕ್ಕೆ ಅನುಗುಣವಾಗಿ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಾಹನ ದಟ್ಟಣೆ ನಿಯಂತ್ರಣ-ಕ್ಕೆ ವೈಜ್ಞಾನಿಕ ಕ್ರಮಗಳನ್ನು ಅಳವಡಿಸದಿರುವುದರಿಂದ ಒಂದೆಡೆ ವಾಹನ ಚಾಲಕರು ಮತ್ತೊಂದೆಡೆ ಪಾದಚಾರಿಗಳು, ಸಾರ್ವಜನಿಕರು, ವರ್ತಕರು ತೊಂದರೆ ಎಂದಿದ್ದಾರೆ. ಅನುಭವಿಸುತ್ತಿದ್ದಾರೆ
ಈ ಮೊದಲು ನಗರದ ಪ್ರಮುಖ ಮೂರು ರಸ್ತೆಗಳಲ್ಲಿ ಮಾತ್ರ ಟ್ರಾಫಿಕ್ ಸಮಸ್ಯೆ ಕಂಡು ಬರುತ್ತಿತ್ತು. ಆದರೆ ಈಗ ನಗರದ ಬಹುತೇಕ ಬಡಾವಣೆಗಳು ವಿಸ್ತಾರ ಗೊಳ್ಳುತ್ತಿರುವುದರ ಪರಿಣಾಮ ಪ್ರಮುಖ ರಸ್ತೆಯ ಸಂಪರ್ಕ ರಸ್ತೆಗಳೆಲ್ಲವೂ ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿವೆ.
‎ರಸ್ತೆಗಳು ಕಿರಿದಾಗಿರುವುದ-ರಿಂದ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಪ್ರಮುಖವಾಗಿ ಎಂ.ಜಿ ರಸ್ತೆಯಲ್ಲಿ ಎರಡೂ ಬದಿ ವಾಣಿಜ್ಯ ಕಟ್ಟಡ ಮಾಲೀಕರು, ಹಾಗೂ ವರ್ತಕರಿಗೆ ಸೇರಿದ ವಾಹನಗಳನ್ನು ದಿನವಿಡೀ ನಿಲ್ಲಿಸುವುದರಿಂದ ಸಾಮಗ್ರಿಗಳು, ಸರಂಜಾಮುಗಳನ್ನು ಖರೀದಿಸಲು ಬರುವ ಗ್ರಾಹಕರು ವಾಹನ ನಿಲ್ಲಿಸಲು ಜಾಗವಿಲ್ಲದೆ ಪರದಾಡುವಂತಾಗಿದೆ. ತುರ್ತು
‎
‎ಕೆಲವರು ಸಂದರ್ಭದಲ್ಲಿ ವಾಹನ ನಿಲುಗಡೆಗೆ ಜಾಗವಿಲ್ಲದೆ ಅನಿವಾರ್ಯವಾಗಿ ಪಾರ್ಕಿಂಗ್ ರಾಂಗ್ ಮಾಡಿದರೆ ತಕ್ಷಣ ಟ್ರಾಫಿಕ್ ಪೊಲೀಸರು ಪ್ರತ್ಯಕ್ಷರಾಗುತ್ತಾರೆ. ದಂಡ ಶುಲ್ಕ ಎಂದೆಲ್ಲ ಕಾನೂನು ಕ್ರಮಕ್ಕೆ ಮುಂದಗುತ್ತಾರೆ. ವಾಸ್ತವ ಪರಿಸ್ಥಿತಿ ಹೇಳಲು ಮುಂದಾದರೆ ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ನೀವು ಹೇಗಾದರೂ ಸರಿ ಕಾನೂನು ಪಾಲಿಸಬೇಕು ಎಂದು ಪಾಠ ಮಾಡಲು ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಎಂಜಿ ರಸ್ತೆಯಲ್ಲಿ ಮೊದಲು ಅಲ್ಲಿನ ಕಟ್ಟಡ ಮಾಲೀಕರು ಮತ್ತು ವರ್ತಕರ ವಾಹನಗಳನ್ನು ನಿಲುಗಡೆ ನಿಷೇಧಿಸುವ ದಿನವಿಡೀ ಮಾಡುವುದನ್ನು ಮೂಲಕ ರ್ವಜನಿಕರಿಗಾಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
‎
‎ಎಂಜಿ ರಸ್ತೆಯಲ್ಲಿ ನಗರಸಭೆಗೆ ಸೇರಿದ ಹಿಂದೂ ಮುಸಾಫಿರ್ ಖಾನಾದ ಜಾಗ ಸೇರಿದಂತೆ ಕೊಂಚ ಹೊರವಲಯದಲ್ಲಾದರೂ ಮಲ್ಟಿಪಲ್ ಪಾರ್ಕಿಂಗ್ ವ್ಯವಸ್ಥೆ ಮಾಡಿ ಅಲ್ಲಿ ಎಂಜಿ ರಸ್ತೆಯ ವರ್ತಕರು ಸೇರಿದಂತೆ ಸರಿ ಇತರೆ ಸಾರ್ವಜನಿಕರು ದಿನವಿಡೀ
‎ವಾಹನಗಳನ್ನು ಶುಲ್ಕ ಸಹಿತ ನಿಲುಗಡೆ ಮಾಡಲು ಅವಕಾಶ ಮಾಡಿಕೊಡಬಹುದಿದ್ದು, ಇಂತಹ ಕ್ರಮಗಳ ಕಡೆಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
‎
ಇದಲ್ಲದೆ ನಗರದಲ್ಲಿ ವಾಹನ ದಟ್ಟಣೆ ಸುಧಾರಣೆ ಮಾಡುವ ಸಲುವಾಗಿ ನಗರದ ಎಐಟಿ ಕಾಲೇಜು ಬಳಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಬೇಕಿದೆ. ಅದೇ ರೀತಿ ನಗರದಲ್ಲಿ ಕೆಲವು ಸಂಪರ್ಕ ರಸ್ತೆಗಳಲ್ಲಿ ಏಕಮುಖ ಸಂಚಾರ ವವ್ಯಸ್ಥೆಯನ್ನು ಜಾರಿಗೊಳಿಸುವುದು ಅಗತ್ಯವಿದೆ ಎಂದಿದ್ದಾರೆ.
‎
‎ಬೇಕಾಬಿಟ್ಟಿ, ಅಡ್ಡಾದಿಡ್ಡಿ ವಾಹನಗಳನ್ನು ಓಡಿಸುವವರು, ಟ್ರಾಫಿಕ್ ನಿಯಮಗಳಿಗೆ ಗೌರವ ನೀಡದೆ ಅಶಿಸ್ತಿನಿಂದ ವರ್ತಿಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಟ್ರಾಫಿಕ್ ವ್ಯವಸ್ಥೆಯನ್ನು ವ್ಯವಸ್ಥಿತ ವಾಗಿ ನಿರ್ವಹಣೆ ಮಾಡಬೇಕಿದೆ. ಇದರಿಂದ ದೇಶ, ವಿದೇಶಗಳಿಂದ ಭೇಟಿ ನೀಡುವ ನಗರಕ್ಕೆ ಪ್ರವಾಸಿಗರು ಪ್ರತಿದಿನ ಇಲ್ಲಿನ ವ್ಯವಸ್ಥೆಯನ್ನು ಶಪಿಸಿಕೊಳ್ಳುವುದು ತಪ್ಪುತ್ತದೆ ಎಂದಿದ್ದಾರೆ.
‎
ಸುಧಾರಣೆಗೆ ಮುಂದಾಗುವುದು ಸುಲಭದ ಮಾತಲ್ಲ ಎನ್ನುವ ಅಭಿಪ್ರಾಯ ಗಳನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಆದರೆ ಜಿಲ್ಲಾಡಳಿತ ಯಾರ ಒತ್ತಡಕ್ಕೂ ಮಣಿಯದೆ ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿದರೆ ಎಲ್ಲವೂ ಸಾಧ್ಯವಿದೆ. ಇದಕ್ಕೆ ಶಾಸಕರಾದಿಯಾಗಿ ಎಲ್ಲಾ ಚುನಾಯಿತ ಸದಸ್ಯರು, ಸಂಘ-ಸಂಸ್ಥೆಗಳು ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed