लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕದ ಎಲ್ಲಾ ದಲಿತದಮನಿತಪರ, ಪ್ರಗತಿಪರ, ಸಮಾಜಮುಖಿ ಮನಸುಗಳೇ….

1 min read

ಕರ್ನಾಟಕದ ಎಲ್ಲಾ ದಲಿತದಮನಿತಪರ, ಪ್ರಗತಿಪರ, ಸಮಾಜಮುಖಿ ಮನಸುಗಳೇ….

‘ಮೀಸಲಾತಿ – ಒಳಮೀಸಲಾತಿ’ ಹೆಸರಿನಲ್ಲಿ ದಲಿತದಮನಿತರನ್ನು ಛಿದ್ರಛಿದ್ರಗೊಳಿಸುತ್ತಾ ಈಗ ಸಿಗಬಹುದಾದ ಸೌಲಭ್ಯಗಳನ್ನೂ ಕೂಡ ಇಲ್ಲದಂತಾಗಿಸುವ ರಾಜ್ಯ ಸರ್ಕಾರದ, ಬ್ರಾಹ್ಮಣಶಾಹಿ ಶಕ್ತಿಗಳು ಮತ್ತು ದಲಿತದಮನಿತ ಹಿನ್ನೆಲೆಯ ಕೆಲವು ನಾಯಕರೆಂದುಕೊಂಡಿರುವ ವ್ಯಕ್ತಿಗಳ ಅನ್ಯಾಯದ ನಡೆಗಳ ಬಗ್ಗೆ ದನಿಯೆತ್ತಬೇಕಾದ ಕರ್ತವ್ಯ ಎಲ್ಲರ ಮೇಲಿದೆ ಎನ್ನುವುದನ್ನು ಮರೆಯಬಾರದು. ಆ ಕರ್ತವ್ಯವನ್ನು ನಿರ್ವಹಿಸದೇ ಹೋಗುವುದು ತಪ್ಪಾಗುತ್ತದೆ.

ಇರುವಂತಹ ಸೌಲಭ್ಯಗಳನ್ನು ಅಸ್ಪೃಶ್ಯರೆಂದು ಸಮಾಜದಿಂದ ಪರಿಗಣಿಸಲ್ಪಟ್ಟಿರುವ ಎಡ ಬಲ ಸೇರಿದಂತೆ ಎಲ್ಲಾ ದಲಿತದಮನಿತ ಸಮೂಹಗಳಿಗೆ ನ್ಯಾಯಯುತವಾಗಿ ಹಂಚಿಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ.

ಈಗ ಘೋಷಿತವಾಗಿರುವ ‘ಒಳಮೀಸಲಾತಿ’ ಯಲ್ಲಿನ ರೋಸ್ಟರ್ ಮೊದಲಾದವುಗಳಲ್ಲಿನ ತಪ್ಪುಗಳನ್ನು ಸರಿಪಡಿಸಿ ಜಾರಿಗೊಳಿಸಲು ಎಲ್ಲರೂ ಕೂಡಿ ಸರ್ಕಾರದ ಮೇಲೆ ಒತ್ತಡ ಹೇರಬೇಕು.

‘ಒಳ ಮೀಸಲಾತಿಯೇ ಬೇಡ’ , ಈಗಿರುವ ‘ಅಂಬೇಡ್ಕರ್ ಮೀಸಲಾತಿಯೇ ಸಾಕು’ ಎಂಬಂತಹ ತಪ್ಪು ವಾದಮಂಡನೆಗಳನ್ನು ಪಕ್ಕಕ್ಕಿಡುವಂತೆ ಇಲ್ಲವೇ ವಾಪಾಸು ಪಡೆಯುವಂತೆ ಸಂಬಂದಿತರಿಗೆ ಮನವರಿಕೆ ಮಾಡಿಕೊಡುವ ಅಗತ್ಯ ಕಾರ್ಯಗಳಾಗಬೇಕಾಗಿದೆ. ಈ ವಾದ ಅಂಬೇಡ್ಕರ್ ವಿಚಾರಗಳನ್ನು ಹಾಗೂ ಅಂಬೇಡ್ಕರ್ ರನ್ನು ಗೌರವಿಸುವ ವಿಚಾರ ಕೂಡ ಅಲ್ಲ, ಬದಲಿಗೆ ಅಂಬೇಡ್ಕರ್ ವಿಚಾರ ಹಾಗೂ ಅವರು ಮಾಡಿದಂತಹ ಹೋರಾಟಗಳ ಸ್ಪೂರ್ತಿಗೇ ವಿರುದ್ಧವಾಗಿರುವ ವಿಚಾರ ಹಾಗೂ ನಡೆಗಳಾಗಿವೆ ಎಂಬುದನ್ನು ಅರ್ಥಪಡಿಸಬೇಕಾಗಿದೆ.
ಇದಕ್ಕಾಗಿ ಎಲ್ಲಾ ಸಮುದಾಯಗಳ ಪ್ರತಿನಿಧಿಗಳು ಸಭೆ ಸೇರಿ ಚರ್ಚಿಸುವಂತಹ ಕೆಲಸಗಳು ತೀವ್ರಗೊಳ್ಳಬೇಕಾಗಿದೆ.
ಕೆಲವು ಇಂತಹ ಪ್ರಯತ್ನಗಳು ನಡೆಯುತ್ತಿವೆಯಾದರೂ ಪರಿಸ್ಥಿತಿಗೆ ಅವುಗಳು ಸಾಕಾಗುತ್ತಿಲ್ಲ

ಜೊತೆಗೆ ದಲಿತದಮನಿತರ ಜನಸಂಖ್ಯಾನುಪಾತವಾಗಿ ಅವಕಾಶಗಳ ಹೆಚ್ಚಳಕ್ಕೆ ಸರ್ಕಾರವನ್ನು ಬಲವಾಗಿ ಒತ್ತಾಯಿಸಬೇಕಾಗಿದೆ.

‘ಮೀಸಲಾತಿ’ ‘ಒಳಮೀಸಲಾತಿ’ ಪರವಾಗಿ ಇರುವ ಎಲ್ಲರೂ ಕೂಡಿ ಒಗ್ಗೂಡುತ್ತಾ ಹಂಚಿಕೊಳ್ಳುವ ಬಗೆಗಳ ಬಗ್ಗೆ ಚಿಂತನೆ ನಡೆಸುತ್ತಾ ಸರ್ಕಾರದ ಮೇಲೆ ನ್ಯಾಯಯುತ ಅವಕಾಶಗಳ ಸರಿಯಾದ ಹಂಚಿಕೆಗಾಗಿ ಒತ್ತಾಯಿಸುತ್ತಾ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಬೇಕಿದೆ.

ಇಡೀ ಸಮಾಜದ ತಳಪಾಯವಾದ ದಲಿತದಮನಿತರು ಒಗ್ಗೂಡೋದು ಬಿಟ್ಟು ಛಿದ್ರಛಿದ್ರವಾದಷ್ಟು ನಮ್ಮ ಸಮಾಜ ಮತ್ತಷ್ಟು ಮತ್ತಷ್ಟು ಹಿಂದುಳಿಯುತ್ತಾ ಹೋಗಿ ಅಪಾಯಕಾರಿ ಪರಿಸ್ಥಿತಿಗೆ ತಲುಪುವ ಪರಿಸ್ಥಿತಿ ಇದ್ದೇ ಇರುತ್ತದೆ ಎನ್ನುವುದನ್ನು ಸರಿಯಾಗಿ ಗ್ರಹಿಸಬೇಕಾಗಿದೆ.

ಇವುಗಳು ಪ್ರಗತಿವಿರೋಧಿ ಶಕ್ತಿಗಳಿಗೆ ಹೆಚ್ಚುಹೆಚ್ಚು ಅನುಕೂಲ ಮಾಡಿಕೊಡುತ್ತದೆ ಎಂಬ ಸಾಮಾಜಿಕ ಅಪಾಯವನ್ನು ಮನಗಾಣಬೇಕಿದೆ.

ಎಲ್ಲಾ ದಲಿತದಮನಿತರ, ಹಿಂದುಳಿದ ಜನಸಮೂಹಗಳ, ಅಲ್ಪಸಂಖ್ಯಾತ ಇನ್ನಿತರ ಬಡಸಮೂಹಗಳ ಐಕ್ಯತೆ ಬೆಳೆಯಲಿ..
ತಮ್ಮ ನ್ಯಾಯಬದ್ದ ಅವಕಾಶಗಳು ಮತ್ತು ಹಕ್ಕುಗಳನ್ನು ಪಡೆಯಲಿ..
ಶುಭಾಶಯಗಳು….

  • ೨೭/೦೩/೨೦೨೬. – ನಂದಕುಮಾರ್ ಕುಂಬ್ರಿಉಬ್ಬು

About Author

Leave a Reply

Your email address will not be published. Required fields are marked *

You may have missed