ತಾ ಕ ಸಾ ಪ ಕಿಗ್ಗ ಹೋಬಳಿ ಘಟಕದ ಅಧ್ಯಕ್ಷರಾಗಿ ಪ್ರದೀಪ್ ಕೂಳೆಗದ್ದೆ ಶೃಂಗೇರಿ ನಗರ ಸಂಚಾಲಕರಾಗಿ ಶ್ರೀಮತಿ ಸೌಮ್ಯ ವಿಜಯಕುಮಾರ್ ಆಯ್ಕೆ….
1 min read
ತಾ ಕ ಸಾ ಪ ಕಿಗ್ಗ ಹೋಬಳಿ ಘಟಕದ ಅಧ್ಯಕ್ಷರಾಗಿ ಪ್ರದೀಪ್ ಕೂಳೆಗದ್ದೆ ಶೃಂಗೇರಿ ನಗರ ಸಂಚಾಲಕರಾಗಿ ಶ್ರೀಮತಿ ಸೌಮ್ಯ ವಿಜಯಕುಮಾರ್ ಆಯ್ಕೆ.
ಶೃಂಗೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಿಗ್ಗ ಹೋಬಳಿ ಘಟಕ ಅಧ್ಯಕ್ಷರಾಗಿ ಹಾಲಿ ಈಗಾಗಲೇ ಕೆರೆ ಗ್ರಾಮ ಪಂಚಾಯ್ತಿ ಘಟಕದ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿರುವ ಶ್ರೀ ಪ್ರದೀಪ್ ಕೂಳೆಗದ್ದೆಯವರನ್ನು ನೇಮಕ ಮಾಡಿರುವುದಾಗಿ ತಾ ಕ ಸಾ ಪ ಅಧ್ಯಕ್ಷ ಆಗುಂಬೆ ಗಣೇಶ್ ಹೆಗ್ಗಡೆ ತಿಳಿಸಿದ್ದಾರೆ. ಶೃಂಗೇರಿ ನಗರ ವ್ಯಾಪ್ತಿಗೆ ಸಂಚಾಲಕರಾಗಿ ಇತ್ತೀಚಿಗೆ ಶೃಂಗೇರಿ ನಗರದಲ್ಲಿ ನಡೆದ ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನದ ವೇದಿಕೆ ಸಮಿತಿಯ ಸಂಚಾಲಕರಾಗಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಶ್ರೀಮತಿ ಸೌಮ್ಯ ವಿಜಯಕುಮಾರ್ ರವರನ್ನು ನೇಮಕ ಮಾಡಿರುವುದಾಗಿ ಗಣೇಶ್ ಹೆಗ್ಗಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ ಇದೇ ತಿಂಗಳ ಮಾರ್ಚ್ 29ರಂದು ಶೃಂಗೇರಿ ಕನ್ನಡ ಭವನದಲ್ಲಿ ಮಹಿಳಾ ಘಟಕದ ವತಿಯಿಂದ ಮಹಿಳಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಏರ್ಪಡಿಸಲಾಗಿದೆ ಎಂದಿದ್ದಾರೆ

