लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನವಮಾಧ್ಯಮಗಳ ತರಬೇತಿ ಶಿಬಿರ *ಇದೇ 2026ರ ಮಾರ್ಚ್ 30 ಸೋಮವಾರ* ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಗ್ಲಾಸ್ಸಿ ಕಿಡ್ಸ್ ಸದ್ವಿಧ್ಯಾ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ….

1 min read

ಅವಿನ್ ಟಿವಿ ಸುದ್ದಿಜಾಲ ✍️: ಕಾಲ ದೇಶದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿಕೊಳ್ಳದೆ ಎಲ್ಲಾ ಹಾಲನ್ನು ಕುಡಿದು ಹೇಗೆ ಜೀರ್ಣಿಸಿಕೊಳ್ಳಬೇಕು ಎಂಬುದೇ ಇಂದಿನ ನವ ಮಾಧ್ಯಮಗಳಿಗೆ ಕೃತಕ ಬುದ್ಧಿಮತ್ತೆ ಮಾಡುತ್ತಿರುವ ಪಾಠವಾಗಿದೆ.

ಚಿಕ್ಕಮಗಳೂರು ಮಾ ೨೬: ಮಾರ್ಚ್ 30ರಂದು ತರೀಕೆರೆಯಲ್ಲಿ ನಡೆಯಲಿರುವ ನವ ಮಾಧ್ಯಮಗಳ ತರಬೇತಿ ಶಿಬಿರವನ್ನು ವಿಷಯ ತಜ್ಞರಾದ ಐಐಪಿ ಪ್ರಕಾಶನದ ಸಂಸ್ಥಾಪಕ ಹಾಗೂ ಕೃತಕ ಬುದ್ಧಿಮತ್ತೆಯ ವಿಚಾರವಾಗಿ ಆಳವಾಗಿ ಅಧ್ಯಯನ ಮಾಡಿ ಪ್ರಯೋಗಶೀಲತೆಯೊಂದಿಗೆ ಕೆಲಸ ಮಾಡುತ್ತಿರುವ ಸಮಾಜಮುಖಿ ಚಿಂತನೆಧಾರೆಯುಳ್ಳ *ನಂಜೇಶ್ ಬೆಣ್ಣೂರು* ಮತ್ತು ಹಾಸನದ ನವ್ಕಿಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ತಾಂತ್ರಿಕ ಮಹಾವಿದ್ಯಾಲಯದ ಎಐ ವಿಭಾಗದಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಅನುಭವಿ ಬೋಧಕ *ಪ್ರೊ. ವಿವೇಕಾನಂದರವರು* ನವ ಮಾಧ್ಯಮ ಮತ್ತು ಕೃತಕ ಬುದ್ಧಿಮತ್ತೆಯ ಸಾಧಕ ಬಾದಕಗಳನ್ನು ಕುರಿತು ತರಬೇತಿ ಶಿಬಿರವನ್ನು ನಡೆಸಿಕೊಡಲಿದ್ದಾರೆ.

ಒಂದರ್ಥದಲ್ಲಿ ವಿಜ್ಞಾನ ಮತ್ತು ಗಣಿತವನ್ನು ಭಾರತದ ಈ ನೆಲ ಜಗತ್ತಿಗೆ ಮನಗಾಣಿಸಿದ ಬಗೆಯನ್ನು, ಮತ್ತು ಪುನಃ ಅದನ್ನು ಭಾರತದ ನೆಲದಿಂದ ನಿಂತು ಜಗತ್ತಿಗೆ ಈಗ ಮತ್ತೊಮ್ಮೆ ಹೇಗೆ ಮನವರಿಕೆ ಮಾಡಿಕೊಡಬೇಕು ಎಂಬ ಈ ಪ್ರಶ್ನೆಯನ್ನು ನಾವು ಹೊಸತಂತ್ರಜ್ಞಾನವಾದ IA (ಕೃತಕ ಬುದ್ಧಿಮತ್ತೆ) ಮುಂದೇ ಕೇಳಿದರೆ ಅದು ಏನು ಉತ್ತರ ಕೊಡುತ್ತದೆ ಎಂಬ ಕುತೂಹಲಕ್ಕೆ ಈ ಇಬ್ಬರು ವಿಷಯ ತಜ್ಞರು ಉತ್ತರದಾಯಿತ್ವವಾಗಿ ಪ್ರಯೋಗದ ಮೂಲಕ ವಿವರಿಸುತ್ತಾರೆ.

ಹೊಸ ಹೊಸ ತಂತ್ರಜ್ಞಾನಗಳು ,ಸಾಮಾಜಿಕ ಜಾಲತಾಣಗಳು, ನವ ಮಾಧ್ಯಮಗಳ ಬಳಕೆಯನ್ನು ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳಬೇಕು, ವಿನಾಕಾರಣ ಅದನ್ನು ಎದೆಗವಚಿಕೊಂಡು ಭವಿಷ್ಯದಲ್ಲಿ ಬಳಲುವಂತಾಗಬಾರದು ಎಂಬ ಒಂದು ಅವಲೋಕನದೊಂದಿಗೆ ನವಮಾಧ್ಯಮಗಳ ತರಬೇತಿ ಶಿಬಿರ *ಇದೇ 2026ರ ಮಾರ್ಚ್ 30 ಸೋಮವಾರ* ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಗ್ಲಾಸ್ಸಿ ಕಿಡ್ಸ್ ಸದ್ವಿಧ್ಯಾ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ.

ವಿದ್ಯಾರ್ಥಿಗಳು, ಪೋಷಕರು ಮತ್ತು ಯುವ ಜನರು, ಮಾಧ್ಯಮದ ಮಿತ್ರರು, ಸಾಹಿತ್ಯ ಸಂಸ್ಕೃತಿಯ ಒಡನಾಡಿಗಳು, ವಿವಿಧ ಕ್ಷೇತ್ರದ ಆಸಕ್ತರಿಗೆ ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳೊಂದಿಗೆ ನಡೆಯಲಿರುವ ಈ ಶಿಬಿರಲ್ಲಿ 90ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.

ಯಾವುದೇ ಪ್ರವೇಶ ಶುಲ್ಕವಿಲ್ಲದೆ ಹಾಗೂ ವೈಯಕ್ತಿಕವಾದ ಫಲಾಪೇಕ್ಷೆ ಇಲ್ಲದೆ ನಡೆಸುತ್ತಿರುವ ಈ ಶಿಬಿರಕ್ಕೆ ತರೀಕೆರೆ ತಾಲೂಕಿನ ಆಸಕ್ತರು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ.

ಕಾರ್ಯಕ್ರಮದ ಆಯೋಜಕರಾದ ಚಿಕ್ಕಮಗಳೂರಿನ *ಹೊನ್ನ ಬಿತ್ತೇವು ಹೊಲಕೆಲ್ಲ ಬಳಗ* ಮತ್ತು *ನ್ಯೂಸ್ ಕಿಂಗ್ ಸುದ್ದಿ ವಾಹಿನಿ* ಹಾಗೂ *ಗ್ಲಾಸಿ ಕಿಡ್ಸ್ ಸದ್ವಿಧ್ಯಾ ಪಬ್ಲಿಕ್ ಸ್ಕೂಲ್ ತರೀಕೆರೆ* ಇವರು ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಶಿಬಿರದಲ್ಲಿ ಭಾಗವಹಿಸುವ ಬಗ್ಗೆ ನೋಂದಾಯಿಸಿಕೊಳ್ಳಲು ಕೋರಿದ್ದಾರೆ.

ಎನ್.ರಾಜು 7619521477

ಮನಸುಳಿ ಮೋಹನ್ 9980113639

ಡಿ.ಆರ್.ಹರ್ಷಿಣಿ 9945101461

ಡಿ.ಎಂ.ಮಂಜುನಾಥಸ್ವಾಮಿ 9019697655
•••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …… ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed