लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮನೆಯಂಗಳಕ್ಕೆ ಮರಳಿ ಬರುವಂತಾಗುವುದು ಯಾವಾಗ ? ನಮ್ಮ ಗುಬ್ಬಚ್ಚಿಗಳು: ಇಂದು ವಿಶ್ವಗುಬ್ಬಚ್ಚಿಗಳ ದಿನ….

1 min read

ಅವಿನ್ ಟಿವಿ ಸುದ್ದಿಜಾಲ ✍️: ಮನೆಯಂಗಳಕ್ಕೆ ಮರಳಿ ಬರುವಂತಾಗುವುದು ಯಾವಾಗ ? ನಮ್ಮ ಗುಬ್ಬಚ್ಚಿಗಳು: ಇಂದು ವಿಶ್ವಗುಬ್ಬಚ್ಚಿಗಳ ದಿನ.

ಚಿಕ್ಕಮಗಳೂರು ಮಾ ೨೦: ಒಂದೆರಡು ದಶಕಗಳ ಹಿಂದಷ್ಟೇ ಮನೆಗಳ ಮುಂದಿನ ಸೂರಿನಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿ ರೆಕ್ಕೆ ಬಿಚ್ಚಿ ಚಿವ್ ಚಿವ್ ಎಂದು ಹರಡುತ್ತಿದ್ದ ಗುಬ್ಬಚ್ಚಿಗಳು ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಚಿಕ್ಕ ಮಕ್ಕಳಿಂದ ಹಿರಿಯ ವೃದ್ಧರಿಗೂ ಕೂಡ ಪ್ರಿಯವಾಗಿದ್ದ ಗುಬ್ಬಚ್ಚಿಗಳು ಭೂಮಿಯ ಮೇಲಿನ ಹಳೆಯ ಪಕ್ಷಿ ಪ್ರಭೇದಗಳಲ್ಲಿ  ಒಂದು.

ಇದು ಮನುಷ್ಯರ ನಡುವೆ ವಾಸಿಸಲು ಇಷ್ಟ ಪಡುವ ಪಕ್ಷಿ ಎನ್ನಬಹುದು. ಹಿಂದೆಲ್ಲಾ ಮನೆಯ ಸೂರಿನಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ಕುಟುಂಬದ ಸದಸ್ಯರೆನ್ನುವಂತೆ ಇದ್ದವು, ಆಧುನಿಕತೆ ಹಳ್ಳಿಯ ಅಡುಗೆಮನೆಯ ಒಳಗು ನುಗ್ಗಿದ ಕಾರಣ ಹೆಂಚಿನ ಮನೆಗಳು ಮಾಯವಾಗಿ, ಗುಬ್ಬಿಗಳು ಗೂಡು ಕಟ್ಟಲು ಜಾಗವಿಲ್ಲದೆ ಮನೆ ಅಂಗಳದಿಂದ ಮರೆಯಾಗಲು ಇದು ಒಂದು ಕಾರಣವಾಯಿತು.

ಕಾಡಿನಲ್ಲಿ ವಾಸ ಮಾಡಲು ಇಷ್ಟಪಡದ ಗುಬ್ಬಚ್ಚಿಗಳು ಎಲ್ಲಿ ಮನುಷ್ಯರು ಇರುತ್ತಾರೋ ಅಲ್ಲಿ ಅವರ ಮಧ್ಯೆ ವಾಸಿಸಲು ಇಷ್ಟಪಡುತ್ತವೆ ಎಂಬ ಸತ್ಯ ಸಂಗತಿಯನ್ನು ಮನುಷ್ಯ ಅರಿಯಲು ಮರೆತ, ಈ ಕಾರಣದಿಂದ ಅತ್ತ ಕಾಡಿನಲ್ಲಿ ಇರಲು ಇಷ್ಟಪಡದೆ ಇತ್ತ ಮನೆಯಂಗಳದಲ್ಲಿ ವಾಸಿಸಲು ಜಾಗ ಸಿಗದೆ ಪುರಾತನ ಕಾಲದಿಂದ ತಲೆಮಾರಿನಿಂದ ತಲೆಮಾರಿಗೆ ನಮ್ಮೊಡನೆ ಇದ್ದ ಗುಬ್ಬಚ್ಚಿಗಳ ಸಂತತಿ ನಿಧಾನವಾಗಿ ಕ್ಷೀಣಿಸುತ್ತಿವೆ,ಅಳಿವಿನಂಚಿಗೆ ತಲುಪಿವೆ.

ಭಾರತ ಸೇರಿದಂತೆ ಪ್ರಪಂಚದಾದಂತ್ಯ ಈ ಗುಬ್ಬಚ್ಚಿಗಳ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ಕಣ್ಮರೆಯಾಗುವ ಈ ಗುಬ್ಬಚ್ಚಿಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುವುದು ನಿಜಕ್ಕೂ ಶ್ಲಾಘನೀಯ.

ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನ (World Sparrow Day) ವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಪಕ್ಷಿ ಪ್ರಬೇಧಗಳಲ್ಲಿ ಒಂದಾದ ಈ ಗುಬ್ಬಚ್ಚಿಗಳು ಕ್ರಮೇಣವಾಗಿ ಅಳಿವಿನಂಚಿಗೆ ಸಾಗುತ್ತಿವೆ. ನಗರೀಕರಣ, ಮೊಬೈಲ್ ಟವರ್ ಗಳ ಹೆಚ್ಚಳ ಹಾಗೂ ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಪರಿಣಾಮವಾಗಿ ಗುಬ್ಬಚ್ಚಿಗಳ ಸಂತತಿಗಳು ಕಣ್ಮರೆಯತ್ತ ಸಾಗುತ್ತಿವೆ. ಹೀಗಾಗಿ ಎಲ್ಲೋ ಒಂದೆರಡು ಗುಬ್ಬಚ್ಚಿಗಳನ್ನು ಮಾತ್ರ ನೋಡುವಂತಾಗಿದೆ. ಹೀಗಾಗಿ ಈ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಪ್ರಬೇಧಗಳ ಸಂರಕ್ಷಣೆ ಹಾಗೂ ಅವುಗಳ ಸಂತತಿ ಉಳಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಗುಬ್ಬಚ್ಚಿ ದಿನ ಮಹತ್ವದ್ದಾಗಿದೆ.
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed