ದಾರದಹಳ್ಳಿ ಪ್ರೌಢಶಾಲೆಯಲ್ಲಿ ನಡೆದ ಶಾರದಾ ಪೂಜೆ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ…
1 min read
ಇಂದು ನಮ್ಮ ದಾರದಹಳ್ಳಿ ಪ್ರೌಢಶಾಲೆಯಲ್ಲಿ ನಡೆದ ಶಾರದಾ ಪೂಜೆ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ


ಹಳೆಯ ವಿದ್ಯಾರ್ಥಿಗಳ ಸಂಘದ ಪರವಾಗಿ ಭಾಗವಹಿಸಿ ಶಾಲೆಯ ಮಕ್ಕಳಿಗೆ ಒಂದೆರಡು ಹಿತವಚನ ಹೇಳಿ ಮುಂದೆ ಎದುರಿಸಲಿರುವ ಎಸ್. ಎಸ್. ಎಲ್. ಸಿ. ಪರೀಕ್ಷೆಗೆ ಎಲ್ಲರ ಪರವಾಗಿ ಶುಭ ಹಾರೈಸಲಾಯಿತು, ಹಾಗೂ ಈ ನಮ್ಮ ಶಾಲೆಗೆ ಯು.ಪಿ.ಎಸ್. ಅನ್ನು ಕೊಡುಗೆಯಾಗಿ ನೀಡಿದ ಪಟ್ಟದೂರು ಕಾಪಿ ಲಿಂಕ್ಸ್ ನ ಮಾಲೀಕರಾದ ಪುನೀತ್ ಗೌಡ ಪಟ್ಟದೂರು ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು, ಮತ್ತು ಶಾಲಾ ಮಕ್ಕಳಿಗೆ ದೈಹಿಕ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿರುವ ವಿಶ್ವನಾಥ್ ಬಿಳ್ಳೂರು, ಅವರಿಗೆ ಮತ್ತು ನಮ್ಮ ಶಾಲೆಯ ಅತಿಥಿ ಶಿಕ್ಷಕರಿಗೆ ಗೌರವಿಸಿ ಸನ್ಮಾನಿಸಲಾಯಿತು, ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ರೈತ ನಾಯಕರಾದ ಪುಟ್ಟಸ್ವಾಮಿಗೌಡರು ಹಾಗೂ ಹಳೆಯ ವಿದ್ಯಾರ್ಥಿ ಸಂದೀಪ್ ದಾರದಹಳ್ಳಿ, ಸಾಧನ ಮಣೀಶ್, ದಯಾಕರ್ ಕೋಣಗೆರೆ, ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ರಾಮಯ್ಯನವರು ಹಾಗೂ ಸದಸ್ಯರುಗಳು, ಮತ್ತು ಪೋಷಕರು,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರುಗಳು ಸಿಬ್ಬಂದಿ ವರ್ಗದವರು, ದಾರದಹಳ್ಳಿ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ದಾನಿಗಳಾದ ಸುರೇಂದ್ರ ಬಾಳೂರು, ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರಾದ ಸಿದ್ದೇಶ್ ಕೆಸವಳಲು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಮೀಯುಲ್ಲಾ ರವರು ರಮೇಶ್ ಕೆಸವಳಲು ಇವರುಗಳೆಲ್ಲರೂ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳಿಗೆ ಶುಭ ಹಾರೈಸಿರುತ್ತಾರೆ, ಈ ಒಂದು ಕಾರ್ಯಕ್ರಮಕ್ಕೆ ನಮ್ಮನ್ನೆಲ್ಲ ಆಹ್ವಾನಿಸಿದ ನಮ್ಮ ದಾರದಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಸಹ ಶಿಕ್ಷಕರುಗಳಿಗೆ ಈ ಮೂಲಕ ಧನ್ಯವಾದಗಳು ಅರ್ಪಿಸುತ್ತೇನೆ, 10ನೆಯ ತರಗತಿಯ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಮತ್ತೊಮ್ಮೆ ಈ ಮೂಲಕ ಎಲ್ಲರ ಪರವಾಗಿ ಶುಭ ಹಾರೈಸುತ್ತೇನೆ.💐🤝
ಇಂತಿ ನಿಮ್ಮ
ಬ್ರಿಜೇಶ್ ಕಡಿದಾಳು
ಅಧ್ಯಕ್ಷರು
ಹಳೆಯ ವಿದ್ಯಾರ್ಥಿಗಳ ಸಂಘ
ಸರ್ಕಾರಿ ಪ್ರೌಢಶಾಲೆ ದಾರದಹಳ್ಳಿ

