लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಬೆಟ್ಟಗೆರೆ ಯಲ್ಲಿ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ವೃತ್ತಿಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನಾ ಕಾರ್ಯಾಗಾರ….

1 min read

ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಬೆಟ್ಟಗೆರೆ ಯಲ್ಲಿ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ವೃತ್ತಿಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನಾ ಕಾರ್ಯಾಗಾರ….

ಕನ್ನಡ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆದ ಡಾ.ಹರೀಶ್ ನಲ್ಕೆ ಅವರು ದಿನಾಂಕ 13.03.2026ನೇ ಶನಿವಾರದಂದು, ಸಮಾಜಮುಖಿ ಚಿಂತಕರು ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ ಸಾರ್ ರವರು ತಾವು ಹುಟ್ಟಿ ಬೆಳೆದ ಗ್ರಾಮದಲ್ಲಿ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಸಮ- ಸಮಾಜದ ಆಶಯದೊಂದಿಗೆ ತಮ್ಮ ತಂದೆ ತಾಯಿಯ ಹೆಸರಿನಲ್ಲಿ ನಿರ್ಮಿಸಿರುವ ಶ್ರೀಮತಿ ನಿಂಗಮ್ಮ
ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಬೆಟ್ಟಗೆರೆಯಲ್ಲಿ ವಿಶೇಷವಾಗಿ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಹಾಗೂ ಪ್ರಮುಖವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಎಸ್. ಎಸ್. ಎಲ್. ಸಿ ನಂತರ ಮುಂದೇನು ಎಂಬಾ ಅರಿವು ಕಾರ್ಯಗಾರವನ್ನು ನಡೆಸಿಕೊಟ್ಟರು. ಆಸಕ್ತಿಯಿಂದ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳು ಮುಂದಿನ ಗುರಿ ಉದ್ದೇಶಗಳು ಸವಾಲುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಸ್ಪಷ್ಟವಾಗಿ ಮಾರ್ಗದರ್ಶನ ನೀಡಿದರು. ಎಸ್. ಎಸ್. ಎಲ್. ಸಿ ಪರೀಕ್ಷೆ ಎಂಬುದು ಒಂದು ಹಬ್ಬವಾಗಿದ್ದು ನಾವು ಯಾವ ರೀತಿ ಹಬ್ಬ ಹರಿದಿನಗಳಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತೇವೋ ಹಾಗೆಯೇ ಪರೀಕ್ಷೆಯನ್ನು ಸಂಭ್ರಮಿಸಬೇಕು ಆಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ .ಅದ್ದರಿಂದ ಪರೀಕ್ಷೆ ಎಂದರೆ ಭಯ ಬೇಡ. ಒಂದು ವೇಳೆ ಪರೀಕ್ಷೆಯನ್ನು ಯುದ್ಧ ಎಂದು ಪರಿಗಣಿಸಿದರೆ ಅದರಿಂದ ಸವಾಲುಗಳ ಹೆಚ್ಚು . ಹೇಗೆ ಯುದ್ಧದಿಂದ ಸಾವುನೋವು ಆಗುತ್ತವೆಯೋ ಹಾಗೆಯೇ ಭಯದಿಂದಲೇ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ಪರೀಕ್ಷೆ ಎಂದರೆ ಭಯ ಬೇಡ ಅದು ಹಬ್ಬದಂತೆ ಇರಬೇಕು ಹಾಗೂ ಸಂಭ್ರಮಿಸಬೇಕು ಆದ್ದರಿಂದ ಯಶಸ್ಸನ್ನು ಗಳಿಸಬಹುದು. ಯುದ್ಧ ಎಂದರೇ ಅನಾಹುತಗಳೇ ಜಾಸ್ತಿ, ಪರೀಕ್ಷೆ ಎಂದರೆ ಭಯಬೇಡ ಪ್ರೀತಿಯಿಂದ ಬರೆದು ಯಶಸ್ಸನ್ನು ಗಳಿಸಿ ಮುಂದಿನ ಸವಾಲುಗಳನ್ನು ಎದುರಿಸಬಹುದು ಎಂದಲ್ಲದೆ, ಎಸ್. ಎಸ್. ಎಲ್.ಸಿ ನಂತರ ಅನೇಕ ಅವಕಾಶಗಳಿವೆ ಹಾಗೆಯೇ ಎಸ್ ಎಸ್ ಎಲ್ ಸಿ ನಂತರ ಇರುವ ಹತ್ತು – ಹಲವಾರು ಕೋರ್ಸ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಬದುಕು ಎಂಬುದು ಲಿಫ್ಟ್ ಮತ್ತು ಮೆಟ್ಟಿಲು ತರಹ ಯಾರಿಗೆ ಅವಕಾಶಗಳಿರುತ್ತವೆಯೋ ಅವರು ಸರಾಗವಾಗಿ ಗಿಫ್ಟ್ ನಲ್ಲಿ ಹೋಗುತ್ತಾರೆ ಯಾರಿಗೆ ಅವಕಾಶಗಳಿರುವುದಿಲ್ಲ ಅವರು ಸ್ವತಹ ಅವರೇ ಕಷ್ಟಪಟ್ಟು ಮೆಟ್ಟಿಲಿನಲ್ಲಿ ಹತ್ತಿಕೊಂಡು ಸಾಗಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೆಲವು ಅವಕಾಶಗಳು ಕಮ್ಮಿ ಇರುವುದರಿಂದ ಅವರು ಶ್ರಮದಿಂದಲೇ ತನ್ನ ಗುರಿಯನ್ನು ಮುಟ್ಟಬೇಕು ಆ ಮೂಲಕ ನಿಮ್ಮ ತಂದೆ ತಾಯಿಗಳ ಆಸೆಯನ್ನು ಈಡೇರಿಸಬೇಕೆಂದರಲ್ಲದೇ ಅನೇಕ ಚಿಕ್ಕ ಚಿಕ್ಕ ಕೌಶಲ್ಯ ಪ್ರಯೋಗಗಳನ್ನು ವಿದ್ಯಾರ್ಥಿಗಳಿಗೆ ಮಾಡಿಸುತ್ತ್ತ ವ್ಯಕ್ತಿ ವಿಕಾಸನ ಮೂಡಿಸಿ ವೃತ್ತಿ ಮಾರ್ಗದರ್ಶನ ಮತ್ತು ಆತ್ಮ ಸಮಾಲೋಚನೆ ನಡೆಸಿಕೊಟ್ಟರು ಕಾರ್ಯಗಾರದಲ್ಲಿ ಭಾಗವಹಿಸಿ ಪ್ರೇರಣೆಗೊಂಡು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ವೇದಿಕೆಗೆ ಬಂದು ತಮ್ಮ ಜೀವನದ ಮುಂದಿನ ಗುರಿ ಉದ್ದೇಶಗಳನ್ನು ಸ್ಪಷ್ಟವಾಗಿ ಅನಿಸಿಕೆಗಳ ಮೂಲಕ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪ ಎಂ.ಎಸ್ ಶಿಕ್ಷಕರಾದ ಕಲ್ಲೇಶ್ ಎಂ, ವಿ, ಆಶಾ ಎಸ್.ವಿ ಚಿತ್ರ ಹೆಚ್. ಜಿ, ರಮ್ಯ ಎಸ್ .ಆರ್ ದೈಹಿಕ ಶಿಕ್ಷಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

ವರದಿ : ಮನೋಜ್ ಎಂ.ಬಿ ವಿಜ್ಞಾನ ಶಿಕ್ಷಕರು…..

About Author

Leave a Reply

Your email address will not be published. Required fields are marked *

You may have missed