ಜೀವ ಜಗತ್ತಿನ ಏಳ್ಗೆಗೆ ದುಡಿಯುತ್ತದೆಯೋ ಈ AI ಎಂಬ ಕೃತಕ ಬುದ್ಧಿಮತ್ತೆ ????? ಎಂಬುದು ನಮ್ಮೆಲ್ಲರ ಈ ಹೊತ್ತಿನ ಪ್ರಶ್ನೆಯಾಗಬೇಕಿದೆ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಮನುಷ್ಯನ ಸೃಜನಶೀಲತೆಯ ಮೇಲೆ ಕೆಲ ಕಾಲ ದಾಳಿ ಮಾಡಿ ಹಾಗೆ ಸುಮ್ಮನೆ ನಿರ್ಗಮಿಸುತ್ತದೆಯೋ ಅಥವಾ ಸುಮೇರು ಪರ್ವತದಂತೆ ಶಾಶ್ವತವಾಗಿ ನೆಲೆನಿಂತು ಮಾನವನ ಕಲ್ಯಾಣಕ್ಕೆ, ಜೀವ ಜಗತ್ತಿನ ಏಳ್ಗೆಗೆ ದುಡಿಯುತ್ತದೆಯೋ ಈ AI ಎಂಬ ಕೃತಕ ಬುದ್ಧಿಮತ್ತೆ ????? ಎಂಬುದು ನಮ್ಮೆಲ್ಲರ ಈ ಹೊತ್ತಿನ ಪ್ರಶ್ನೆಯಾಗಬೇಕಿದೆ.
ಚಿಕ್ಕಮಗಳೂರು ಮಾ ೧೪: ನಿರೀಕ್ಷೆಗಳು, ಕುತೂಹಲಗಳು, ಆತಂಕಗಳು, ದ್ವಂದ್ವಗಳ ಸಮ್ಮಿಶ್ರಣದೊಂದಿಗೆ ಪ್ರಾಜ್ಞರು,ಬುದ್ಧಿವಂತರು, ಮೇಧಾವಿಗಳು ಬಾಯೊಳಗಿದ್ದ AI ಎಂಬ ಕೃತಕ ಬುದ್ಧಿಮತ್ತೆ ದಿನಕಳೆದಂತೆ ಈಗ ಜನಸಾಮಾನ್ಯರ ಮೆದುಳಿನ ಒಳಗೂ ಇಳಿದು ವಿಶ್ವದ ದೊಡ್ಡಣ್ಣನಂತೆ ಇಡೀ ಮನುಷ್ಯ ಸಂಕುಲವನ್ನು ಆಳುವ ಪ್ರಯತ್ನ ಮಾಡುತ್ತಿದೆ.
ಇಂತಹ ಕೃತಕ ಬುದ್ಧಿಮತ್ತೆಯನ್ನು ಎಷ್ಟು ಬೇಕೋ ಅಷ್ಟು ಸೀಮಿತವಾಗಿ ಸ್ವೀಕರಿಸಬೇಕೊ ಅಥವಾ ಎಳೆದು ಎದೆಗವಚಿಕೊಂಡು ನಮ್ಮೊಳಗಿನ ಸೃಜನಶೀಲತೆಯನ್ನು ಬರಡು ಮಾಡಿಕೊಳ್ಳಬೇಕೋ ಇಲ್ಲವೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯವಾಗಿ ಅದನ್ನು ಒಪ್ಪಿಕೊಂಡು ಕೃತಕ ಬುದ್ಧಿಮತ್ತೆಯನ್ನು ಸಂಪೂರ್ಣವಾಗಿ ದಕ್ಕಿಸಿಕೊಳ್ಳಬೇಕೊ ಎಂಬ ಒಂದು ಹೊಸ ದೃಷ್ಟಿಕೋನದ ಅವಲೋಕನಕ್ಕೆ ನೆನ್ನೆ ಚಿಕ್ಕಮಗಳೂರಿನ ಜನತೆ ತೆರೆದುಕೊಂಡಿದ್ದಾರೆ.
ಹೊನ್ನ ಬಿತ್ತೇವು ಹೊಲಕೆಲ್ಲ ಬಳಗ ಮತ್ತು ನ್ಯೂಸ್ ಕಿಂಗ್ ಸುದ್ದಿವಾಹಿನಿಯು ಆಯೋಜಿಸಿದ್ದ ನವ ಮಾಧ್ಯಮಗಳ ತರಬೇತಿ ಶಿಬಿರದಲ್ಲಿ ಹಲವು ಮಹತ್ವದ ಸಂಗತಿಗಳು ಚರ್ಚೆಗೋಳಪಟ್ಟು ತಿಳಿವಿಗೆ ಜ್ಞಾನದ ವಿಸ್ತಾರತೆಗೆ ಈ ಶಿಬಿರ ಸಾಕ್ಷಿಯಾಯಿತು.
ಶಿಬಿರದ ಎರಡನೆಯ ದಿನವಾದ ಮಾರ್ಚ್ 15ರ ಇಂದು ಮತ್ತಷ್ಟು ವಿಚಾರಗಳಿಗೆ ಮುಖಾಮುಖಿಯಾಗಬೇಕಾಗಿದೆ.
ಚಿಕ್ಕಮಗಳೂರು ನಗರದ ರತ್ನಗಿರಿ ರಸ್ತೆಯಲ್ಲಿರುವ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯುತ್ತಿರುವ 2ನೇ ದಿನದ ನವ ಮಾಧ್ಯಮಗಳ ತರಬೇತಿ ಶಿಬಿರಕ್ಕೆ ಈಗಾಗಲೇ ನೊಂದಾವಣಿ ಮಾಡಿಕೊಂಡು ನೆನ್ನೆ ಭಾಗವಹಿಸಿದವರ ಜೊತೆಗೆ ಇತರೆ ಆಸಕ್ತರು ಕೂಡ ಇಂದು ಬೆಳಗ್ಗೆ ಘಂಟೆ 10:30 ರಿಂದ ಸಂಜೆ ಘಂಟೆ 4:00 ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಪಾಲ್ಗೊಂಡು ನವ ಮಾಧ್ಯಮಗಳ ಸಾಧಕ ಬಾಧಕಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಆಯೋಜಕರು ತಿಳಿಸಿದ್ದಾರೆ.
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

