ಸರ್ಫೇಸಿ ಕಾಯಿದೆ ರದ್ದತಿ: ಬಿಜೆಪಿ ಚುನಾವಣಾ ತಂತ್ರಗಾರಿಕೆ….
1 min read
ಸರ್ಫೇಸಿ ಕಾಯಿದೆ ರದ್ದತಿ: ಬಿಜೆಪಿ ಚುನಾವಣಾ ತಂತ್ರಗಾರಿಕೆ
ಆಲ್ದೂರು: ಕಾಫಿ ತೋಟದ ಭದ್ರತಾ ಹಿತಾಸಕ್ತಿ 2002ರ ಜಾರಿ ನಿಯಮ 8(6) ಮತ್ತು 9 ರ ನಿಯಮದಡಿ ಸಾರ್ವಜನಿಕ ಹರಾಜು ಪ್ರಕ್ರಿಯೆ ನಿಯಮವು ರೈತರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದ್ದು, ಕಾಫಿ ಬೆಳೆಗಾರರ ಒಕ್ಕೂಟದ ನಿಯೋಗ 15 ದಿನಗಳ ಹಿಂದೆ
ದೆಹಲಿಗೆ ತೆರಳಿ ಕಾಫಿ ಬೆಳೆಗಾರರು ಮತ್ತು ರೈತರಿಗೆ ಸರ್ಫೇಸಿ ಕಾಯ್ದೆ ಯಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ವಿವರಿಸಿ ತತ್ ತಕ್ಷಣ ಹರಾಜು ಮಾಡುವ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಿ ಮುಕ್ತಿ ನೀಡಬೇಕೆಂದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರಿಗೆ ವಿಶೇಷ ಮನವಿಯನ್ನು ಸಲ್ಲಿಸಿದ್ದರು. ಕೇಂದ್ರದಿಂದ ಕಾಯ್ದೆಯನ್ನು ನಿಲ್ಲಿಸಿದ್ದೇವೆ ಎಂದು ವರದಿ ಬಂದ ಹಿನ್ನೆಲೆ ರೈತರೆಲ್ಲರೂ ನಿರಾಳರಾಗಿದ್ದರು ಆದರೆ ಇನ್ನು ಕೂಡ ಸರ್ಫೇಸಿ ಕಾಯ್ದೆಯನ್ನು ಪರಿಪೂರ್ಣವಾಗಿ ರದ್ದು ಮಾಡುವ ಯಾವ ಪ್ರಕ್ರಿಯೆಗೂ ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿಲ್ಲ ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಯಥಾ ಸ್ಥಿತಿಯಲ್ಲಿ ಮುಂದುವರೆದಿದ್ದು, ಮುಂಬರುವ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸ್ಥಳೀಯ ಚುನಾವಣೆಗಳು ಸಮೀಪದಲ್ಲಿದ್ದು ರೈತರು ಮತ್ತು ಮತದಾರರಿಗೆ ದಿಕ್ಕು ತಪ್ಪಿಸಿ ಗೊಂದಲ ಮೂಡಿಸುತ್ತಿದ್ದು ,ಅದರ ಮೂಲಕ ಕ್ರೆಡಿಟ್ ಪಡೆಯುವುದಕ್ಕೋಸ್ಕರ
ಸರ್ಫೇಸಿ ಕಾಯಿದೆ ರದ್ದು ಮಾಡಿದ್ದೇವೆ ಎಂದು ಪ್ರಚಾರ
ಮಾಡಿದ್ದಾರೆ ಇದು ಕೇವಲ ಚುನಾವಣೆ ಗಿಮಿಕ್ ಮಾತ್ರ ಎಂದು ಆಲ್ದೂರು ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಎಂಬಿ. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

