ಪಾಳೆಯಪಟ್ಟು” ಕಾದಂಬರಿ ಜ.25 ರಂದು ಬೆಳಗ್ಗೆ 11 ಗಂಟೆಗೆ ಎಂಎಲ್ವಿ ರೋಟರಿ ಹಾಲ್ನಲ್ಲಿ ಲೋಕಾರ್ಪಣೆಗೊಳ್ಳಲಿದೆ ….
1 min read
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಅಕ್ಷರ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ತಾವು ರಚಿಸಿರುವ * “ಪಾಳೆಯಪಟ್ಟು” ಕಾದಂಬರಿ ಜ.25 ರಂದು ಬೆಳಗ್ಗೆ 11 ಗಂಟೆಗೆ ಎಂಎಲ್ವಿ ರೋಟರಿ ಹಾಲ್ನಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ತಿಳಿಸಿದರು.
ಅವರು ಇಂದು ವಾಹಿನಿಯೊಂದಿಗೆ ಮಾತನಾಡಿ, ಐಐಪಿ ಪ್ರಕಾಶನ ಮತ್ತು ಕರ್ನಾಟಕ ವಿಕಾಸ ರಂಗ, ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾದಂಬರಿ ಬಿಡುಗಡೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಕನ್ನಡಕ್ಕಾಗಿ ದುಡಿದ ಇಬ್ಬರು ಮಹನೀಯರಿಗೆ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗುವುದೆಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೆರೆವೇರಿಸುವರು.
ಅಧ್ಯಕ್ಷತೆಯನ್ನು ಐಐಪಿ ಪ್ರಕಾಶನದ ಅಧ್ಯಕ್ಷ ನಂಜೇಶ್ ಬೆಣ್ಣೂರು ವಹಿಸಲಿದ್ದಾರೆ. ಈ ಪುಸ್ತಕದ ಬೆಲೆಯನ್ನು 400 ರೂ.ಗಳಿಗೆ ನಿಗದಿಪಡಿಸಿದ್ದು, ಬಿಡುಗಡೆ ದಿನ ಓದುಗರಿಗಾಗಿ 300 ರೂ.ಗಳಿಗೆ ನೀಡುವುದಾಗಿ ತಿಳಿಸಿದರು.
ಪುಸ್ತಕದ ಲೋಕಾರ್ಪಣೆಯನ್ನು ಕೇಂದ್ರ ಸಾಹಿತ್ಯ
ಅಕಾಡೆಮಿ ಹಾಗೂ ನೃಪತುಂಗ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ನಾಡೋಜ ಕುಂ. ವೀರಭದ್ರಪ್ಪ ಬಿಡುಗಡೆ ಮಾಡುವರು. ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಪ್ರದಾನ
ಮಾಡಲಿದ್ದಾರೆಂದು ಮಾಹಿತಿ ನೀಡಿದರು. ಕನ್ನಡಕ್ಕಾಗಿ ದುಡಿದವರಿಗೆ ಗೌರವ ಸಲ್ಲಿಸಲಾಗುವುದು ಎಂದರು.
ವರದಿ…
ಮಂಜುನಾಥಸ್ವಾಮಿ.ಡಿ.ಎಂ.

