ಡಾ. ಶ್ರೀನಾಥ್ ಮನ್ಮಥನಾಗಿ ಬಂದು ಪ್ರಣಯರಾಜರಾದವರ ಜನುಮದಿನವಿಂದು….
1 min read
ಡಾ. ಶ್ರೀನಾಥ್
ಮನ್ಮಥನಾಗಿ ಬಂದು ಪ್ರಣಯರಾಜರಾದವರ ಜನುಮದಿನವಿಂದು
ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶುಭಮಂಗಳ, ಮಾನಸ ಸರೋವರ,ಧರಣಿ ಮಂಡಲ ಮಧ್ಯದೊಳಗೆ, ಮೊದಲಾದ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಮಾನಸ ಸರೋವರ ನಿರ್ಮಿಸಿದ ಮಿತ್ರವೃಂದ ಮೂವೀಸ್ ನಿರ್ಮಾಪಕರಲ್ಲಿ ಒಬ್ಬರು. ಕನ್ನಡದ ಕಿರುತೆರೆ ವಾಹಿನಿ ಉದಯ ಟಿವಿ ಯ ನಿರ್ವಾಹಕರಲ್ಲೊಬ್ಬರಾಗಿದ್ದರು,ಕೆ.ಎಸ್.ಎಲ್.ಸ್ವಾಮಿಯವರ ನಿರ್ದೇಶನದ ಡಾ.ರಾಜ್ ಕುಮಾರ್ ಅಭಿನಯದ “ಲಗ್ನಪತ್ರಿಕೆ ” ಚಿತ್ರದಲ್ಲಿ ಮನ್ಮಥನ ಸಣ್ಣದೊಂದು ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಡಾ. ಶ್ರೀನಾಥ್, ಚಿತ್ರರಂಗದಲ್ಲಿ 58 ವರ್ಷಗಳನ್ನು ಪೂರೈಸಿದ್ದಾರೆ , ಇವರು ಪ್ರಖ್ಯಾತ ನಟ ನಿರ್ದೇಶಕ ಸಿ.ಆರ್.ಸಿಂಹ ಅವರ ಸಹೋದರರು ಸಹ ಹೌದು ಕನ್ನಡ ಬಹುತೇಕ ಎಲ್ಲಾ ಕಲಾವಿದರ ಜೊತೆಗೆ ಉತ್ತಮ ಬಾಂಧವ್ಯದ ಜೊತೆಗೆ ಸದಭಿರುಚಿಯ ಚಲನಚಿತ್ರಗಳಲ್ಲಿ ನಟಿಸಿರುವ ಖ್ಯಾತಿವಂತರು ಡಾ. ಶ್ರೀನಾಥ್, ಇಂತಹ ಮಹಾನ್ ವ್ಯಕ್ತಿಗೆ ಜನುಮದಿನದ ಶುಭಾಶಯಗಳನ್ನು ಕೋರುವ ಮೂಲಕ ಗೌರವ ಅರ್ಪಿಸೋಣ.
ವರದಿ……
ರವಿಕುಮಾರ್. ಬೆಂಗಳೂರು.

