लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಲೆಚುಕ್ಕಿ, ಹಳದಿಎಲೆ, ಕೊಳೆರೋಗ ಕೀಟಬಾದೆಗೆ ಪರಿಹಾರ ಸಿಕ್ಕಿದೆ……

1 min read

ಎಲೆಚುಕ್ಕಿ, ಹಳದಿಎಲೆ, ಕೊಳೆರೋಗ ಕೀಟಬಾದೆಗೆ ಪರಿಹಾರ ಸಿಕ್ಕಿದೆ

ಮೂಡಿಗೆರೆ:

ಮಲೆನಾಡು ಭಾಗದಲ್ಲಿ ಅಡಕೆ ಬೆಳೆಗೆ ಹಳದಿ-ಎಲೆ, ಎಲೆಚುಕ್ಕಿ ರೋಗ ಅಪಾಯಕಾ-ರಿಯಾಗಿ ಮುನ್ನುಗ್ಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಸಿಗದೇ ಅಡಕೆ ಬೆಳೆಗಾರರು ಶೇ.70ರಷ್ಟು ಬೆಳೆ ನಷ್ಟ ಅನುಭವಿಸಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮನಗೊಂಡು ಈ ಎಲ್ಲಾ ರೋಗಗಳಿಗೆ ಸಂಜೀವಿನಿ ರೀತಿಯಲ್ಲಿ ಬಯೋಶಮನ ಔಷಧಿ ಕಂಡು ಹಿಡಿಯಲಾಗಿದೆ ಎಂದು ಹೈಟೆಕ್‌ ದೋಟಿ, ಇನಾಮಿಕ್ ಟೆಕ್ನಲಜಿ ಸಿಇಒ ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.

ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ತಾನು ಹೈಟೆಕ್ ದೋಟಿ ಕಂಡು ಹಿಡಿದ ಬಳಿಕ ಇಂತಹ ಗಂಭೀರ ಸಮಸ್ಯೆ ಮನಗೊಂಡು ಕಳೆದ 6 ವರ್ಷದಿಂದ ಬಯೋ ಟೆಕ್ನಾಲಜಿ ವಿಜ್ಞಾನಿಗಳ ಸಹಕಾರದಿಂದ ಸಂಶೋಧನೆ ನಡೆಸಿ, ನೈಸರ್ಗಿಕವಾಗಿ ಬಯೋಶಮನ ಎಂಬ ಔಷಧಿ ಕಂಡು ಹಿಡಿಯಲಾಗಿದೆ.. ಇದನ್ನು ಮೊದಲು ತನ್ನ ತೋಟ ಸೇರಿದಂತೆ ನೂರಾರು ಮಂದಿ ಕೃಷಿಕರ ತೋಟದಲ್ಲಿ ಪರೀಕ್ಷೆ ನಡೆಸಿದಾಗ ಪರಿಣಾಮಕಾ-ರಿಯಾದ ಫಲಿತಾಂಶ ಮತ್ತು ಯಶಸ್ಸು ಸಿಕ್ಕಿದೆ. ಸುಮಾರು 200 ಇಂಚು ಮಳೆ

ಬಂದಿದ್ದ ಸಿದ್ದಾಪುರದ ಕ್ಯಾದಗಿ ಎಂಬಲ್ಲಿ ಕೊಳೆರೋಗ ಮತ್ತು ಎಲೆಚುಕ್ಕಿ ರೋಗಕ್ಕೆ ನಮ್ಮ ಔಷಧಿ ಒಂದು ಬಾರಿ ಸಿಂಪಡಿಸಿದೆ ಬಳಿಕ, 3 ತಿಂಗಳು ಕೊಳೆರೋಗಕ್ಕೆ ರಕ್ಷಿಣೆ ಸಿಕ್ಕಿದೆ. ಎಲೆಚುಕ್ಕಿರೋಗ 12 ತಿಂಗಳು ಕಳೆದರೂ ಮತ್ತೆ ಮರುಕಳಿಸಿಲ್ಲವೆಂದು ಹೇಳಿದ್ದಾರೆ.

ಬಯೋಶಮನ ಔಷಧಿ ಸಿಂಪಡಿಸಿದ ಒಂದೇ ವಾರದಲ್ಲಿ ಚಿಗುರು ಹಸಿರಾಗಿ ಬರುವ ಜತೆಗೆ ಪಕ್ಕದ ಎಲೆಗಳಿಗೆ

ಹರಡುವುದಿಲ್ಲ. ನಮ್ಮ ಸಲಹೆಯಂತೆ ಸಿಂಪಡಿಸಿದ ಎಲ್ಲಾ ರೈತರಿಂದ ಉತ್ತಮ ಫಲಿತಾಂಶ ಕಂಡುಕೊಂಡಿದ್ದು, ಕೃಷಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಿಯೂ ಔಷಧಿ ಕಾರ್ಯ ವಿಫಲವಾಗಿಲ್ಲ. ಇಂತಹದೊಂದು ಔಷಧಿ ಇದೆ ಎಂದರೆ ನಂಬಲು ಸಾಧ್ಯವಿಲ್ಲ. ಇದನ್ನು ಬಳಸಿದವ ರಿಗೆ ಮಾತ್ರ ಮಹತ್ವ ಅರಿವಾಗುತ್ತದೆ. ಬಯೋಶಮನ ಔಷಧಿ ಕಾಳುಮೆಣಸು, ಕಾಫಿ ಸೇರಿದಂತೆ ಯಾವುದೇ ಪ್ಲಾಂಟೇಷನ್ ಕ್ರಾಪ್ಟನಲ್ಲಿ ಬರುವ ಫಂಗಸ್ ಸಮಸ್ಯೆ ಸೇ-ರಿದಂತೆ ತರಕಾರಿ, ಹೂವು, ಹಣ್ಣು, ಶುಂಠಿ ಸೇರಿದಂತೆ ಎಲ್ಲಾ ತರಹದ ಗಿಡಗಳಿಗೆ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.

ಮಲೆನಾಡು ಮತ್ತು ಬಯಲುಸೀಮೆಯಲ್ಲಿ ಕೀಟಬಾದೆಯಿಂದ ರೈತರಿಗೆ ಬರುವ ವಿಪರೀತ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೂ ಕೂಡ ಬಯೋಬೀಟಲ್ ಶೀಲ್ಡ್ ಎಂಬ ಔಷಧಿ ಕಂಡು ಹಿಡಿಯಲಾಗಿದೆ. ಅಡಕೆ, ಕಾಫಿ, ಕಾಳುಮೆಣಸು, ತೆಂಗು ಸೇರಿದಂತೆ ಯಾವುದೇ ಬೆಳೆಗೆ ಹಾನಿ ಮಾಡುವ ಎಲ್ಲಾ ತರಹದ ಕೀಟ ನಿವಾರಣೆಗೆ ಈ ಔಷಧಿ ಸಿಂಪಡಿಸಿದರೆ ಕನಿಷ್ಟ 6ರಿಂದ 12 ತಿಂಗಳ ವರೆಗೆ ಕೀಟಬಾದೆಯಿಂದ ತಪ್ಪಿಸಿಕೊಳ್ಳಬಹುದೆಂದು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed