ಎಲೆಮರೆ ಕಾಯಿ.ಸಾರಗೂಡು ಅಶ್ವಿನಿಸಂತೋಷ್….
1 min read
ಎಲೆಮರೆ ಕಾಯಿ.ಸಾರಗೂಡು ಅಶ್ವಿನಿಸಂತೋಷ್….


ಗಾಯನದ ಜೊತೆಗೆ ಎಲೆಮರೆ ಕಾಯಿಯಂತೆ ಸಮಾಜದಲ್ಲಿ ಬಡಮಕ್ಕಳ ಶಿಕ್ಷಣ ಮತ್ತು ಸಮಾಜದಲ್ಲಿನ ಅಸಹಾಯಕರಿಗೆ ಸಹಕಾರದೊಂದಿಗೆ ಸೇವೆ ಸಲ್ಲಿಸುತ್ತಿರುವ ನಮ್ಮ ಪೇಜಿನ ಹೆಮ್ಮೆಯ ಗಾಯಕಿ ಶ್ರೀಮತಿ ಅಶ್ವಿನಿ ಸಂತೋಷ್.ಇವರ ಸೇವೆ,ಶಿಕ್ಷಣದ ಬಗೆಗಿನ ಕಾಳಜಿ ಮತ್ತು ತಮ್ಮಲ್ಲಿರುವುದರಲ್ಲಿ ಒಂದಿಷ್ಟುನ್ನು ಸಮಾಜಕ್ಕೆ ಹಂಚಿಕೊಳ್ಳಬೇಕು ಎಂಬ ಮನೋಭಾವನೆ ಒಂದಿರುವ ಶ್ರಮಜೀವಿ, ರೈತ ಮಹಿಳೆ ಎಂದು ಗುರುತಿಸಿಕೊಂಡಿರುವ ಇವರನ್ನು ನಮ್ಮ ವಿದ್ಯಾ ಸಂಸ್ಥೆಯು ದಿನಾಂಕ 29:11:2025ರಂದು ನಡೆದ ಪೋಷಕರ ದಿನಾಚರಣೆಯಲ್ಲಿ ಅತಿಥಿಯಾಗಿ ಇವರನ್ನು ಸ್ವಾಗತಿಸಿ ಗೌರವಿಸಲಾಯಿತು ಜೊತೆಗೆ ಅದೇ ದಿನ ಮೂಡಿಗೆರೆ ತಾಲ್ಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘ ದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು……ತಮಗೆ ಅವಿನ್ ಸ್ವರ ಸಂಗಮ ಬಳಗದ ಪರವಾಗಿ ಅಭಿನಂದನೆಗಳು ನಿಮ್ಮ ಸಮಾಜಮುಖಿ ಸೇವೆ ಹೀಗೆ ಮುಂದುವರೆಯಲಿ…ನಿಮಗೆ ಮತ್ತಷ್ಟು ಸೇವೆ ಮಾಡುವ ಎಲ್ಲಾ ರೀತಿಯ ಆರೋಗ್ಯ ಭಾಗ್ಯವನ್ನು ಭಗವಂತ ಕರುಣಿಸಲಿ ಎಂದು ಆಶಿಸುತ್ತಾ ತಮಗೆ ಮತ್ತೊಮ್ಮೆ ಅಭಿನಂದನೆಗಳು.

