ತಾಲೂಕು ಪಂಚಾಯತ್ ಚುನಾವಣೆ, ಅಧಿಕಾರ ಎಂಬ ರಾಜಕೀಯ ಪಕ್ಷಗಳ ಪುಡಾರಿಗಳ ರಾಜಕೀಯ ಪುನರ್ ವಸತಿ ಕೇಂದ್ರ…..
1 min read
ತಾಲೂಕು ಪಂಚಾಯತ್ ಚುನಾವಣೆ, ಅಧಿಕಾರ ಎಂಬ ರಾಜಕೀಯ ಪಕ್ಷಗಳ ಪುಡಾರಿಗಳ ರಾಜಕೀಯ ಪುನರ್ ವಸತಿ ಕೇಂದ್ರ
ಪ್ರಜಾಪ್ರಭುತ್ವ ದಲ್ಲಿ ಗ್ರಾಮ ಪಂಚಾಯತ್ ಇಂದ ಲೋಕ ಸಭಾ ವರೆಗೂ ಹಲವು ಸ್ತರದ ಚುನಾವಣೆ ಆಯ್ಕೆ ಪ್ರಕ್ರಿಯೆಗಳಿವೆ
ಈ ಪ್ರಕ್ರಿಯೆ ಸಮಾಜದ ನಾಗರಿಕರ ಮೂಲಭೂತ ಸೌಲಭ್ಯ ಅಭಿವೃದ್ಧಿ, ಸ್ವಚ್ಛ ಆಡಳಿತದ ಪ್ರತೀಕ ವಾಗಿರಬೇಕು
ಆದರೆ ಕೆಲವೊಂದು ವ್ಯವಸ್ಥೆ ಬೇಕಾ ಅನ್ನುವುದು ಪ್ರೆಶ್ನೆ
ಇನ್ನೇನು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಬರಲಿದೆ, ಈ ತಾಲೂಕು ಪಂಚಾಯತ್ ಬರುವುದು ಜಿಲ್ಲಾ ಪಂಚಾಯತ್ ಅಡಿಯಲ್ಲಿ ಹಾಗಿದ್ದ ಮೇಲೆ ತಾಲೂಕು ಪಂಚಾಯತ್ ಗೆ ಕ್ಷೇತ್ರಗಳು ಅದಕ್ಕೆ ಚುನಾವಣೆ ಅದಕ್ಕೊಂದು ಬೇರೆ ಕಚೇರಿ ಆಡಳಿತ ಯಾಕೆ ಬೇಕು. ಇರುವ ಜಿಲ್ಲಾ ಪಂಚಾಯತ್ ಕಚೇರಿ ಜೊತೆ ತಾಲೂಕು ಪಂಚಾಯತ್ ನ merge ಮಾಡಿ single window ಆಡಳಿತ ಮಾಡಬೇಕು, ಇರುವ ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿ ಕಮ್ಮಿ ಮಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರನ್ನ ಜಾಸ್ತಿ ಮಾಡಿ ಚುನಾವಣೆ ನಡೆಸಬೇಕು
ಈ ತಾಲೂಕು ಪಂಚಾಯತ್ ಚುನಾವಣೆ ಅಧಿಕಾರ ಅನ್ನುವುದು ಸರ್ಕಾರಿ ಖರ್ಚಿಗೆ ಹೊರೆ ಬಿಟ್ಟರೆ ಅದರಿಂದ ಸಮಾಜಕ್ಕೆ ಅಂತಾ ಏನು ಉಪಯೋಗವಿಲ್ಲ
ಈ ತಾಲೂಕು ಪಂಚಾಯತ್ ಚುನಾವಣೆ ಅನ್ನುವುದು ರಾಜಕೀಯ ಪಕ್ಷಗಳ ಪುಡಾರಿಗಳಿಗೆ ರಾಜಕೀಯದ ಪುನರ್ವಸತಿ ಕೇಂದ್ರ ಆಗಿದೆ ಹೊರತು ಸಮಾಜ ಸೇವೆಗೆ ಅಲ್ಲ
ಈ ನಿಟ್ಟಿನಲ್ಲಿ ಪ್ರಜ್ಞಾವಂತ ಆಡಳಿತಗಾರರು ಹಾಗು ಸಮಾಜ ಯೋಚಿಸಿ ಈ ತಾಲೂಕು ಪಂಚಾಯ್ತಿ ಚುನಾವಣೆ ತೆಗೆದು ಜಿಲ್ಲಾ ಪಂಚಾಯತ್ ನಲ್ಲಿ ವಿಲೀನ ಮಾಡುವುದು ಒಳಿತು ಹಾಗು ತಾಲೂಕು ಕೇಂದ್ರದಲ್ಲಿರುವ ತಾಲೂಕು ಪಂಚಾಯ್ತಿ ಆಡಳಿತ ವನ್ನು ಜಿಲ್ಲಾ ಪಂಚಾಯ್ತಿ ಯಲ್ಲಿ ವಿಲೀನ ಗೊಳಿಸಿ ಖರ್ಚು ಕಮ್ಮಿ ಮಾಡಿ ಆಡಳಿತ ಸುಧಾರಣೆ ಮಾಡಿ ಜನರಿಗೆ ಹೆಚ್ಚಿನ ಸೇವೆ ಒದಗಿಸಬೇಕು
✍️ ಅವರೇಕಾಡು ಪೃಥ್ವಿ

