लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

….ನಿಧನ….

‎ಶ್ರೀಮತಿ ವಿಮಲಾ ಹಾಲಪ್ಪಗೌಡ.(64).ಇನ್ನಿಲ್ಲ…

ಚಿಕ್ಕಮಗಳೂರು   ಜಿಲ್ಲೆ, ಮೂಡಿಗೆರೆ ತಾಲೂಕಿನ ಕಸಬಾ ಹೋಬಳಿಯ ಗೌತಹಳ್ಳಿ ಗ್ರಾಮದ (ಮೂಡಿಗೆರೆ ವಿದ್ಯಾನಗರ ವಾಸಿ) ಶ್ರೀಮತಿ ವಿಮಲಾ ಹಾಲಪ್ಪಗೌಡ. ಇಂದು ಬೆಳಿಗ್ಗೆ  10.45.ಕ್ಕೆ ನಿಧನರಾಗಿದ್ದಾರೆ.

ವಿಮಲಾ ಅವರು ಗೃಹಮಂಡಳಿಯ ಮಾಜಿ ಅಧ್ಯಕ್ಷರು, ಮೂಡಿಗೆರೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು, ಹಿರಿಯ ಮುಖಂಡರಾದ ಜಿ. ಹೆಚ್‌. ಹಾಲಪ್ಪಗೌಡ ಅವರ ಧರ್ಮಪತ್ನಿ.

ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಮತಿ ವಿಮಲಾ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ವಿಮಲಾ ಅವರು ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು, ತಮ್ಮ ಪತಿ ಹಾಲಪ್ಪ ಗೌಡರ ಸಾರ್ವಜನಿಕ ಜೀವನಕ್ಕೆ ಅಪಾರ ಪ್ರೋತ್ಸಾಹ ನೀಡಿದ್ದರು.

    ಮೃತರು ಪತಿ, ಇಬ್ಬರು ಪುತ್ರರು, ತಾಯಿ, ಮೂವರು ಸಹೋದರರು ಮೂವರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಮೂಡಿಗೆರೆ ವಿದ್ಯಾನಗರದ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು. ನಾಳೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಅಂತಿಮ ಸಂಸ್ಕಾರ. ಕುದ್ರೆಗುಂಡಿಯ ಅವರ ತೋಟದಲ್ಲಿ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.

About Author

Leave a Reply

Your email address will not be published. Required fields are marked *

You may have missed