लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮತ್ತೊಮ್ಮೆ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಿದ,, ಭರವಸೆಯ ನಾಯಕಿ,..,

1 min read

‎ಮತ್ತೊಮ್ಮೆ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಿದ,, ಭರವಸೆಯ ನಾಯಕಿ,
‎   ಭರವಸೆ ನಾಯಕಿ ಎಂದರೆ ಬೇರೆ ಯಾರು ಅಲ್ಲಾ ಮೂಡಿಗೆರೆ ವಿಧಾನ ಸಭಾ ಕ್ಷೆತ್ರದ ಜನಪ್ರಿಯ ಶಾಸಕಿ ನಯನ ಮೋಟಮ್ಮ,
ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ರೈತ ಭವನದಲ್ಲಿ ವೇದಿಕೆ ಮೇಲೆ ಕೂರದೆ ಎಲ್ಲಾ ಕಾರ್ಯಕರ್ತರ ಮಧ್ಯೆ ಚೇರ್ ಹಾಕಿ ಎಲ್ಲರಲ್ಲೂ ನಾನು ಒಬ್ಬಳು ಸಮಾನತೆಯೇ ಅತೀ ಮುಖ್ಯ ಜವಾಬ್ದಾರಿ ಎಂದು ನುಡಿಯುತ್ತ, ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸುಮಾರು 4 ಘಂಟೆಗಳ ಕಾಲ  ಸಂವಾದ ನಡೆಸಿದ ಶಾಸಕಿ ನಯನ ಮೋಟಮ್ಮ ರಾಜಕೀಯದಲ್ಲಿ ಹೊಸ ಅಧ್ಯಾಯ ಶುರುಮಾಡಿದ್ದಾರೆ.
‎  ಕಾರ್ಯಕರ್ತರು ಸುಮಾರು ಅಹವಾಲು, ಪ್ರಶ್ನೆಗಳನ್ನು ಕೇಳಿದರು ತಾಳ್ಮೆಯಿಂದ ಪ್ರತಿ ಒಬ್ಬ ಕಾರ್ಯಕರ್ತರ ಸಮಸ್ಯೆ ಆಲಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು, ಮತ್ತು ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಎಲ್ಲಾ ಪಧಾಧಿಕಾರಿಗಳನ್ನು ಬದಲಾವಣೆ ಮಾಡಬೇಕು ಎನ್ನುವ ಕಾರ್ಯಕರ್ತರ ಕೂಗು ಜೋರಾಗಿತ್ತು, ಎಲ್ಲವನ್ನು ಆಲಿಸಿದ ಬಳಿಕ ಸುಮಾರು 30 ನಿಮಿಷಕ್ಕೂ ಸಮಯ ಮೀರಿ ಮಾತನಾಡಿದ ನಯನ ಮೋಟಮ್ಮ ನಾನು ಶಾಸಕಿಯಾಗಿ ಎರಡೂವರೆ ವರ್ಷಗಳು ಕಳೆದಿದೆ, ಈ ಎರೆಡೂವರೇ ವರ್ಷದಲ್ಲಿ ಸುಮಾರು ಮುನ್ನೂರು ಕೋಟಿ ಅನುದಾನ ತಂದಿದ್ದೇನೆ, ಆ ಅನುದಾನವನ್ನು ಕಳಸ, ಮೂಡಿಗೆರೆ ಮತ್ತು ಆಲ್ದೂರ್ ಬ್ಲಾಕ್ ಗಳಿಗೆ ಸಮನಾಗಿ ಹಂಚಿಕೆ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿದ್ದೇನೆ,
‎ನಾನು ಪ್ರತಿಯೊಬ್ಬ ಬೂತ್ ಅಧ್ಯಕ್ಷರು ಮತ್ತು ಹೋಬಳಿ ಅಧ್ಯಕ್ಷರು ಮತ್ತು ಬ್ಲಾಕ್ ಅಧ್ಯಕ್ಷರನ್ನು ಸಂಪರ್ಕ ಮಾಡಿಯೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿದ್ದೇನೆ, ಸುಮಾರು ಇಪತ್ತು ವರ್ಷಗಳ ಕಾಲ ನಮ್ಮ ಮೂಡಿಗೆರೆಯಲ್ಲಿ ಪಕ್ಷ ಆಡಳಿತಕ್ಕೆ ಬರಲಿಲ್ಲ ಎಲ್ಲರ ಪರಿಶ್ರಮದಿಂದ ಇಂದು ನಾವು ಆಳ್ವಿಕೆ ಮಾಡುತ್ತಾ ಇದ್ದೇವೆ, ಆದರೂ ಕೂಡ ಅಲ್ಲಲ್ಲಿ ಸ್ವಲ್ಪ ಅಪಸ್ವರಗಳು ಕೇಳಿ ಬರುತ್ತಿದೆ ಶಾಸಕರ ನಡೆ ಸರಿ ಇಲ್ಲಾ, ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲಾ ಎಂದು,, ನಾನು ನಿಮ್ಮೊಂದಿಗೆ ಸದಾ ಸಂಪರ್ಕದಲ್ಲಿ ಇದ್ದೇನೆ ನನಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಒಂದೇ, ನಾನು ಎಲ್ಲರನ್ನು ಸಮಾನವಾಗಿ ಕಾಣಬೇಕು ಅನ್ನುವ ಉದ್ದೇಶ ಹೊಂದಿದ್ದೇನೆ, ಈ ನನ್ನ ಉದ್ದೇಶ ಕೆಲವರಿಗೆ ತಪ್ಪಾಗಿ ಕಾಣುತ್ತ ಇದೆ, ಆದರೆ ನಾನು ಪಕ್ಷ ಬಳಪಡಿಸಿ ಹಾಗೂ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಇಟ್ಟುಕೊಂಡಿದ್ದೇನೆ, ಇನ್ನು ಮುಂದೆ ಆರು ತಿಂಗಳಿಗೊಮ್ಮೆ ಕಾರ್ಯಕರ್ತರ ಸಂವಾದ ಸಭೆಯನ್ನು ನಡೆಸುತ್ತೇನೆ, ಪ್ರತಿ ಗ್ರಾಮಗಳಿಗೂ ಭೇಟಿ ನೀಡುತ್ತೇನೆ, ಎಂದು ನುಡಿದರು

‎ಈ ಸಭೆಯಲ್ಲಿ ಕಳಸ ಬ್ಲಾಕ್ ಅಧ್ಯಕ್ಷ ಶ್ರೇಣಿಕ್, ಆಲ್ದುರ್ ಬ್ಲಾಕ್ ಅಧ್ಯಕ್ಷ ಮುದಾಫಿರ್ ಹಾಜರಿದ್ದರು, ಆದರೆ ಸಭೆಯಲ್ಲಿ ಮೂಡಿಗೆರೆ ಬ್ಲಾಕ್ ಅಧ್ಯಕ್ಷರು ಗೈರಾಗಿದ್ದರು ಇನ್ನುಳಿದಂತೆ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ ಸ್ವಾಗತಿಸಿದರೆ, ಮೂಡಿಗೆರೆ ಪಟ್ಟಣ ಪಂಚಾಯತ್  ಅಧ್ಯಕ್ಷರು ಆದ ವೆಂಕಟೇಶ್ ಪ್ರಾಸ್ಥಾವಿಕ ಬಾಷಣ ಮಾಡಿದರು, ಮತ್ತು ಎಲ್ಲಾ ಹೋಬಳಿ  ಅಧ್ಯಕ್ಷರು, ಪಧಾಧಿಕಾರಿಗಳು, ಎಲ್ಲಾ ಘಟಕಗಳ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಎಲ್ಲಾ ಮುಂಚೂಣಿ ನಾಯಕರು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಸಾವಿರಾರು ಜನ ಸಂವಾದ ಸಭೆಯಲ್ಲಿ ಭಾಗವಹಿಸಿದ್ದರು,

About Author

Leave a Reply

Your email address will not be published. Required fields are marked *

You may have missed