लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ವೈಜ್ಞಾನಿಕ ತಳಹದಿಯ ಮೇಲೆ ಮನುಷ್ಯನು ಬದುಕು ಮತ್ತು ಜೀವನ *

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಚಿಕ್ಕಮಗಳೂರು ಜಿಲ್ಲೆ ವತಿಯಿಂದ ನಡೆದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ವಿಜೇತ ಮಕ್ಕಳಿಗೆ ಹಾಗೂ ಸಂಯೋಜಕ ಶಿಕ್ಷಕರಿಗೆ ಅಭಿನಂದನೆ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು

ಮನುಷ್ಯ ಹಿಂದಿನ ತಾಂತ್ರಿಕತೆಯ ನಾಗಲೋಟದಲ್ಲಿ ತನ್ನತನವನ್ನೇ  ತನ್ನವರನ್ನೇ ಮರೆತು ಬದುಕುವಲ್ಲಿ ಮತ್ತು ಕ್ಷಣಿಕ ಜೀವನಕ್ಕೆ  ಮಾರು ಹೋಗಿದ್ದಾನೆ ಆದರೆ ಭವಿಷ್ಯದ ಜೀವನವು ವೈಜ್ಞಾನಿಕ ಮತ್ತು ತಾಂತ್ರಿಕತೆಯ ತಳಹದಿಯ ಮೇಲೆ ತಮ್ಮ ಬದುಕು ನಿಂತಿದೆ ಎಂಬುದನ್ನು ಹರಿಯಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಯುತ ಲೋಕೇಶ್ವರಪ್ಪ  ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ವಿಜ್ಞಾನ ತನ್ನ ಆಳ ಹರಿವನ್ನು ನಿಶ್ಚಿತತೆಯನ್ನು ಅರಿತು ಇಂದಿನ ಯುವಜನತೆ ವೈಜ್ಞಾನಿಕ ನೆಲಕಟ್ಟನ್ನು ತಿಳಿಯುತ್ತ ಸರಳ ಪ್ರಯೋಗಗಳನ್ನು ತಿಳಿಯುವುದರೊಂದಿಗೆ ಸಂಶೋಧನಾತ್ಮಕ ವಿಚಾರಗಳ ಎಡೆಗೆ ಸಾಗಬೇಕಾಗಿದೆ ಗ್ರಾಮೀಣ ಜನಾಂಗದ ಕೃಷಿ ಬದುಕಿನೊಂದಿಗೆ ಜನಜೀವನಕ್ಕೆ ಮೂಢನಂಬಿಕೆಗಳನ್ನು ಬದಿಗೊತ್ತಿ ವೈಜ್ಞಾನಿಕ ವೈಚಾರಿಕತೆಗೆ ಕರೆದುಯುವ ಕಾರ್ಯ ನಮ್ಮ ಮೇಲಿದೆ ಕೇವಲ ಕಾಲ್ಪನಿಕ ಜಗತ್ತಿನಲ್ಲಿ ಬದುಕಿನ ಹೋರಾಟವನ್ನು ಸಾಗಿಸುತ್ತಾ ತಾನು ಸಮಯ ಕಳೆಯುವ ಬದಲು ಸರ್ವರೊಳಗೊಂದಾಗಿ ಸರ್ವರಿಗೂ ಒಳಿತನ್ನು ಕೋರುವವರೊಂದಿಗೆ ನಮ್ಮ ವೈಜ್ಞಾನಿಕ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಿಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿ ದರು

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಲತಾರಾಜು ಸಾಹಿತಿಗಳು ನಾಗೇನಹಳ್ಳಿ ಮಕ್ಕಳಲ್ಲಿ ಉಲ್ಲಾಸ ದಾಯಕ ಕಲಿಕೆಗೆ ಎಲ್ಲರೂ ಪ್ರೋತ್ಸಾಹ ಕೊಡಬೇಕು ಮಕ್ಕಳ ಮನಸ್ಸು ಮುಗ್ಧವಾಗಿರುವುದರಿಂದ ಭಾವನೆಗಳನ್ನು ಅರ್ಥ ಮಾಡಿಕೊಂಡು ಪೋಷಕರು ಮತ್ತು ಶಿಕ್ಷಕರು ಸಹಕರಿಸಬೇಕು ಎಂದು ತಿಳಿಸಿದರು.  ಶ್ರೀಯುತ ಸೀಗೆಹಳ್ಳಿ ಹರೀಶ್ ಗೌರವ ಉಪಾಧ್ಯಕ್ಷರು ಕೆ ಜೆ ವಿ ಎಸ್ ಚಿಕ್ಕಮಗಳೂರು ಮಾತನಾಡುತ್ತಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಪ್ರತಿವರ್ಷವು ಸಹ ಹಲವರು ಚಟುವಟಿಕೆಗಳೊಂದಿಗೆ ಮಕ್ಕಳಗೆ ವೈಜ್ಞಾನಿಕ ವಿಚಾರಗಳನ್ನು ತಿಳಿಸುತ್ತಾ ಬಂದುತ್ತಿದೆ ಹಾಗೆಯೇ ರಾಜ್ಯ ಮಟ್ಟದ ರಸಪ್ರಶ್ನೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಅಭಿನಂದನೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ ಪ್ರೋತ್ಸಾಹ ಮುಖ್ಯವಾದದ್ದು ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಶೈಕ್ಷಣಿಕ ತಿಳುವಳಿಕೆಗೆ ಹೆಚ್ಚು ಮಾರ್ಗದರ್ಶನ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು ಕಾರ್ಯಕ್ರಮದ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ಶೇಷಪ್ಪ ಗ್ರಾಮ ಪಂಚಾಯತಿ ಸದಸ್ಯರು ಬಿಳುವಾಲ ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳು ಕೇವಲ ನಾಲ್ಕು ಗೋಡೆಗಳಲ್ಲಿ ಕಲಿಯುವುದು ಮಾತ್ರ ಅಲ್ಲ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಿಳಿಯುವುದು ಸಾಕಷ್ಟು ಇದೆ ಅದಕ್ಕೆ ಪ್ರೋತ್ಸಾಹ ಮುಖ್ಯ ಎಂದು ತಿಳಿಸಿದರು ಕಾರ್ಯಕ್ರಮದ ಕೇಂದ್ರಬಿಂದು ಹಾಸ್ಯ ಕಲಾವಿದ ಚುಟುಕು ಕವಿ ಬಿಳಿಗಿರಿ ವಿಜಯ್ ಕುಮಾರ್ ತಮ್ಮ ಹಾಸ್ಯದ ಸವಿಯೊಂದಿಗೆ ಹಾಸ್ಯ ಮನೋಭಾವ ಹೊಂದಿದವರು ಸಮಾಧಾನಕರವಾಗಿ ಶಾಂತಿ ಪ್ರಿಯರಾಗಿರುತ್ತಾರೆ ನಗುಮುಖದ ನಿತ್ಯ ಕುಸುಮಗಳಾಗಿರುತ್ತಾರೆ . ಹಾಸ್ಯ ಮಾಡುವ ಮುನ್ನ ಇತರರನ್ನ ಮನ ನೋಯಿಸದೆ ಹಾಸ್ಯಪ್ರಜ್ಞೆಯನ್ನು ತಮ್ಮಲ್ಲಿರಿಸಿಕೊಂಡು ಆಸ್ತಿ ಹೋದ ನಿತ್ಯ ಜೀವನವು ಸಂತೋಷದ ಮತ್ತು ಸದಾಭಿರುಚಿಯ ನಗು ಉಕ್ಕಿಸುವ ಆರೋಗ್ಯವನ್ನು ಕಾಪಾಡುವ ಹಾಸ್ಯ ನಾವು ನೀಡುವುದಾಗಿರಬೇಕು  ಹಾಸ್ಯದ ಒನಲನ್ನ ಬಿತ್ತರಿಸಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಮುಗಳಿಕಟ್ಟೆ ಲೋಕೇಶ್ ರವರು ಮಾತನಾಡುತ್ತಾ ಪ್ರತಿ ವಿಷಯ ವಿಚಾರ ಚಿಂತನ ಮಂಥನವಾಗುವುದರೊಂದಿಗೆ ವೈಜ್ಞಾನಿಕ ನೆಲಕಟ್ಟನ್ನು ನೋಡಬೇಕಾದ ಅಗತ್ಯ ಇಂದಿನ ಯುವಜನತೆಗೆ ಅನಿವಾರ್ಯವಾಗಿದೆ ಎಂದು ತಿಳಿಸಿದರು ನಮ್ಮ ಪೂರ್ವಜರು ಪ್ರತಿ ನಡವಳಿಕೆಯನ್ನು ಸಂಪ್ರದಾಯ ವಿಚಾರಗಳನ್ನು ವೈಜ್ಞಾನಿಕ ವಿಚಾರಗಳೊಂದಿಗೆ ಹೋರಿ ಹಚ್ಚುವ ಕಾರ್ಯ ತಮ್ಮ ನಿತ್ಯ ಜೀವನದಲ್ಲಿ ಇರುತ್ತಿತ್ತು ಈ ಕಾರಣದಿಂದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಾಮಾನ್ಯ ಜನರೊಂದಿಗೆ ಗ್ರಾಮೀಣ ಜನತೆಯೊಂದಿಗೆ ಮತ್ತು ಇಂದಿನ ಯುವಜನತೆಯೊಂದಿಗೆ ವೈಜ್ಞಾನಿಕ ಮಹತ್ವ ತಿಳಿಯುವುದರೊಂದಿಗೆ ಅದರ ಜ್ಞಾನವನ್ನು ಅರಿತು ಮಾರ್ಗದರ್ಶನ ನೀಡುವ ಕಾರ್ಯ ಇಂದಿನ ವ್ಯವಸ್ಥೆಯಾಗಿದೆ ಆದಕಾರಣ ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ತಂದುಕೊಟ್ಟ ಕೆಥಣಿ ಆಂಗ್ಲ ಮಾಧ್ಯಮ ಶಾಲೆ ಮೂಡಿಗೆರೆ ವಿದ್ಯಾರ್ಥಿ ಪ್ರಥಮ್ರವರಿಗೆ ಅಭಿನಂದಿಸುವುದರೊಂದಿಗೆ ಅನೇಕ ಶಾಲೆಗಳು ಮತ್ತು ರಸಪ್ರಶ್ನೆ ಸಂಯೋಜಕರಾಗಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಸುಮಾ ಉಮೇಶ್ ರಾವ್ ಡಾಕ್ಟರ್ ರವರು ತಮ್ಮ ಸಂಗೀತ ಲಹರಿೊಂದಿಗೆ ಮಕ್ಕಳನ್ನ ಮನರಂಜಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಸುಮಧುರ ಕಂಠದಿಂದ ಮಕ್ಕಳನ್ನ ಸಂಗೀತಕ್ಕೆ ಹೆಜ್ಜೆ ಹಾಕುವಂತೆ ಉತ್ತೇಜಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀಯುತ ರವಿಕಾಂತ್ ಪ್ರಾಂಶುಪಾಲರು  ಆರ್ ಪಿ  ಪಿಯು ಕಾಲೇಜ್ ಕಡೂರ್ ರವರು ಹಾಸ್ಯ ಮತ್ತು ಸಂಗೀತ ವಿಜ್ಞಾನ ಇವುಗಳು ಮಕ್ಕಳ ಜ್ಞಾನದ ಮೇಲೆ ವಿಜ್ಞಾನವನ್ನ ಕಲಿಸುವ ದಾರಿದೀಪ ಮಾರ್ಗದರ್ಶನದ ಮೂಲರೂಪವಾಗಿವೆ ಮಕ್ಕಳ ನಿರ್ಮಲ ಮನಸ್ಸಿನ ಮೇಲೆ ಸಂತೋಷಕರ ಕಲಿಕೆಯನ್ನು ಉತ್ತೇಜಿಸುತ್ತವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಹವಾನಿತರಾದ ಶ್ರೀಯುತ ಎಂಕೆ ದಯಾನಂದ  ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಮಂಗಳೂರು ತಾಲೂಕು ಘಟಕ ರವರು ಮಾತನಾಡುತ್ತ ನಮ್ಮ ಜಿಲ್ಲೆಯಲ್ಲಿ ವೈಜ್ಞಾನಿಕ ವಿಚಾರಗಳೆಡೆಗೆ ನಾವೆಲ್ಲರೂ ಸದಾ ಕೈ ಜೋಡಿಸುತ್ತಾ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ರಾಜ್ಯದಲ್ಲಿಯೇ ಪ್ರಥಮ ಮತ್ತು ಅತ್ಯುತ್ತಮ ಚಟುವಟಿಕೆಗಳನ್ನು ತೊಡಗಿಸಿಕೊಂಡಿರುವುದು ಪ್ರತಿ ತಾಲೂಕಿನಲ್ಲೂ ಕಂಡುಬಂದಿರುತ್ತದೆ ಈ ನಿಟ್ಟಿನಲ್ಲಿ ಸಾಹಿತ್ಯ ಸಂಗೀತ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವವರನ್ನು ಪ್ರೋತ್ಸಾಹಿಸುವುದು ಅಗತ್ಯ ಎಂದು ತಿಳಿಸಿದರು  ಕಾರ್ಯಕ್ರಮದಲ್ಲಿ ದೀಕ್ಷ ಶಾಲಾ ಶಿಕ್ಷಕರದ ನವೀನ್ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಉಪಸ್ಥಿತರಿದ್ದ ಹೊನ್ನೇ ಗೌಡ್ರು ಪ್ರಧಾನ ಕಾರ್ಯದರ್ಶಿ ಕೆಜೆ ವಿ ಎಸ್ ಚಿಕ್ಕಮಗಳೂರು, ಕೆ ಎನ್ ಮೋಹನ್ ಕೋಶಾಧ್ಯಕ್ಷರು ಕೆಜೆವಿ ಎಸ್ ಚಿಕ್ಕಮಗಳೂರು.ಬಿ ಎಲ್ ಮೋಹನ್ ಸಂಘಟನಾ ಕಾರ್ಯದರ್ಶಿ ಚಿಕ್ಕಮಗಳೂರು, ಸಿ ಪ್ರಸನ್ನ ಉಪಾಧ್ಯಕ್ಷರು  ಚಿಕ್ಕಮಗಳೂರು ಸಂಘಟನಾ ಕಾರ್ಯದರ್ಶಿ ಮಂಜಪ್ಪ ದೊಡ್ಡಮನಿ ಸಂಯೋಜಕರು ಕೃಷ್ಣಮೂರ್ತಿ ಅಧ್ಯಕ್ಷರು ಕೆ ಜೆವಿಎಸ್,ಆರ್ ಪ್ರಕಾಶ್ ಅಧ್ಯಕ್ಷರು ಕೆಜೆವಿಎಸ್ ಮೂಡಿಗೆರೆ ತಾಲ್ಲೂಕು. ಕಾಲೇಜು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಮತ್ತು ಪೋಷಕರು ಹಾಗೂ ಅಭಿನಂದನೆಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳು

‎ ಕಾರ್ಯಕ್ರಮಕ್ಕೆ ಶ್ರೀಯುತ ಎಸ್ ಶಾಂತಕುಮಾರ್ ರವರು ಸ್ವಾಗತಿಸಿ  ಜೆ, ರುದ್ರಪ್ಪ ವಂದಿಸಿದರು

About Author

Leave a Reply

Your email address will not be published. Required fields are marked *

You may have missed