लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಅಸ್ತ್ರ : ಮಿನಿತಾಮಸ್…..

1 min read

‎ಅವಿನ್ ಟಿವಿ ಸುದ್ದಿಜಾಲ.ಅ 02 ✒️:  ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಅಸ್ತ್ರ : ಮಿನಿತಾಮಸ್.
ಚಿಕ್ಕಮಗಳೂರಿನ ಸಂತ ಜೋಸೆಫ್ ಪಿಯು ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ.
‎ಕೇವಲ ಮಕ್ಕಳಿಗೆ ಶಿಕ್ಷಣ ಭೋದಿಸಿದರೆ ಸಾಲದು, ವಿದ್ಯಾರ್ಥಿಗಳ ತಂದೆ ತಾಯಿಗಳಿಗೂ  ಶಿಕ್ಷಣದ ಮಹತ್ವವನ್ನು ತಿಳಿಸುವದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಗಾಂಧೀಜಿಯವರ  ಸ್ಪಷ್ಟ ನಿಲುವಾಗಿತ್ತು, ಹಾಗಾಗಿ, ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಪ್ರಬಲವಾದ ಅಸ್ತ್ರವಾಗಿದೆ, ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ, ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ  ಸ್ನೇಹಮಯವಾಗಿರಬೇಕೆಂದು ಸಂತ ಜೋಸೆಫ್ ಪಿಯು ಕಾಲೇಜು ಪ್ರಾಂಶುಪಾಲರಾದ ಮಿನಿತಾಮಸ್ ಅಭಿಪ್ರಾಯ ಪಟ್ಟರು.
‎ನಗರದ ಸಂತ ಜೋಸೆಫ್  ಕಾಲೇಜು ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು, ಈ ಮಹನೀಯರ ಚಿತ್ರಪಟಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಮಹಾನ್ ವ್ಯಕ್ತಿಗಳ ಜಯಂತಿ, ಕೇವಲ ಒಂದು ದಿನಕ್ಕೆ  ಸೀಮಿತವಾಗಿಲ್ಲ ಪ್ರತಿದಿನವೂ  ಅವರ ತತ್ವಗಳನ್ನು ಸರಳ ಬದುಕನ್ನು ನಾವು ಅಳವಡಿಸಿಕೊಂಡಾಗ  ಮಾತ್ರ, ಯಾವುದೇ ಜಯಂತಿಗೆ ವಿಶೇಷ ಅರ್ಥ ಬರುತ್ತದೆ ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಂ. ಆರ್.ಚಂದ್ರಶೇಖರ್ ಅವರು ಗಾಂಧೀಜಿಯವರ ತತ್ವ, ಆದರ್ಶ, ಸರಳ ಬದುಕು ಜಗತ್ತಿಗೆ ಮಾದರಿಯಾಗಿದೆ, ತನ್ನ ಬದುಕನ್ನು ದೇಶಕ್ಕಾಗಿ  ಸಮರ್ಪಿಸಿ ಜೀವನಪರ್ಯಂತ ತುಂಡುಡುಗೆಯಲ್ಲಿ ಬದುಕಿದ   ಮಹಾನ್ ಚೇತನ ಎಂದು ಅಭಿಪ್ರಾಯಪಟ್ಟರು.

‎ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಪ್ರಗತಿ ಪ್ರಾಸ್ತಾವಿಕ ನುಡಿಯನ್ನು ಮಾತನಾಡುತ್ತಾ, ಗಾಂಧೀಜಿ ಮತ್ತು ಶಾಸ್ತ್ರಿಜಿ  ಅವರ  ವ್ಯಕ್ತಿತ್ವ ಸದಾಕಾಲ ಜೀವಂತ ಸೆಲೆಯೊಂದಿಗೆ ಜನಮಾನಸದಲ್ಲಿ  ಚಲಿಸುತ್ತಲೆ ಇದೆ. ಈ   ಮಹನೀಯರ  ವಿಚಾರಧಾರೆಗಳಾದ ಶ್ರಮದಾನ, ಸರ್ವೋದಯ, ಲಿಂಗ ಸಮಾನತೆ ಸ್ವಚ್ಛತೆ ಮತ್ತು ರಾಮ ರಾಜ್ಯದ ಕನಸನ್ನು ನನಸು ಮಾಡುವ  ಜವಾಬ್ದಾರಿ ನಾಗರೀಕರಾದ ನಮ್ಮೆಲ್ಲರ ಮೇಲಿದೆ ಎಂದರು.
‎ಇತಿಹಾಸ ಉಪನ್ಯಾಸಕ  ಚಂದ್ರಶೇಖರ್ ಅವರು,ಗಾಂಧೀಜಿಯವರು ಅಸ್ಪೃಶ್ಯತೆಯ ವಿರುದ್ಧ  ಧ್ವನಿ ಎತ್ತಿದ ರೀತಿಯನ್ನು ಅವರ ಸಹನಾ ಗುಣವನ್ನು,ಗಾಂಧೀಜಿಯವರ ಶಾಂತಿ ಮತ್ತು ಅಹಿಂಸಾ ತತ್ವದ ಹೋರಾಟವನ್ನು ತಿಳಿಸಿದರು.
ಕನ್ನಡ ಉಪನ್ಯಾಸಕರಾದ ಜಯಕುಮಾರ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಪ್ರಾಮಾಣಿಕ ಬದುಕು ಮತ್ತು ರಾಜಕೀಯ ಜೀವನವನ್ನು  ಕುರಿತು ಬೆಳಕು ಚೆಲ್ಲಿದರು.
ವಿದ್ಯಾರ್ಥಿಗಳಾದ ಸುಚಿತ್ರ, ಮಹಮದ್ ಗೌಸ್ ಮತ್ತು ನಿಲ್ ಫಯಾಜ್ ಧಾರ್ಮಿಕ ಸಹಿಷ್ಣತೆಯನ್ನು ಕುರಿತು ಪಠಣ ಮಾಡಿದರು.
ಇದೇ ಸಮಯದಲ್ಲಿ ಉನ್ಯಾಸಕರು ಮತ್ತು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತ ಗಾಯನ ನಡೆಯಿತು.
ಉಪನ್ಯಾಸಕರಾದ  ರಂಜಿತ, ಸುಜಾತ, ಮಮತಾ, ಗೀತಾ, ಶರತ್, ಹೇಮಂತ್, ವೇದಮೂರ್ತಿ, ಪ್ರಕಾಶ್, ಶಬರೀಶ್ ಮುಂತಾದವರು ಉಪಸ್ಥಿತರಿದ್ದರು.
•••••••••••••••••ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು.

About Author

Leave a Reply

Your email address will not be published. Required fields are marked *

You may have missed