……..ಸರ್ಕಾರದ ಈ ಸಮೀಕ್ಷೆ….
1 min read

ಸರ್ಕಾರದ ಈ ಸಮೀಕ್ಷೆ…..
ಸರ್ಕಾರ ಪದೇ ಪದೇ ರಾಜ್ಯದ ಜನರನ್ನು ಗಣತಿ ಮತ್ತು ಸಮೀಕ್ಷೆ ಮಾಡುವ ಕಾರ್ಯ ಮಾಡುತ್ತಿರುವುದು ಸ್ವಾಗತಾರ್ಹ.
ಅದರೆ ಗಣತಿಗೆ ನೂರೆಂಟು ವಿಘ್ನಗಳು ಅನ್ನುವ ಹಾಗೆ ಮೊದಲು ಆಪ್ ಡೌನ್‌ಲೋಡ್ ಆಗದೇ ತಡವಾಗಿ ನಂತರ ಹಳ್ಳಿಯಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದೆ ಗಣತಿದಾರರ ಪರಿಸ್ಥಿತಿ ನಿಜಕ್ಕೂ ಬೇಸರ ತರುತ್ತದೆ. ಒಂದು ಕಡೆಗೆ ಕೆಲವು ಗಣತಿದಾರರಿಗೆ ಮೊಬೈಲ್ ಆಫ್ ರೈಟ್ ಮಾಡೋಕೆ ಬರಲ್ಲಾ. ಅವರು ಒಬ್ಬರನ್ನ ಆಸಿಸ್ಟೆಂಟ್ ಇಟ್ಟು ಕೊಂಡು ಪರದಾಡುವ ಸ್ಥಿತಿ. ನಮ್ಮ ಮಲೆನಾಡಿನಲ್ಲಿ ಕಳೆದ ಒಂದುವಾರ ದಿಂದ ಬಾರಿ ಗಾಳಿ ಮಳೆ.
ಪ್ರತಿ ಮಗುಹುಟ್ಟಿದಾಗ ಅದರ ಜನನ ಪ್ರಮಾಣ ಪತ್ರವನ್ನು ಆರೋಗ್ಯ ಇಲಾಖೆ .ನೀಡುತ್ತದೆ.. ಅದರಂತೆ ಶಾಲೆಯಲ್ಲಿ ನಮ್ಮ ದಾಖಲೆ. ಜಾತಿ. ಧರ್ಮ. ಎಲ್ಲಾ ಮಾಹಿತಿಗಳನ್ನು ದಾಖಲೆ ಮಾಡುತ್ತಾರೆ ರೇಷನ್ ಪಡೆಯಲು ಪ್ರತಿಯೊಂದು ಕುಟುಂಬಕ್ಕೂ ರೇಷನ್ ಕಾರ್ಡ್ ಇದೆ.
ಆಹಾರ ಇಲಾಖೆ ಇದರ ಮಾಹಿತಿ ದಾಖಲು ಮಾಡಿದೆ. ಇನ್ನು ಜಮೀನು ಆಸ್ತಿ ಇದ್ದರೆ ಕಂದಾಯ ಇಲಾಖೆ. ಗ್ರಾಮ ಪಂಚಾಯತಿ ಯಲ್ಲಿ ದಾಖಲೆ ಇರುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಎಷ್ಟು ಇದೆ. ಎಲ್ಲ ಮಾಹಿತಿ ಇರುತ್ತೆ ಸುಲಭವಾಗಿ ಪಡೆಯ ಬಹುದು . ಸರಿಯಾದ ತಯಾರಿ ನಡೆಸದೆ. ನಾವು 5 ಜೀ ಯುಗದಲ್ಲಿ ಇದ್ದೀವಿ ಅಂತೀರಿ ಅಷ್ಟೇ . ಇನ್ನೂ ಎಷ್ಟೋ ಹಳ್ಳಿಯಲ್ಲಿ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಇಲ್ಲ ಇದರ ನಡುವೆ .ಈ ಸರ್ಕಾರ ಕೋಟಿ ಕೋಟಿ ಖರ್ಚು ಮಾಡಿ ಒಂದು ಸಲ ಜಾತಿ ಗಣತಿ .ಇನ್ನೊಂದು ಸಲ ಎಲ್ಲಾ ಜಾತಿಯ ಗಣತಿ ಸಮೀಕ್ಷೆ. ನಡೆಸುತ್ತ ಇದ್ದು ಇದನ್ನು ಆಯಾ ಜಾತಿಯ ನಾಯಕರು ಒಳ ಪಂಗಡಗಳನ್ನು ಬರೆಸಿ ಅಂತ ಪ್ರಚಾರ ಮಾಡುವ. ಜೊತೆಗೆ ಮತಾಂತರದವರು ಬೌದ್ಧ. ಕ್ರಿಶ್ಚಿಯನ್. ಹೀಗೆ ಮುಂತಾದ ಜಾತಿಗಳನ್ನು ಸೇರಿಸಿಕೊಂಡು. ನೂರೆಂಟು ಗೊಂದಲದಲ್ಲಿ ಏನೋ ಅರಿಯದ ಮುಗ್ಧ ಜನ ಗಣತಿದಾರರ ಪ್ರಶ್ನೆಗೆ . ಹೌದು. ಇಲ್ಲ ಹೌದು ಇಲ್ಲ ಅಂತ ಹೇಳಿ ಯಾರದೂ ದುಡ್ಡು ಎಲ್ಲಮ್ಮ ನ ಜಾತ್ರೆ. ಆಗದೇ ಸರ್ಕಾರದ ದುಡ್ಡು ಸರಿಯಾಗಿ ಬಳಕೆಯಾಗಬೇಂಬ ಬಯಕೆ ನನ್ನದು .ನಮ್ಮ ಹಳ್ಳಿಯ ಜನ ಶೇಕಡಾ 80% ಕೂಲಿ ಕಾರ್ಮಿಕರು ಬೆಳಗ್ಗೆ 8 ಘಂಟೆ ಗೆ ಮನೆಯಿಂದ ಕೆಲಸಕ್ಕೆ ಹೊರಟರೆ ಬರುವುದು ಸಂಜೆ . ಬಹುತೇಕ ಮನೆಗಳಲ್ಲಿ ಬಾಗಿಲು ಬೀಗ ಹಾಕಿರುತ್ತೆ. ಇಲ್ಲ ಮಕ್ಕಳು ಮಾತ್ರ ಇರುತ್ತಾರೆ. ಯಾವುದೇ ಮಾಹಿತಿ ಸಿಗುವುದಿಲ್ಲ. ಹಾಗಾಗಿ ಮಲೆನಾಡಿನ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಜಾಸ್ತಿ ಇದೆ ಶಾಲಾ ಶಿಕ್ಷಕರನ್ನು ಗಣತಿಗೆ ಬಳಸಿಕೊಂಡಿದ್ದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಹುತೇಕ ಒಂದು ಎರಡು ಶಿಕ್ಷಕರು ಇದ್ದರೆ ಅಷ್ಟೆ.ಹಾಗಾಗಿ ದಸರ ರಜೆಯನ್ನು ಇನ್ನೂ ಒಂದು ವಾರ ವಿಸ್ತಾರ ಮಾಡಿ ಸಮೀಕ್ಷೆ ಪಾರದರ್ಶಕ ವಾಗಿ ನಡೆಯಬೇಕು
ಲೋಕೇಶ್ ಬೆಟ್ಟಗೆರೆ
ಅಧ್ಯಕ್ಷರು ಕ. ಸಾ. ಪ.
ಬಣಕಲ್

