ಕೆರೆಗೆ ವಿಷ ಹಾಕಿದ ಶಂಕೆ – ಸಾವಿರಾರು ಮೀನುಗಳ ಮಾರಣ ಹೋಮ..
1 min read


ಮೂಡಿಗೆರೆ.ತಾಲೂಕ್ .ಕಿರಗುಂದ..
ಕೆರೆಗೆ ವಿಷ ಹಾಕಿರುವ ಪರಿಣಾಮ ಸಾವಿರಾರು ಮೀನು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದಲ್ಲಿ ನಡೆದಿದೆ. ಅಪರಿಚಿತರು ಕೆರೆಗೆ ವಿಷ ಹಾಕಿದ ಶಂಕೆ ವ್ಯಕ್ತವಾಗಿದೆ.
ಪರಿಣಾಮವಾಗಿ ಸಾವಿರಾರು ಮೀನುಗಳು ಸತ್ತು ಕೆರೆಯಲ್ಲಿ ತೇಲಾಡುತ್ತಿವೆ. ಗ್ರಾಮದ ಧರ್ಮೇಂದ್ರ ಆಚಾರಿ ಅವರಿಗೆ ಸೇರಿದ ಕೆರೆಯಲ್ಲಿ ಲಕ್ಷಾಂತರ ಮೌಲ್ಯದ ಮೀನುಗಳು ಬೆಳೆಯುತ್ತಿದ್ದವು, ಕಳೆದ ರಾತ್ರಿ ನೀರಿನಲ್ಲಿ ವಿಷ ಬೆರೆತಿರುವ ಪರಿಣಾಮ ಮೀನುಗಳ ಮಾರಣ ಹೋಮ ನಡೆದಿದೆ.
ಘಟನೆ
ಯ ಕುರಿತು ಧರ್ಮೇಂದ್ರ ಆಚಾರಿ ಗೋಣಿಬೀಡು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

