ಕಾಡು ಮತ್ತು ಕಾಡಿನೊಳಗಿರುವ ವನ್ಯಜೀವಿಗಳ ಸೌಂದರ್ಯದ ಪ್ರಜ್ಞೆಯೇ ಬೇರೆ….
1 min read
ಕಾಡು ಮತ್ತು ಕಾಡಿನೊಳಗಿರುವ ವನ್ಯಜೀವಿಗಳ ಸೌಂದರ್ಯದ ಪ್ರಜ್ಞೆಯೇ ಬೇರೆ….
ಕಾಡು ಎಷ್ಟೇ ಪ್ರಶಾಂತವಾಗಿದ್ದರು ಸಹ ಅಲ್ಲಿನ ಸೌಂದರ್ಯಕ್ಕೆ ಕಾಡಿನ ಪ್ರಾಣಿಗಳು ಮನಸೋತು ಮಲಗುವಂತಿಲ್ಲ, ಇಲ್ಲಿ ಸಾವು ಬದುಕಿನ ನಡುವೆ ಒಂದು ನಿತ್ಯ ಹೋರಾಟ ನಡೆಯುತ್ತಲೇ ಇರುತ್ತದೆ,ಒಂದು ವೇಳೆ ವನ್ಯಜೀವಿಗಳು ಮೈ ಮರೆತು ಮಲಗಿದರೆ ಅಥವಾ ಕಣ್ಮುಚ್ಚಿ ಕುಳಿತರೆ ಪ್ರಾಣಕ್ಕೆ ಕುತ್ತು ಗ್ಯಾರೆಂಟಿ.
ಅನ್ಯೋನ್ಯತೆಯಿಂದಿರುವ ಈ ವನ್ಯಜೀವಿಗಳ ಮನಮೋಹಕ ಸೌಂದರ್ಯ ನೋಡುಗರಿಗೆ ಅಮೋಘ ಮತ್ತು ಅಪ್ಯಾಯಮಾನ.
ಇಂತಹ ಮನಮೋಹಕ ದೃಶ್ಯವನ್ನು ಸೆರೆಹಿಡಿಯುವುದೆಂದರೆ ಅದೊಂದು ಧ್ಯಾನವಿದ್ದಂತೆ.
ದಟ್ಟಾರಣ್ಯದಲ್ಲಿ ಕಾಣಸಿಗುವ ಇಂಥಹ ಯಾವುದೇ ವನ್ಯಜೀವಿಗಳು ಮನುಷ್ಯರ ಹಾಗೆ ದಡೂತಿ ಅಥವಾ ಬಡಕಲು ಆಗಿರುವುದಿಲ್ಲ, *Slim & Fit* ಆಗಿ ಕಾಣುತ್ತವೆ. *Slim & Fit* ಗಾಗಿ ಈ ಮನುಷ್ಯರು ಇಂದು ತಮ್ಮ ದೇಹಕ್ಕೆ ಏನೇನೋ ಕಸರತ್ತು ಮಾಡುತ್ತಿದ್ದಾರೆ.
*Slim & Fitness* ಅಂದರೆ ಏನು ಎಂದು ? ಆರೋಗ್ಯದ ಬಗ್ಗೆ ಪಾಠ ಮಾಡುತ್ತಿರುವ ಕಾಡು ಪ್ರಾಣಿಗಳು ಮನುಜರಿಂದ ದುರಂತಮಯವಾಗದಿರಲಿ. ಪರಿಸರ ಪ್ರಕೃತಿಯೆಂದರೆ ಮನುಷ್ಯರೂ ಕೂಡ ಅದರ ಒಂದು ಭಾಗ ಎಂಬ ಅರಿವಿರಲಿ.
ಚಿತ್ರ ಕೃಪೆ:Ba kelley, ಕೀನ್ಯಾ.
••••••••••••
ಡಿ.ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

