ಗಿರಿದರ್ಶಿನಿ ಹಾಸ್ಟೆಲ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ…. Vh
1 min read

ಗಿರಿದರ್ಶಿನಿ ಹಾಸ್ಟೆಲ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ….
ಮೂಡಿಗೆರೆ ಪಟ್ಟಣದ ಗಿರಿದರ್ಶಿನಿ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಇಂದು ಶುಕ್ರವಾರ ಸಂಜೆ 6-30ಕ್ಕೆ ನಡೆಯಿತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆ ಎಂ ಎಫ್ ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ವಿಶ್ವನಾಥ್ ಎ ಮಾತನಾಡಿ -ಭಾರತ ಸಂವಿಧಾನದಲ್ಲಿ ಎಲ್ಲದಕ್ಕೂ ಮುಕ್ತ ಅವಕಾಶ ನೀಡಿದೆ ಆದರೆ ಕಾನೂನನ್ನು ಸರಿಯಾದ ರೀತಿಯಲ್ಲಿ ಅರಿತುಕೊಂಡು ಸಮಾಜದಲ್ಲಿ ನೀವೆಲ್ಲ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕಾಗಿದೆ ಅದಕ್ಕಾಗಿ ಇಂತಹ ಕಾನೂನು ಅರಿವು ಕಾರ್ಯಕ್ರಮ ನಿಮಗೆ ದೊರಕಿಸಿಕೊಡಲಾಗಿದೆ ಎಂದರು,
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಸುರಕ್ಷಾ ಕೆ ಕೆ ಮಾತನಾಡಿ – ವಿಧ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾದ ಕಾರ್ಯಕ್ರಮ ಆಗಿದೆ ಇಲ್ಲಿ ಒಂದಷ್ಟು ಅರಿವನ್ನು ಪಡೆದುಕೊಂಡು ಈ ಸಮಾಜದಲ್ಲಿ ನಡೆಯುವಂತ ಕೆಟ್ಟ ಅನಾಚಾರಗಳ ವಿರುದ್ಧ ಹೋರಾಡುವುದು ಹೇಗೆ ಇದರಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ತಿಳಿಯಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ವಕೀಲರಾದ ಚಂದ್ರಶೇಖರ್ ಕೆ ಸಿ – ಕಾನೂನು ಸೇವಾ ಸಮಿತಿ ಯ ಉದ್ದೇಶ ಹಾಗೂ ಗುರಿಗಳು ಜೊತೆಗೆ ಪೋಕ್ಸೊ ಪ್ರಕರಣದ ಬಗ್ಗೆ ಮಾಹಿತಿ ನೀಡಿ ವಿಧ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ನೀಡಿದರು.
ಕಾರ್ಯಕ್ರದಲ್ಲಿ ವಕೀಲರ ಸಂಘದ ಅಧ್ಯಕ್ಷರು ದೇವರಾಜ್ ಮಾತನಾಡಿದರು, ವಕೀಲರ ಸಂಘದ ಕಾರ್ಯದರ್ಶಿ ಎಂ ಎಂ ರಾಘವೇಂದ್ರರವರು ಮಾತನಾಡಿದರು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್ ಸೋಮಶೇಖರಪ್ಪ ವಹಿಸಿದ್ದರು.
ಬಕ್ಕಿ ಮಂಜುನಾಥ್, ನಿಲಯ ಪಾಲಕರು ಪ್ರಸಾದ್ ಉಪಸ್ಥಿತರಿದ್ದರು,

