ವಿದ್ಯಾ ಗಣಪತಿ ಸೇವಾ ಸಮಿತಿ ಹಾಗೂ ಸ್ಥಳೀಯ ಮುಖಂಡರು ಹಬ್ಬದ ಮೆರವಣಿಗೆಯಲ್ಲಿ ಸಾಗುತ್ತಿದ್ದ ಮುಸ್ಲಿಂ ಭಾಂದವರಿಗೆ ಹಣ್ಣು ಹಂಪಲು ವಿತರಿಸಿದರು…..
1 min read
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮುಸ್ಲಿಂ ಭಾಂದವರು ಬೆಳಿಗ್ಗೆಯಿಂದಲೇ ಪ್ರಾರ್ಥನೆಗಳಲ್ಲಿ ಭಾಗವಹಿಸಿ ನಂತರ ಧಾರ್ಮಿಕ ಗೀತೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಈ ಸಂಭ್ರಮದ ನಡುವೆ ಉಪ್ಪಳ್ಳಿಯಲ್ಲಿ ಸೌಹಾರ್ದಯುತ ದೃಶ್ಯ ಎಲ್ಲರ ಗಮನ ಸೆಳೆಯಿತು. ವಿದ್ಯಾ ಗಣಪತಿ ಸೇವಾ ಸಮಿತಿ ಹಾಗೂ ಸ್ಥಳೀಯ ಮುಖಂಡರು ಹಬ್ಬದ ಮೆರವಣಿಗೆಯಲ್ಲಿ ಸಾಗುತ್ತಿದ್ದ ಮುಸ್ಲಿಂ ಭಾಂದವರಿಗೆ ಹಣ್ಣು ಹಂಪಲು ವಿತರಿಸಿದರು.
ಇದನ್ನು ಸ್ವೀಕರಿಸಿದ ಮುಸ್ಲಿಂ ಭಾಂದವರು ಕೃತಜ್ಞತೆ ಸಲ್ಲಿಸಿ ಮುಂದೆ ಸಾಗಿದರು. ಹಬ್ಬ ಎಂದರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಹೃದಯಗಳನ್ನು ಹತ್ತಿರಗೊಳಿಸುವ ಸೇತುವೆ ಎಂಬುದನ್ನು ಈ ಕ್ಷಣ ಸಾಭೀತು ಮಾಡಿದಂತೆ ಇತ್ತು. ಪ್ರತಿ ವರ್ಷವೂ ಉಪ್ಪಳ್ಳಿಯಲ್ಲಿ ನಡೆಯುವ ಈ ಆಚರಣೆ ಸೌಹಾರ್ದತೆಯ ಪ್ರತೀಕವಾಗಿದೆ,,,

