ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ಮಿಸಿ ಬಹುಮಾನ ಗೆಲ್ಲಿ” ಕಾರ್ಯಕ್ರಮ…..
1 min read
ಹಸಿರು ಫೌಂಡೇಶನ್ ವತಿಯಿಂದ ಪರಿಸರ ಸಂರಕ್ಷಣೆ ಹಾಗೂ ಕಾಳಜಿ- 2025 ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ “ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ಮಿಸಿ ಬಹುಮಾನ ಗೆಲ್ಲಿ” ಕಾರ್ಯಕ್ರಮ

ಸ್ಕೌಟ್ಸ್ ಭವನ ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು..ಕಾರ್ಯಕ್ರಮದ ಅಧ್ಯಕ್ಷತೆ ರತನ್ ಊರುಬಗೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ ಸದಸ್ಯರಾದ ವಾಗ್ಮಿ ಸಿ ಟಿ ರವಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಕೃತಿಯೇ ದೇವರು ಪ್ರಕೃತಿ ಪೂಜಿಸಿ ಅಳಿಲು ಸೇವೆ ಮಾಡುತ್ತಿರುವ ಹಸಿರು ಫೌಂಡೇಶನ್ ಸಂಸ್ಥೆ ಇನ್ನಷ್ಟು ಉಜ್ವಲವಾಗಿ ಬೆಳೆಯಲಿ, ಸಾಕಷ್ಟು ವಿಭಿನ್ನ ರೀತಿಯ ಕಾರ್ಯಗಳನ್ನು ಕೈಗೊಳ್ಳಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಲ್ಲರೂ ಕೈ ಜೋಡಿಸಬೇಕು ಎಂದರು..
ಎ ಎನ್ ಮಹೇಶ್ ಸ್ಕೌಟ್ಸ್ ಮಾತನಾಡಿ ಪರಿಸರಕ್ಕೆ ಪೂರಕವಾದ ಗಣೇಶ ಮೂರ್ತಿಗಳನ್ನು ಬಳಸಬೇಕು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಇದಾಗಿದೆ ಮುಂದಿನ ದಿನಗಳಲ್ಲಿ ಒಟ್ಟಿಗೆ ಎಲ್ಲರೂ ಸೇರಿ ಇಂತಹ ಒಳ್ಳೆ ಕಾರ್ಯ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಎಲ್ಲ ವಯೋಮಾನದದವರು ಪಾಲ್ಗೊಂಡಿದ್ದರು ನೂರಾರು ವಿದ್ಯಾರ್ಥಿಗಳು, ಸ್ಥಳೀಯರು ಭಿನ್ನ ವಿಭಿನ್ನವಾದ ಗಣೇಶನ ಮೂರ್ತಿಗಳನ್ನು ನಿರ್ಮಿಸಿದ್ದು ವಿಶೇಷವಾಗಿತ್ತು..
ಚಿಕ್ಕ ಚಿಕ್ಕ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು.. ಪ್ರಥಮ ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಹಿರಿಯರು ಹಾಗೂ ಕಿರಿಯರು ವಿಭಾಗ ಮಾಡಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವಕರ್ಮ ಆಚಾರ್ಯ, ಕುರುವಂಗಿ ವೆಂಕಟೇಶ್, ಕಲಾವಿದರಾದ ನವೀನ್ ಆಚಾರ್ಯ, ಶಿಕ್ಷಕರಾದ ರವಿ ಕುಮಾರ್, ಸತ್ಯ ಪ್ರಕಾಶ್ ,ಸ್ಕೌಟ್ಸ್ ಗೈಡ್ ಮಮತಾ ಮೇಡಂ ರವರು ಕಿರಣ್ ಸ್ಕೌಟ್ಸ್ ಮ್ಯಾನೇಜರ್ ವಿದ್ಯಾರ್ಥಿಗಳ ಪೋಷಕರು ಹಾಗೂ ಹಸಿರು ಫೌಂಡೇಶನ್ ಉಪಾಧ್ಯಕ್ಷರಾದ ವಿನುಪ್ರಸಾದ್ ಹೆಗ್ಗುಡ್ಲು, ಕಾರ್ಯದರ್ಶಿ ಅಭಿಜಿತ್ ಹೆಡದಾಳು, ಫೀಲ್ಡ್ ಕೋರ್ಡಿನೆಟರ್ ಅದೀಪ್ ಊರುಬಗೆ , ನಿರ್ದೇಶಕರಾದ ಪ್ರದೀಪ್ ಊರುಬಗೆ, ಸಚಿನ್ ದುರ್ಗದಹಳ್ಳಿ ಭಾಗವಹಿಸಿದ್ದರು. ನಗದು ಬಹುಮಾನವನ್ನು ಸಮಾಜ ಸೇವಕರು ಹಸಿರು ಫೌಂಡೇಶನ್ ಸಲಹಾ ಸಮಿತಿ ಸದಸ್ಯರಾದ ರುದ್ರೇಶ್ ಕಹಳೆಯವರು ನೀಡಿದರು.. ಅವರಿಗೆ ಈ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಅಭಿನಂದನೆ ಸಲ್ಲಿಸಿದರು

