लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ತಿಂಗಳ ಸಾಹಿತ್ಯ ಮತ್ತು ಕಲಾವಿದರಿಂದ ಗಣಪತಿ ಸನ್ನಿಧಿಯಲ್ಲಿ ಮನರಂಜನೆ…..

1 min read

ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ವತಿಯಿಂದ ನಡೆದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಮತ್ತು ಕಲಾವಿದರಿಂದ ಗಣಪತಿ ಸನ್ನಿಧಿಯಲ್ಲಿ ಮನರಂಜನೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ತಾಲೂಕು ಅಧ್ಯಕ್ಷರಾದ ಡಿ. ಕೆ. ಲಕ್ಷ್ಮಣ್ ಗೌಡ ಇದು ಉತ್ತಮ ಕಾರ್ಯಕ್ರಮ ಕಲಾವಿದರ ಸಂಗಮ ವಿಶೇಷವಾಗಿತ್ತು. ಗಣಪತಿ ಮುಂದೆ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ಆಗಬೇಕು ಕನ್ನಡದ ಕಂಪು ಎಲ್ಲೆಡೆಗೂ ಹರಡಲಿ ಎಂದು ಅಭಿಪ್ರಾಯ ಪಟ್ಟರು. ದಲಿತ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷರಾದ ಪಿ. ಕೆ. ಮಂಜುನಾಥ ಮಾತನಾಡಿ ಜಾನಪದ ಬೇರು ಹಳ್ಳಿಗಳು. ಕೋಲಾಟ. ಗದ್ದೆ ನಾಟಿ ಪದ. ರಾಗಿ ಬೀಸುವ ಕಲ್ಲಿನ ಪದ. ಒಕ್ಕಲಾಟದ ಹಾಡುಗಳು. ಮದುವೆ ಶಾಸ್ತ್ರ ದ ಹಾಡುಗಳು ಮುಂತಾದ ಅನೇಕ ಜಾನಪದ ಗೀತೆಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಬಣಕಲ್ ಕನ್ನಡ ಸಾಹಿತ್ಯ ಪರಿಷತ್ತು ಮರು ಜೀವ ತುಂಬುವ ಕೆಲಸ ಮಾಡುತ್ತ ಇದೇ ಎಂದು ನಾನು ಬಾವಿಸುತ್ತೆನೆ ಎಂದರು. ಇದೇ ಸಂದರ್ಭದಲ್ಲಿ ಚಂದನ ವಾಹಿನಿ .ಗಾಯಕ.ಹಾಗೂ ರಾಜ್ಯ ರಾಷ್ಟ್ರ ಮಟ್ಟದ ಗಾಯಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಲೋಕೇಶ್ ಬೆಟ್ಟಗೆರೆ ಅಧ್ಯಕ್ಷತೆ ವಹಿಸಿದ್ದು ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಚ್ಚಿನ್. ಕನ್ನಡ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷ ರವಿ ಹಂತುರು. ರಾಜ್ಯ ಮಟ್ಟದ ಗಾಯಕರಾದ ರವೀಂದ್ರ ಬಕ್ಕಿ. ಚಂದನ ವಾಹಿನಿಯ ಗಾಯಕರಾದ ವೆಂಕಟೇಶ ಕೆಸವಳಲು. ಕಣಚೂರು ಆನಂದ. ರಾಮಚಂದ್ರ. ರಂಜಿತ್ ಕೂಗೀಲೆ. ರಘ. ಗಣಪತಿ ಗೌಡ್ರು. ಜೈಕರ್ ಗೌಡ್ರು. ರವಿಗೌಡ್ರು. ರಾಮಕೃಷ್ಣ ಗೌಡ್ರು. ಸಂಗಮ. ಪ್ರಜ್ವಲ್. ವೇದ ರಮೇಶ್. ಇದ್ದರು ಕ. ಸಾ. ಪ. ಗೌರವ ಕಾರ್ಯದರ್ಶಿ .ಶ್ರೀಜಿತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

About Author

Leave a Reply

Your email address will not be published. Required fields are marked *

You may have missed