ಪಾಂಚಜನ್ಯದಲ್ಲಿ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ
1 min read

ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಚಿಕ್ಕಮಗಳೂರು ಬಿಜೆಪಿ ಪಕ್ಷದ ಕಛೇರಿ ಪಾಂಚಜನ್ಯದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ..
25 ವರ್ಷಗಳಿಂದ ಸತತವಾಗಿನಡೆದು ಬರುತ್ತಿರುವ ವರಮಹಾಲಕ್ಷ್ಮಿ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ಲೋಕೇಶ್ ಹಾಗೂ ದಂಪತಿಗಳು ಪೂಜೆ ಸಲ್ಲಿಸಿದರು..
ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ದೇವರಾಜ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವಸಂತ ಅನಿಲ್ ಕುಮಾರ್, ಜಿಲ್ಲಾ ಖಜಾಂಜಿಗಳು ಮಹಿಳಾ ಮೋರ್ಚಾ ಜಿಲ್ಲಾ ಪ್ರಭಾರಿಗಳು ನಾರಾಯಣ ಗೌಡ್ರು, ದಿಕ್ಸೂಚಿ ಭಾಷಣಕರರಾದ ಎಸ್.ಟಿ.ಜಿ.ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಭಾರತೀ, ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಪವಿತ್ರ, ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸರೋಜಾ ಸುರೇಂದ್ರ, ಚಿಕ್ಕಮಗಳೂರು ಗ್ರಾಮಾಂತರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಲೀಲಾ ಪರಮೇಶ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶೃತಿ ರೋಹಿತ್ ಹಾಗೂ ರಾಜೇಶ್ವರಿ ರಾಜಶೇಖರ್ , ಪಲ್ಲವಿ ಸಿ.ಟಿ.ರವಿ ,ಜಿಲ್ಲಾ ಉಪಾಧ್ಯಕ್ಷರಾದ ವೀಣಾ ಶೆಟ್ಟಿ, ಮಧುರಾಜ್ ಅರಸು, ಕಾರ್ಯಾಲಯ ಕಾರ್ಯದರ್ಶಿ ದುರ್ಗೇಶ್ ಸೇರಿದಂತೆ ಜಿಲ್ಲಾ ಹಾಗೂ ರಾಜ್ಯ ಸ್ತರದ ಪದಾಧಿಕಾರಿಗಳು ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು…ಕಾರ್ಯಕ್ರಮದ ನಿರೂಪಣೆಯನ್ನು ಶ್ರುತಿ ರೋಹಿತ್ ಅವರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದರು,,
ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು,,, ಎಲ್ಲರೂ ಕೂಡ ಸೀರೆಯನ್ನಟ್ಟು ಮಹಾಲಕ್ಷ್ಮಿಯರಂತೆ ಕಾಣುತಿದ್ದರು,,, ಬಂದವರಿಗೆ ಎಲ್ಲರಿಗೂ ಕೂಡ ತಾಂಬೂಲ ಕೊಟ್ಟು ಕಾರ್ಯಕ್ರಮವನ್ನು ಇನ್ನಷ್ಟು ಮೆರಗುಗೊಳಿಸಿದರು.
ವರದಿ
ಭಾರತಿ ಉಮೇಶರಾಜ ಅರಸ್.ಚಿಕ್ಕಮಗಳೂರು.
8971536986

