ಸಾಂತ್ವನ ಕೇಂದ್ರ ಮುಂದುವರೆಸಲು ಮನವಿ…..
1 min read
ಸಾಂತ್ವನ ಕೇಂದ್ರ ಮುಂದುವರೆಸಲು ಮನವಿ….
ಚಿಕ್ಕಮಗಳೂರು: ನಗರದಲ್ಲಿ ಕಳೆದ 1962ರಲ್ಲಿ ಆರಂಭಗೊಂಡ ತಮ್ಮ ಸಂಸ್ಥೆ ಸಾವಿರಾರು ಮಹಿಳೆಯರು, ಮಕ್ಕಳಿಗೆ ಆಶ್ರಯ ನೀಡಿ ತಾತ್ಕಾಲಿಕ ವಸತಿ ತ್ಕಾಲಿಕ ವಸತಿ ಕಲ್ಪಿಸುತ್ತಿದ್ದು, ಆದರೆ ಈಗ ಜಿಲ್ಲಾಧಿಕಾರಿಗಳು ‘ಒನ್ ಸ್ಟಾಪ್ ಸೆಂಟರ್’ ಪ್ರಾರಂಭವಾಗಿರುವುದರಿಂದ ತಮ್ಮ ಸಂಸ್ಥೆಯನ್ನು ಮುಚ್ಚಲು ತಿಳಿಸಿದ್ದಾರೆ. ಆದರೆ ಅದರಿಂದ ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಸಿಬ್ಬಂದಿಗಳು ಸೇರಿ ದಂತೆ ನೊಂದ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂದು ನಗರದ ಕಸ್ತೂರಿಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ನೊಂದು ಬರುವ ಮಹಿಳೆಯರು ಹಾಗು ಹೆಣ್ಣು ಮಕ್ಕಳಿಗೆ ಆಶ್ರಯ ಹಾಗು ರಕ್ಷಣೆ ನೀಡುತ್ತಿದ್ದ ತಮ್ಮ ಸಂಸ್ಥೆಗೆ ಕಳೆದ 2001ರಲ್ಲಿ ಸಾಂತ್ವನ ಕೇಂದ್ರ ಆರಂಭಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಅಂದಿನಿಂದ ನೊಂದ ಮಹಿಳೆಯರ ಕೌಟುಂಬಿಕ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿ ತಮ್ಮ ಸಂಸ್ಥೆ ಕಾರನಿರ್ವಹಿಸುತ್ತಿದೆ ಎಂದಿದ್ದಾರೆ.
ನಮ್ಮಲ್ಲಿ ಆಶ್ರಯ ಮತ್ತು ರಕ್ಷಣೆ ದೊರೆಯುತ್ತಿರುವುದರಿಂದ ಬೇರೆ ತಾಲೂಕುಗಳಿಂದ ದೂರುಗಳು ದಾಖಲಾಗಿದ್ದು, ಅದನ್ನು ಸಮರ್ಥ ವಾಗಿ ಇತ್ಯರ್ಥಪಡಿಸಲಾಗುತ್ತಿದೆ. ಹೀಗಾಗಿ ಪ್ರತಿ ತಿಂಗಳು ಹತ್ತರಿಂದ ಹದಿನೈದು ಕೌಟುಂಬಿಕ ಸಮಸ್ಯೆಯ ದೂರುಗಳು ದಾಖಲಾಗುತ್ತಿದೆ ಎಂದ ಅವರು, ಆದರೆ ಇತ್ತೀಚೆಗೆ ತಮ್ಮ ಸಂಸ್ಥೆಯುನಿರ್ವಹಿಸುತ್ತಿರುವ ಹೊಣೆಗಾರಿಕೆಯ ಮಾಹಿತಿ ತಿಳಿಯದೆ ಸಂಬಂಧಿಸಿದ ಇಲಾಖೆ ಉಪ ನಿರ್ದೇಶಕರೋರ್ವರು ನೀಡಿದ ತಪ್ಪು ಮಾಹಿತಿಯಿಂದ ತಮ್ಮ ಸಂಸ್ಥೆ ಮುಚ್ಚುವಂತೆ ಸೂಚನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ
ಆದರೆ ಆನಂತರ ಖುದ್ದು ಪರಿಶೀಲನೆ ಮಾಡಿದ ಅಧಿಕಾರಿ ನಗರದಲ್ಲಿ ಸಾಂತ್ವನ ಕೇಂದ್ರದ ಅಗತ್ಯವಿದೆ ಎಂದು ಸರ್ಕಾರಕ್ಕೆ ಮರು ಪರಿಶೀಲನಾ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ನೊಂದ ಮಹಿಳೆಯರಿಗೆ ನೆರವಾಗಲು ಸರ್ಕಾರದ ಯೋಜನೆ ಮುಂದುವರೆಸಲು ಆದೇಶ ನೀಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದ್ದಾರೆ
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….

