लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಲೆ. ಸಾಹಿತ್ಯ. ಸಂಸ್ಕೃತಿ”ಜ್ಞಾನ ಪುಷ್ಪ” ಉಪನ್ಯಾಸಮಾಲಿಕೆ -3.ನೀವು ಗೆಲ್ಲ ಬಹುದು…,

1 min read

ಕಲೆ. ಸಾಹಿತ್ಯ. ಸಂಸ್ಕೃತಿ”ಜ್ಞಾನ ಪುಷ್ಪ”
ಉಪನ್ಯಾಸಮಾಲಿಕೆ -3.ನೀವು ಗೆಲ್ಲ ಬಹುದು.

 

ಮೂಡಿಗೆರೆ :ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಕಲೆ. ಸಾಹಿತ್ಯ. ಸಂಸ್ಕೃತಿ”ಜ್ಞಾನ ಪುಷ್ಪ”
ಉಪನ್ಯಾಸಮಾಲಿಕೆ -3.ನೀವು ಗೆಲ್ಲ ಬಹುದು.

ಮೂಡಿಗೆರೆ :ಜೀವನದಲ್ಲಿ ಶಿಕ್ಷಣ ಅತ್ಯಂತ ಪ್ರಮುಖ ಘಟ್ಟಎಂದು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಮೂಡಿಗೆರೆ ತಾಲ್ಲೂಕು ಮಹಿಳಾ ಘಟಕದ *ಅಧ್ಯಕ್ಷೆ ಶ್ರೀಮತಿ ರಾಜಲಕ್ಸ್ಮಿಕಾಂತರಾಜ್ ಹೇಳಿದರು* .

ಅವರು ಇಂದುಸರ್ಕಾರಿ ಬಾಲಿಕ ಪ್ರೌಢಶಾಲೆ ಮೂಡಿಗೆರೆ ಸಭಾಂಗಣ ದಲ್ಲಿ ಏರ್ಪಡಿಸಿದ್ದ
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ಗೋಣಿಬೀಡು ಹಾಗೂ ಜೇಸಿಐ ಗೋಣಿಬೀಡು ಹೊಯ್ಸಳ ಅರ್ಪಿಸಿರುವ
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ
*”ಜ್ಞಾನ ಪುಷ್ಪ* ”
ಕಲೆ -ಸಾಹಿತ್ಯ -ಸಂಸ್ಕೃತಿ.
ಕಾರ್ಯಕ್ರಮದಮಾಲಿಕೆ. 3 ರ ನೀವು ಗೆಲ್ಲ ಬಹುದು ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿನಿಯರ ನೀವೆಲ್ಲರೂ ಭವಿಷ್ಯದ ದೀಪಗಳು
ಈ ಜಗತ್ತಿನಲ್ಲಿ ನಿಮ್ಮ ಸ್ಥಾನ ವನ್ನು ಪಡೆಯಲು ಕಠಿಣ ಪರಿಶ್ರಮ ಪಟ್ಟರೆ
ಸಾದನೆ ಮೆಟ್ಟಿಲು ನಿಮ್ಮದಾಗುತ್ತದೆ
ಮತ್ತು ಪದವಿಪೂರ್ವ ಶಿಕ್ಕ್ಷಣವೆಂಬುದು ಕೇವಲ ಪುಸ್ತಕದ ಪಟವಲ್ಲ ನಿಮ್ಮ ವ್ಯಕ್ತಿತ್ವ ರೂಪಿಸುವ
ಕನಸುಗಳನ್ನು ಬೆಳೆಸುವ ಆತ್ಮ ವಿಶ್ವಾಸ ಹೆಚ್ಚಿಸುವ ಹಂತವಾಗಿದೆ
ಈ ಸಮಯದಲ್ಲಿ ತಾಳ್ಮೆಯಿಂದ ಕಲಿಯಿರಿ ಎಂದು ತಿಳಿಸಿದರು
ಪ್ರಸ್ತವಿಕನುಡಿಯನ್ನು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ *ಡಾ.ಮೋಹನ್ ರಾಜಣ್ಣ*
ವಿದ್ಯಾರ್ಥಿಗಳ ಜೀವನದಲ್ಲಿ ಆತ್ಮ ವಿಶ್ವಾಸ ಬಹು ಮುಖ್ಯ. ವಿವೇಚನೆ. ವಿವೇಕ ಅಗತ್ಯ. ಗೆಲುವಿನ ಹಾದಿ ಯಾವುದೆಂದು ಅರಿತು ಮಾರ್ಗದರ್ಶನ ಪಡೆದು ಮುನ್ನೆಡೆದರೆ ಗೆಲುವು ಲಭ್ಯ ಎಂದರು.

ಶ್ರೀಮತಿ *ಆರ್.ಜೆ.ನಯನಾ ಶೆಟ್ಟಿ.*
ರೇಡಿಯೋ ಜಾಕಿ
92.7 BIG ಮಂಗಳೂರು ರವರು “ನೀವು ಗೆಲ್ಲಬಹುದು ”
ಎಂಬ ವಿಷಯದ ಬಗ್ಗೆ ಉಪನ್ಯಾಸನೀಡಿದರು. ನಂತರ ” *ಪುಷ್ಪಗಿರಿ ಜ್ಞಾನಸಿಂಧೂರ* “ಪ್ರಶಸ್ತಿ ಸ್ವೀಕರಿಸಿ ಸೋಲು ಎಂಬುದು ಆಗಾಗ ಬರುವ ತಾತ್ಕಾಲಿಕ ಸ್ಥಿತಿ ಅದಕ್ಕೆ ಹೆದರಿ ಕೈ ಬಿಟ್ಟರೆಅದೇಸೋಲು ಶಾಶ್ವತ ವಾಗುತ್ತದೆ. ಆತ್ಮವಿಶ್ವಾಸ. ಧೈರ್ಯ. ಸ್ಥೈರ್ಯ. ದೃತಿ ಇವೆಲ್ಲಾ ವಿದ್ಯಾರ್ಥಿಗಳಿಗೆ ಅತ್ಯಗತ್ಯಹಾಗೂ ವಿದ್ಯೆ. ಜ್ಞಾನ. ವಿವೇಕ ಹಾಗೂ ಗುರು ಹಿರಿಯರ ಸಕಾಲಿಕ ಸಂದರ್ಭಯೋಚಿತ ಸಮಯೋಜಿತ. ಸಲಹೆ. ಮಾರ್ಗದರ್ಶನ ಉತ್ತೇಜನ ಅತೀ ಅವಶ್ಯ ಎಂದರು..

ಶಾಲಾಭಿರುದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೇಸಿಐ ಗೋಣಿಬೀಡು ಹೊಯ್ಸಳ ಅಧ್ಯಕ್ಷ. ಬಿ.ಎಂ.ಜಗತ್ ಸ್ವಾಗತಿಸಿ ಮಾತನಾಡಿದರು.

ಮುಖ್ಯ ಶಿಕ್ಷಕಿ. ಅನುಸೂಯ. ಶಕುಂತಲಾ ಪಾಟೀಲ್. ಮಾತನಾಡಿದರು.

ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ತಿ ಶ್ರೀಮತಿ ಉಮಾ ಮೋಹನ್. ಹಾಗೂ ಗೌರವ ಟ್ರಸ್ತಿ ಸಿ. ಸಿ. ರಾಜಣ್ಣ.. ಶಾಲಾಭಿರುದ್ಧಿ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ನಳಿನಾ.
ಅವಿನ್ ಟಿವಿ ಯ ಎಂ ಕೆ. ಗಣೇಶ್ ಗೌಡ.
ಬಕ್ಕಿ ಮಂಜುನಾಥ್. ಚಂದ್ರು ಒಡೆಯರ್. ಅಸೈನರ್ ಬಿಳುಗುಳ. ಶಿಕ್ಷಕರಾದ ತೋಟಪ್ಪ ಗೌಡ.
ವೆಂಕಟೇಶ್. ಯೋಗೇಶ್.
ಸುನೀತ.
ವರ್ಷಿತ.
ವಿದ್ಯಾ. ರೇಷ್ಮಭಾನು
.ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಜೇಸಿ ಸಿ.ಎಸ್.ಚಂದ್ರಶೇಖರ್ ವಂದಿಸಿದರು.
ಶಿಕ್ಷಕ ಈಶನಗೌಡ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು

About Author

Leave a Reply

Your email address will not be published. Required fields are marked *

You may have missed