ಅಮ್ಮಾ ನಾಳೆ ನನ್ನನ್ನು ಗಲ್ಲಿಗೇರಿಸಲಾಗುತ್ತಿದೆ….
1 min read
“ಅಮ್ಮಾ ನಾಳೆ ನನ್ನನ್ನು ಗಲ್ಲಿಗೇರಿಸಲಾಗುತ್ತಿದೆ. ನನ್ನ ಮೃತ ದೇಹವನ್ನು ನಿನ್ನ ಬಳಿಗೆ ತಂದಾಗ ಕಣ್ಣೀರು ಹಾಕಬೇಡ. ನನ್ನನ್ನು ಒಬ್ಬ ದೇಶ ಪ್ರೇಮಿಯಂತೆ ಕಳಿಸಿಕೊಡು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕೆ ಸಿಗುತ್ತದೆ. ನಮ್ಮನ್ನು ಹೊತ್ತಿರುವ ಈ ಮಾತೃ ಭೂಮಿಯೇ ಇನ್ನೊಬ್ಬರ ಗುಲಾಮಗಿರಿಯಲ್ಲಿ ಇರುವಾಗ ನಾವು ಹೇಗೆ ನೆಮ್ಮದಿಯಲ್ಲಿ ಇರಲು ಸಾಧ್ಯ..?? ನಾವು ಹೋರಾಡಿದ್ದೇವೆ. ದೇಶಕ್ಕಾಗಿ ನಮ್ಮ ಪ್ರಾಣ ನೀಡುತ್ತಿದ್ದೇವೆ ಬೇಸರಿಸಬೇಡ. ಜೈ
” ” ಹಿಂದೂಸ್ತಾನ್ “‘
ಈ ಮಾತುಗಳನ್ನು ಪತ್ರದ ಮೂಲಕ ತನ್ನ ತಾಯಿಗೆ ತಿಳಿಸಿದ್ದ ಅಶ್ಫಖುಲ್ಲಾ ಖಾನ್ ಎಂಬ ವೀರ ಸ್ವಾತಂತ್ರ್ಯ ಹೋರಾಟಗಾರ.
ಈತನ ಜೊತೆ ಹಿಂದೂ ಮೂಲದ ಪಂಡಿತ್ ರಾಮಪ್ರಸಾದ ಬಿಸ್ಮಿಲ್ ಎಂಬ ವ್ಯಕ್ತಿಯು ಇದ್ದ . ಇವರು ಆತ್ಮೀಯ ಗೆಳೆಯರಾಗಿದ್ದರು . ಇಬ್ಬರೂ ಒಟ್ಟಾಗಿ ಸ್ವಾತಂತ್ರ್ಯ ಹೋರಾಟ ನಡೆಸಿದವರು. ಒಂದೇ ದಿನ 1927ರ ಡಿಸೆಂಬರ್ 19ರಂದು ಇಬ್ಬರನ್ನೂ ಗಲ್ಲಿಗೇರಿಸಿದ್ದರು.
ಭಾರತದ ಕೋಮು ಸೌಹಾರ್ದಕ್ಕೆ ಇವರಿಬ್ಬರ ಜೀವನ ಚರಿತ್ರೆ ಇಂದಿನ ಜನಾಂಗಕ್ಕೆ ಸ್ಫೂರ್ತಿಯಾಗಬೇಕು. ಸೋದರರಂತೆ ಜತೆಗೂಡಿ ಸ್ವಾತಂತ್ರ್ಯ ಮತ್ತು ಸೌಹಾರ್ದಕ್ಕೆ ದುಡಿದು ನೇಣುಕಾಂಬಕ್ಕೆ ಏರಿ ಹುತಾತ್ಮರಾದರು ಇವರು.

