लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸ್ವಚ್ಚತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಪ್ರಶಂಸನೀಯ: ಶಾಸಕ ತಮ್ಮಯ್ಯ…

1 min read

ಸ್ವಚ್ಚತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಪ್ರಶಂಸನೀಯ: ಶಾಸಕ ತಮ್ಮಯ್ಯ

ಚಿಕ್ಕಮಗಳೂರು: ಪೌರ ಕಾರ್ಮಿಕರು ಮತ್ತು ಪೌರ ನೌಕರರು ತಮ್ಮ
ಆರೋಗ್ಯವನ್ನು ಪಣಕ್ಕಿಟ್ಟು ನಾಗರೀಕರ ಆರೋಗ್ಯ ಕಾಪಾಡುವ ಪುಣ್ಯದ ಕಾಯಕ ಮಾಡುತ್ತಿರುವವರಿಗೆ ಪರಿಣಾಮಕಾರಿ ತರಬೇತಿ ಪಡೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ನಗರದ ಲಯನ್ಸ್ ಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ, ನಗರಸಭಾ, ನವಚೈತನ್ಯ ಫೌಂಡೇಶನ್, ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್‌ ಸಂಸ್ಥೆ ಸಹಯೋಗದಲ್ಲಿ ಸ್ವಚ್ಚ ಭಾರತ್ ಮಿಷನ್ 2.0 ಯೋಜನೆಯಡಿ ಸ್ವಚ್ಚತಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರ ಪ್ರದೇಶವನ್ನು ಸ್ವಚ್ಚಗೊಳಿಸುವ ಮೂಲಕ ಜನತೆಗೆ ರೋಗರುಜಿನ ಹರಡದಂತೆ ಕಾರ್ಯ ನಿರ್ವ ಹಿಸುತ್ತಿರುವ ಪೌರಕಾರ್ಮಿಕರ ಸೇವೆ ಪುಣ್ಯವಂತ ಕೆಲಸವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರವು ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಸಕಲ ಸವಲತ್ತು, ವಿಮೆ, ಆರೋಗ್ಯ ತಪಾಸಣೆ ಏರ್ಪಡಿಸಿ ಬೆನ್ನುಲುಬಾಗಿ ನಿಂತಿದೆ ಎಂದು ಹೇಳಿದರು.

ಪೌರಕಾರ್ಮಿಕರ ನಿರಂತರ ಸೇವೆಯಿಂದ ನಗರವು ಆರೋಗ್ಯಪೂರ್ಣವಾಗಿ ಕೂಡಿದೆ. ಇದರಿಂದಲೇ ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆ ಸ್ವಚ್ಛತೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಪ್ರಸ್ತುತ ಪೌರ ಕಾರ್ಮಿಕರು ವಾಸಿಸುತ್ತಿರುವ ಕ್ವಾಟರ್‌ಗಳನ್ನು ನೇರವಾಗಿ ಕಾರ್ಮಿಕರಿಗೆ ಖಾಯಂಗೊಳಿಸಲು ಸರ್ಕಾರದೊಂದಿಗೆ ಚರ್ಚಿಸಿ ಪೌರಕಾರ್ಮಿಕರಿಗೆ ಮೀಸಲಿಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ ಅವರು, ಜೊತೆಗೆ ಹೊರುಗುತ್ತಿಗೆ ನೌಕರರನ್ನು ಖಾಯಂಗೊಳಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಪೌರಕಾರ್ಮಿಕರ ವೃತ್ತಿ ಕಾರ್ಮಿಕರಿಗೆ ಹೊಸದೇನಲ್ಲ. ಮೀನಿಗೆ ಈಜು ಕಲಿಸಿದಂತೆ ಸುಲಭವಾಗಿ ಅರ್ಥವಾಗಲಿದೆ. ಜೊತೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಕಾರ್ಮಿಕರು ಕಡ್ಡಾಯವಾಗಿ ಮಾಸ್ಟ್ ಕೈಕವಚ ಹಾಗೂ ಶೂಗಳನ್ನು ಧರಿಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜದ ಜೊತೆಗೆ ಕಾರ್ಮಿಕರು ಆರೋಗ್ಯದಿಂದ ಜೀವಿಸಲು ಸಾಧ್ಯ ಎಂದರು.

ನಗರಸಭಾ ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಪೌರಕಾರ್ಮಿಕರಿಗಾಗಿ ಏರ್ಪಡಿಸಿರುವ ತರಬೇತಿಯಲ್ಲಿ ಕೆಲವರು ಕಂಡುಬಂದಿದೆ. ಅಲ್ಲದೇ ಕಾರ್ಮಿಕರ ಗೈರಾಗಿರುವುದು ಆರೋಗ್ಯಕ್ಕಾಗಿ ಈ ತರಬೇತಿ ಹಮ್ಮಿಕೊಂಡಿದ್ದು ಯುಜಿಡಿ, ಕಸ ವಿಲೇವಾರಿ ನಿರ್ವಹಿಸುವ ವೇಳೆಯಲ್ಲಿ ಮುಂಜಾಗ್ರತಾ ಕ್ರಮವನ್ನು ವಹಿಸಬೇಕು ಎಂದರು.

ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್ ಮಾತನಾಡಿ, ಪೌರಕಾರ್ಮಿಕರಿಗೆ ಸರ್ಕಾರವು ನಿಗಧಿಗೊಳಿಸಿರುವ ಸಮವಸ್ತ್ರ, ಕೈಕವಚ ಮತ್ತು ಶೂಗಳನ್ನು ಕಡ್ಡಾಯವಾಗಿ ಧರಿಸಬೇಕು. ಇದರಿಂದ ಕಾರ್ಮಿಕರ ಕೆಲಸದ ವೇಳೆಯಲ್ಲಿ ಸುರಕ್ಷಿತವಾಗಿರಲು ಸಾಧ್ಯ ಎಂದ ಅವರು ಕಾರ್ಮಿಕರ ಸೇವೆಯಿಂದ ಸಮಾಜವು ಇಂದು ಆರೋಗ್ಯವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ನಗರದ ಆಜಾದ್ ಪಾರ್ಕ್ ಸಮೀಪದಲ್ಲಿ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಕುರಿತು ಗೋಡೆಬರಹ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿನಾಟಕಕ್ಕೆ ಶಾಸಕರು ಚಾಲನೆ ನೀಡಿದರು. ಬಳಿಕ ಸಂಪನ್ಮೂಲ ವ್ಯಕ್ತಿ ಟಿ.ಎಂ. ಜಲಧರ್ ಅವರಿಂದ ವಿಶೇಷ ಉಪನ್ಯಾಸ ನಡೆಯಿತು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರಾದ ಎ.ಸಿ.ಕುಮಾರಗೌಡ, ಗೋಪಿ, ರೂಪಕುಮಾ‌ರ್, ಗುರುಮಲ್ಲಪ್ಪ, ಪರಮೇಶ್, ಕೀರ್ತಿಶೇಟ್, ನಗರಸಭಾ ಆರೋಗ್ಯ ಪರೀವೀಕ್ಷಕರಾದ ವೆಂಕಟೇಶ್, ಈಶ್ವರ್, ರಂಗಪ್ಪ, ನಾಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….🙏

About Author

Leave a Reply

Your email address will not be published. Required fields are marked *

You may have missed