लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಸತಿ ನಿಲಯದ ವಿದ್ಯಾರ್ಥಿಗಳ ಉಪವಾಸ ಧರಣಿ

ಬೀರೂರು: ಕಾಮನಕೆರೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಧರಣಿ.

ಈ ಹಿಂದೆ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ದೈಹಿಕ ಶಿಕ್ಷಕ ಯಲ್ಲಪ್ಪ ಎಂಬುವವರು ಸರಿಯಾಗಿ ಊಟ-ತಿಂಡಿಯನ್ನು ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಆಲ್ಲೂರಿನಿಂದ ನಿಯೋಜನೆ ಮೇಲೆ ಬಂದಿರುವ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಶುಚಿ, ರುಚಿಯಾದ ಊಟ ನೀಡುತ್ತಿದ್ದರು. ನಮ್ಮಗಳ ಸಮಸ್ಯೆಯನ್ನು ಆಲಿಸುತ್ತಿದ್ದರು. ಆದರೆ ಯಾವುದೋ ಕಾರಣ ನೀಡಿ ಅವರನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡುವುದು ಇಲಾಖೆಗೆ ಸಂಬಂಧಿಸಿದ ವಿಚಾರ. ಈಬಗ್ಗೆ ನಮ್ಮ ತಕರಾರಿಲ್ಲ.
ಆದರೆ ವಿಷಯ ಶಿಕ್ಷಕರಿಗೆ ನಿಲಯ ಮೇಲ್ವಿಚಾರಣೆ ಉಸ್ತುವಾರಿ ನೀಡಬಾರದು ಮತ್ತು ಪ್ರಾಚಾರ್ಯರನ್ನು ಕೂಡಲೇ ಬದಲಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಶಾಲೆಯಲ್ಲಿನ ಕೆಲವು ಶಿಕ್ಷಕರ ಸಣ್ಣ ಸಣ್ಣ ತಪ್ಪುಗಳಿಗೆ ನೋಟಿಸ್ ನೀಡಲಾಗುತ್ತದೆ. ಆದರೆ ಪ್ರಾಚಾರ್ಯರು ರಾತ್ರಿ ಸಮಯ ತಮ್ಮ ಮನೆಗೆ ವಿದ್ಯಾರ್ಥಿಗಳ ಕೈಯಿಂದಲೇ ಊಟವನ್ನು ತ ರಿಸಿಕೊಳ್ಳುತ್ತಾರೆ. ಇದು ತಪ್ಪಲ್ಲವೆ ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳು, ಮಕ್ಕಳ ಕೈಲಿ ಊಟ ತರಿಸಿಕೊಳ್ಳುವ ಪ್ರಾಚಾರ್ಯರಿಗೇಕೆ ನೋಟಿಸ್ ನೀಡುವುದಿಲ್ಲ ಎಂದು ಪ್ರಶ್ನಿಸಿದರು. ಊಟದಲ್ಲಿ ಹುಳುಗಳಿರುತ್ತವೆ. ಊಟ ರುಚಿಯಾಗಿರುವುದಿಲ್ಲ. ಮಕ್ಕಳು ಕಡಿಮೆ ಊಟ ಮಾಡಲಿ ಎನ್ನುವ ಕಾರಣಕ್ಕೆ ರುಚಿಯಾಗಿ ಅಡಿಗೆ ಮಾಡುವುದಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರು ಭೇಟಿ ನೀಡಿ ನ್ಯೂನ್ಯತೆಗಳನ್ನು ಸರಿ ಪಡಿಸಿಕೊಳ್ಳುವಂತೆ ನಿಲಯದ ಸಿಬ್ಬಂದಿಗಳಿಗೆ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರಾದರು ಶಾಲೆಗೆ ಭೇಟಿ ನೀಡುತ್ತಾರೆ ಎಂದಾಗ ಮಾತ್ರ ಶುಚಿ, ರುಚಿಯಾಗಿ ಅಡಿಗೆ ಮಾಡಲಾಗುತ್ತದೆ. ನಂತರ ಮತ್ತದೇ ಕೆಟ್ಟರೀತಿಯಲ್ಲಿ ಅಡುಗೆ ಮಾಡಲಾಗುತ್ತದೆ ಎಂದು ನಿಲಯದ ವ್ಯವಸ್ಥೆಯ ಬಗ್ಗೆ ಆರೋಪಿಸಿದರು.

‘ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ವಸತಿ ಶಾಲೆಗೆ ಬಂದು ಭರವಸೆ ನೀಡಬೇಕು ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳು ಬೆಳಿಗ್ಗೆಯಿಂದಲೇ ವಿದ್ಯಾರ್ಥಿಗಳು ಊಟ ಮಾಡದೆ ಪ್ರತಿಭಟನೆ ಶಾಲೆಯ ಮುಂದೆ ಧರಣಿಯಲ್ಲಿ ನಿರತರಾದರು.

ವಸತಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಂಯೋಜಕಿ ಶೈಲಾ ಮಾತನಾಡಿ, ಇಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಲಾಗುವುದು ಮತ್ತು ಶಾಲೆಗೆ ವಿದ್ಯಾರ್ಥಿಗಳ ಬೇಡಿಕೆಯಂತೆ ಖಾಯಂಮೇಲ್ವಿಚಾರಕರು ಮತ್ತು ಪ್ರಾಚಾರ್ಯರನ್ನು ನೇಮಕ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮಕ್ಕಳ ಪರವಾಗಿ ಮನವಿ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಟರಾಜ್, ಸಂತೋಷ್ ಮತ್ತಿತರಿದ್ದರು.

ವಸತಿ ನಿಲಯದ ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಾತ್ಕಲಿಕ ಸಮಸ್ಯೆ ಪರಿಹಾರಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿ ನಿಲಯದ ಗೀತಾ ಎಂಬುವವರನ್ನು ಕಾಮನಕರೆ ವಸತಿ ಶಾಲೆಗೆ ಮೇಲ್ವಿಚಾರಕಿಯಾಗಿ ಹಾಗೂ ಚೌಳಹಿರಿಯೂರಿನ ವಸತಿ ಶಾಲೆಯ ಪ್ರಾಂಶುಪಾಲ ಧನರಾಜ್ ಅವರನ್ನು ಹೆಚ್ಚುವರಿ ಪ್ರಾಂಶುಪಾಲರಾಗಿ ಕಾಮನಕೆರೆ ವಸತಿ ಶಾಲೆಗೆ ನಿಯೋಜಿಸಲಾಗಿದೆ. ಈ ಹಿಂದೆ ಮೇಲ್ವಿಚಾರಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ ಎಂಬುವವರ ಬಗ್ಗೆ ವಿದ್ಯಾರ್ಥಿಗಳಿಂದ ಸಾಕಷ್ಟು ದೂರುಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೊಪ್ಪ ತಾಲ್ಲೂಕಿನ’ ಹರಂದೂರಿನ ವಸತಿ ಶಾಲೆಗೆ ವರ್ಗಾಯಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ
ಉಪನಿರ್ದೇಶಕಿ ಮಾಲತಿ ಪತ್ರಿಕೆಗೆ ಮಾಹಿತಿ ನೀಡಿದರು.

ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….🙏

About Author

Leave a Reply

Your email address will not be published. Required fields are marked *

You may have missed