ಒಂದು ಬಲಿಗೆ, ಒಂದೇ… ಕಾಡಾನೆ ಸೆರೆ…..
1 min read
“ಒಂದು ಬಲಿಗೆ, ಒಂದೇ… ಕಾಡಾನೆ ಸೆರೆ”. 🐘 ಮಲೆನಾಡಿನಲ್ಲಿ ಕಾಡಾನೆ ದಾಳಿಗೆ ದಿನಂಪ್ರತಿ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಕಾಡಾನೆ ದಾಳಿ ನಡೆಸಿ ಕಾರ್ಮಿಕರನ್ನು ಕೊಂದ ನಂತರ ಅರಣ್ಯ ಇಲಾಖೆ ಎಚ್ಚರಗೊಳ್ಳುವ ಚಾಳಿ ಹಲವಾರು ವರ್ಷಗಳಿಂದ ಮಲೆನಾಡಿನಲ್ಲಿ ನಡೆಯುತ್ತಿದೆ, ಅದು ಕೂಡ ಮರಣ ಹೊಂದಿದ ಘಟನೆ ನಂತರ ಅರಣ್ಯ ಇಲಾಖೆಯ ಮುಂದೆ ಜೋರು, ಜೋರು ಕೂಗಾಟ ಚೀರಾಟ ಹೋರಾಟ ಮಾಡಿದ ನಂತರ ಒಂದಿಷ್ಟು ಎಚ್ಚರಗೊಂಡು, ಕೊಂದ ಕಾಡಾನೆ ಯನ್ನು ಮಾತ್ರ ಸೆರೆಯಿಡಿಯುವುದು. ಇಲ್ಲದಿದ್ದರೆ ಅದೇ ಮೌನ, ದೀಪಾವಳಿ ಪಟಾಕಿ ಸಿಡಿಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಆನೆಗಳನ್ನು ಓಡಿಸುತ್ತಾ, ಆನೆಗಳಿಗೆ ಮತ್ತಷ್ಟು ಗಾಬರಿ ಮಾಡುತ್ತಾ, ಕಾಲ ನೂಕುವುದು, ಆನೆ ತುಳಿತಕ್ಕೆ ಒಳಗಾದ ನಂತರ ಮತ್ತೆ ಕಾರ್ಯ ಪ್ರವೃತ್ತರಾಗಿ ಆನೆ ಸೆರೆಹಿಡಿಯುವುದು… ಒಂದು ಬಲಿ ತೆಗೆದುಕೊಂಡ ನಂತರ ಒಂದೇ..ಕಾಡಾನೆ ಸೆರೆಹಿಡಿಯುವ ಬದಲು ಇಂದಿನ ಆಧುನಿಕ ತಂತ್ರಜ್ಞಾನವನ್ನು ಬಳಸಿ ಆನೆಗಳು ಇರುವ ಸ್ಥಳವನ್ನು ಪತ್ತೆ ಹಚ್ಚಿ ಸೆರೆಹಿಡಿದು, ಆನೆಗಾಗಿ ಮೀಸಲು ಇರುವ ಅರಣ್ಯದಲ್ಲಿ ಹೆಚ್ಚೆಚ್ಚು ಬಿದಿರು ಹಲಸಿನ ಹಣ್ಣಿನ ಮರಗಳನ್ನು ಹಾಗೂ ಆನೆಗೆ ಆಹಾರ ಒದಗಿಸುವ ಸಸಿಗಳನ್ನು ಬೆಳೆದು ಕುಡಿಯುವ ನೀರಿನ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಿ ಆ ಪ್ರದೇಶದಲ್ಲಿ ಬಿಟ್ಟರೆ, ಮಲೆನಾಡಿನ ಕಾರ್ಮಿಕರು ಆನೆ ತುಳಿತಕ್ಕೆ ಒಳಗಾಗಿ ಬಲಿಯಾಗುವುದನ್ನು ತಪ್ಪಿಸಬಹುದಾಗಿದೆ. ಬಹು ಮುಖ್ಯವಾಗಿ ಆನೆಗಳು ಸೂಕ್ಷ್ಮ ಪ್ರಾಣಿಗಳು ಏಕೆಂದರೆ ಆನೆಯ ಮೆದುಳು ಶಬ್ದ ಹಾಗೂ ಬೆಳಕನ್ನು ಗ್ರಹಿಸಲು ಸಾಧ್ಯವಾಗದೆ ಇರುವುದರಿಂದ ಜನನಿಬೀಡ ಪ್ರದೇಶಕ್ಕೆ ಬಂದ ತಕ್ಷಣ ಗಾಬರಿಗೊಳ್ಳುತ್ತಾವೆ. ಏಕೆಂದರೆ ಕಾಡಾನೆಗಳು ದಟ್ಟ ಕಾಡಿನಲ್ಲಿ ವಾಸ ಮಾಡುವುದ್ದರಿಂದ ಆ ಪ್ರದೇಶಕ್ಕೆ ಹೊಂದಿಕೊಂಡಿರುತ್ತಾವೆ ಆದರೆ ಮನುಷ್ಯ ಎಂಬ ಬುದ್ಧಿವಂತ ಪ್ರಾಣಿ ಕಾಡು ಪ್ರಾಣಿಗಳು ವಾಸವಾಗಿರುವ ಪ್ರದೇಶಕ್ಕೆ ಹೋಗಿ ಅಕ್ರಮವಾಗಿ ಎಲ್ಲೆಂದರಲ್ಲಿ ರೆಸಾರ್ಟ್ ಗಳನ್ನು ನಿರ್ಮಿಸಿ ಪ್ರಾಣಿಗಳಿಗೆ ಇನ್ನಿಲ್ಲದಂತೆ ತೊಂದರೆ ನೀಡುತ್ತಿದ್ದಾರೆ ಜೊತೆಗೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಪ್ರಾಣಿಗಳು ಭಕ್ಷಿಸುತ್ತಿದ್ದ ಆಹಾರ ಪದಾರ್ಥಗಳನ್ನು ನಾಶ ಮಾಡಿ ಆ ಪ್ರದೇಶದಲ್ಲಿ ಕಾಫಿ, ಸಿಲ್ವರ್ ಬೆಳೆಯುತ್ತಿದ್ದರೆ ,ಇನ್ನೂ ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶದಲ್ಲಿ ಅಕೇಶಿಯ ಮರಗಳನ್ನು ಬೆಳೆಸುತ್ತಿದ್ದರೆ ಆಹಾರಕ್ಕಾಗಿ ಕಾಡುಪ್ರಾಣಿಗಳು ನಾಡಿಗೆ ಬರುವುದು ಸರ್ವೇಸಾಮಾನ್ಯವಾಗಿದೆ. ಮೂಲಭೂತವಾದ ಈ ಪ್ರಶ್ನೆಯನ್ನು ಅವಲೋಕನ ಮಾಡಬೇಕಾಗಿದೆ. ಆಗ ಮಾತ್ರ ಕಾಡಾನೆ ನಿಯಂತ್ರಣವನ್ನು ತಡೆಯಬಹುದು. ಸರ್ಕಾರ ಇನ್ನಾದರೂ ಎಚ್ಚರಗೊಂಡು ಇಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ಹೊರತು ಕಾಡಾನೆ ಗಳ ನಿಯಂತ್ರಣ ಸಾಧ್ಯವಾಗುವುದಿಲ್ಲ ಜೊತೆಗೆ ಸೆರೆಹಿಡಿದ ಆನೆಗಳನ್ನು ಬೇರೆ ರಾಜ್ಯಗಳಿಗೆ ಅಥವಾ ಬೇರೆ ದೇಶಗಳಿಗೆ ರಫ್ತು ಕೂಡ ಮಾಡಬಹುದು. ಆಹಾರ ಸರಪಳಿಗೆ ತೊಂದರೆ ಇಲ್ಲದಿದ್ದರೆ, ಈ ಕ್ರಮವನ್ನು ಕೂಡ ಕೈಗೊಳ್ಳಬಹುದು. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತು ಕೊಂಡು ಮುಂದಿನ ದಿನಗಳಲ್ಲಿ ಕಾರ್ಮಿಕರು ಮರಣ ಹೊಂದುವ ಮೊದಲೇ ಎಚ್ಚರ ವಹಿಸಬೇಕು. ಮಲೆನಾಡಿನ ತೋಟ ಕಾರ್ಮಿಕರು ಪ್ರತಿದಿನ ಭಯದಿಂದಲೇ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.ಸೂಕ್ತ ಆಧುನಿಕ ತಂತ್ರಜ್ಞಾನ ಬಳಸಿ ಕಾಡಾನೆ ಸೆರೆಹಿಡಿದು ಮಲೆನಾಡಿಗೆ ಜನರಿಗೆ ಅನ್ನ ನೀಡುವ ಅನ್ನ ಧಾತರ ಜೀವ ಉಳಿಸಿ 🙏🙏🙏🙏 ✍️ ಡಾ. ಹರೀಶ್ ನಲ್ಕೆ ಸಂಶೋಧನಾ ಬರಹಗಾರರು.

