ಲೈಂಗಿಕ ದೌರ್ಜನ್ಯ-ನಾಲ್ವರಿಗೆ ಕಠಿಣ ಶಿಕ್ಷೆ..
1 min read
ಲೈಂಗಿಕ ದೌರ್ಜನ್ಯ-ನಾಲ್ವರಿಗೆ ಕಠಿಣ ಶಿಕ್ಷೆ
ಚಿಕ್ಕಮಗಳೂರು: ನಗರದ ಬಾಲಮಂದಿರದಲ್ಲಿ ವಾಸವಿದ್ದ
ಈರ್ವರು ಅಪ್ರಾಪ್ತ ಬಾಲಕಿಯರನ್ನು ಪುಸಲಾಯಿಸಿ ಹಾಸನಕ್ಕೆ ಕರೆದೊಯ್ದು ಬಾಡಿಗೆ ಮನೆಯೊಂದರಲ್ಲಿ ಇರಿಸಿ ಹದಿನೈದು ಮಂದಿ ಯನ್ನು ಲೈಂಗಿಕ ದೌರ್ಜನ್ಯ ಎಸಗಲು ಅನುವು ಮಾಡಿಕೊಟ್ಟಿದ್ದ ನಾಲ್ವರಿಗೆ ಕಠಿಣಶಿಕ್ಷೆ ಮತ್ತು ದಂಡ ವಿಧಿಸಿ ಪೋಸ್ಕೊ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದಿಂದ ಈರ್ವರು ಬಾಲಕಿಯರು ಕಾಣೆಯಾಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಡಿವೈ ಎಸ್ಪಿ ಶೈಲೇಂದ್ರ ಅವರು ಮಹಿಳಾ ಠಾಣೆಯ ಎಎಸ್ಐ ಸೋಮಶೇಖರ್ ಮತ್ತಿತರೆ ತಂಡದ ಮೂಲಕ ಕಾಣೆ ಯಾದ ಬಾಲಕಿಯರನ್ನು ಹಾಸನದ ಮನೆಯೊಂದರಲ್ಲಿ ಪತ್ತೆಹಚ್ಚಿದ್ದರು.
ಬಾಲಕಿಯರ ವಿಚಾರಣೆಯ ವೇಳೆ ನಗರದ ಫರ್ಜಾನ, ಪ್ರಶಾಂತ್, ಲಕ್ಷ್ಮೀ ಮತ್ತು ದಿನೇಶ್ ತಮ್ಮನ್ನು ಪುಸಲಾಯಿಸಿ ಹಾಸನಕ್ಕೆ ಕರೆದೊಯ್ದು ಬಾಡಿಗೆ ಮನೆಯಲ್ಲಿರಿಸಿ ಹದಿನೈದು ಮಂದಿಯಿಂದ ಲೈಂಗಿಕ ದೌರ್ಜನ್ಯ ನಡೆಸಿದರೆಂಬುದನ್ನು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರಲ್ಲದೆ. ದೌರ್ಜನ್ಯ ನಡೆಸಿದ ಹದಿನೈದು ಮಂದಿಯನ್ನು ಕೂಡ ವಶಕ್ಕೆ ಪಡೆದಿದ್ದು, ನಂತರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನಗರದ ಪೋಸ್ಕೊ ನ್ಯಾಯಾಲಯದ ನ್ಯಾಯಾಧೀಶ ರಾಘವೇಂದ್ರ ಗುರು ಪ್ರಸಾದ್ ಕುಲಕರ್ಣಿ ಅವರು, ಫರ್ಜಾನ, ಪ್ರಶಾಂತ್, ಲಕ್ಷ್ಮೀ ಮತ್ತು ದಿನೇಶ್ ಎಂಬುವವರ ಮೇಲಿನ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ ನಾಲ್ವರಿಗೂ ತಲಾ ಹತ್ತು ವರ್ಷಗಳ ಕಠಿಣಶಿಕ್ಷೆ ಹಾಗು ಮೊದಲ ಈರ್ವರಿಗೆ ತಲಾ ಮೂವತ್ತೆರಡು ಸಾವಿರ
ದಂಡ ಉಳಿದ ಈರ್ವರಿಗೆ ತಲಾ ಮೂವತೈದು ಸಾವಿರ. ದಂಡ ವಿಧಿಸಿ ತೀರ್ಪು ಪ್ರಕಟ. ಉಳಿದ ಹದಿನೈದು ಮಂದಿಯ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ಪ್ರಕರಣದಿಂದ ಖುಲಾಸೆ ಮಾಡಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಲೋಹಿತಾಚಾರ್ ಮತ್ತು ಭರತ್ ವಾದ ಮಂಡಿಸಿದ್ದರು.
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….

