लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹೆಣ್ಣು ಮಕ್ಕಳಿಗೆ ಋತುಸ್ರಾವ ನೈರ್ಮಲ್ಯದ ಬಗ್ಗೆ ಅರಿವು

ತರೀಕೆರೆ : ಕರ್ನಾಟಕ ಸರ್ಕಾರ, ಸರ್ಕಾರಿ ಆಯುರ್ವೇದ ಆಸ್ಪತ್ರೆ ತರೀಕೆರೆ, ಆಯುಷ್ಮಾನ್ ಆರೋಗ್ಯ ಮಂದಿರ, ನಂದಿ, ರೋಟರಿ ಕ್ಲಬ್ ತರೀಕೆರೆ, ಆರಾಧನ ವಿದ್ಯಾ ಸಂಸ್ಥೆ ತರೀಕೆರೆ ಇವರ ಸಹಯೋಗದೊಂದಿಗೆ ಆರಾಧನಾ ವಿದ್ಯಾಸಂಸ್ಥೆಯಲ್ಲಿ 6 ರಿಂದ 10 ನೇ ತರಗತಿಯ ಹೆಣ್ಣು ಮಕ್ಕಳಿಗೆ “ಋತುಸ್ರಾವ ನೈರ್ಮಲ್ಯದ ಬಗ್ಗೆ ಅರಿವು” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ. ಕಾವ್ಯಶ್ರೀ ಎಚ್.ಎಲ್. ಮಾತನಾಡಿ ಪ್ರತಿ ಹೆಣ್ಣುಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಮುಟ್ಟಿನ ದಿನಗಳನ್ನು ಎದುರಿಸುತ್ತಾರೆ. ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಕಾಲಿಡುವ ಸಂದರ್ಭದಲ್ಲಿ ಮೊದಲ ಬಾರಿಗೆ ಋತುಮತಿಯಾಗುತ್ತಾರೆ. ಆ ಸಂದರ್ಭದಲ್ಲಿ ಸಮಸ್ಯೆಗಳು, ಸ್ವಚ್ಛತೆ, ಮುಟ್ಟಿನ ಆರೋಗ್ಯದ ಮಹತ್ವ, ಇದರ ಸ್ವಚ್ಛತೆಗೆ ಬಳಸುವ ಉತ್ಪನ್ನಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಸ್ಟರ್ ಮೋ ಮೋಕ್ಷ, ಆರಾಧನಾ ಸಂಸ್ಥೆಯ ಆಡಳಿತ ಅಧಿಕಾರಿ ಸಿಸ್ಟರ್ ಶೈನಿ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ., ರವಿ ಕುಮಾರ್, ಕಾರ್ಯದರ್ಶಿ ಪ್ರವೀಣ್ ಪಿ., ಆಸ್ಪತ್ರೆಯ ಸಿಬ್ಬಂದಿಗಳಾದ ಅರ್ಪಿತ, ಅಮೃತ, ಆರಾಧನಾ ವಿದ್ಯಾ ಸಂಸ್ಥೆಯ ಶಿಕ್ಷಕಿಯರು, ಮಕ್ಕಳು ಭಾಗವಹಿಸಿದ್ದರು.

ಡಾ. ಕಿಶೋರ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ರಮ್ಯಾ ನಿರೂಪಿಸಿದರು.

ವರದಿ..
ಭಾರತಿಉಮೇಶರಾಜಅರಸು..

About Author

Leave a Reply

Your email address will not be published. Required fields are marked *

You may have missed