लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

CT ರವಿ ಅಣ್ಣ ನಿಗೆ ಜನುಮದಿನದ ಹಾರ್ಧಿಕ ಶುಭಾಶಯಗಳೊಂದಿಗೆ, ನಾ ಕಂಡಂತೆ ಒಂದೆರಡು ಸಾಲು

ಚಿಕ್ಕಮಗಳೂರು ಜಿಲ್ಲೆ, ಆಲ್ದೂರು ಹೋಬಳಿಯ ಚಿಕ್ಕ ಮಾಗರಹಳ್ಳಿ ಎಂಬ ಗ್ರಾಮದಲ್ಲಿ ಯಾವುದೇ ರಾಜಕೀಯ ಕ್ಷೇತ್ರದ ಸಾಮಾಜಿಕ ಕ್ಷೇತ್ರದ ಗಂಧ ಗಾಳಿಯು ಇಲ್ಲದ ಒಬ್ಬ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ವಿದ್ಯಾರ್ಥಿ ದೆಸೆಯಿಂದ ರಾಷ್ಟ್ರೀಯತೆ ವಿಚಾರಗಳನ್ನ,ಹಿಂದುತ್ವದ ವಿಚಾರಗಳನ್ನು ಮೈಗೂಡಿಸಿಕೊಂಡು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ,ಸಂಘಟನಾ ಸಾಮರ್ಥ್ಯ, ದೈವದತ್ತ ವಾಗಿ ಬಂದಂತಹ ಅಗಾದ ವಾದ ನೆನಪಿನ ಶಕ್ತಿ ಮತ್ತು ವಾಕ್ಚಾತುರ್ಯದಿಂದ ಪರಿವಾರ ಸಂಘಟನೆಯ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿ, ರಾಜಕೀಯ ಕ್ಷೇತ್ರ ಪ್ರವೇಶಿಸಿ ಸತತವ ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ, ಪ್ರವಾಸೋದ್ಯಮ ಸಚಿವರಾಗಿದ್ದಾಗ ಪ್ರವಾಸಿಗರನ್ನು ಆಕರ್ಷಿಸಲು ಚಿಕ್ಕಮಗಳೂರು ಹಬ್ಬ ಎನ್ನುವ ಉತ್ಸವವನ್ನು ಯಶಸ್ವಿಯಾಗಿ ಆಚರಿಸಿ, ರಾಜಕೀಯ ದಲ್ಲಿ ಉನ್ನತ ಸ್ಥಾನ ಬೇಕಿದ್ದರೆ ಅದಕ್ಕೆ ರಾಜಕೀಯ ಮನೆತನ ಸಂಪರ್ಕ ದ ಹಿನ್ನಲೆ ಬೇಕು ಅನ್ನುವ ಪರಿಸ್ಥಿತಿ ಯಲ್ಲಿ, ತನ್ನ ಕಾರ್ಯ ವಿಧಾನ ದಿಂದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿ, ನಂತರ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಆಗಿ, ಗೋವಾ, ಮಧ್ಯಪ್ರದೇಶ ದಂತ ರಾಜ್ಯಗಳ ಚುನಾವಣೆ ಸಂಘಟನೆ ಉಸ್ತುವಾರಿ ಗಳಾಗಿ, ಗೋವಾ ಮತ್ತು ಮಧ್ಯಪ್ರದೇಶದಲ್ಲಿ ಅಲ್ಲಿಯ ನಾಯಕರು ಮತ್ತು ಕಾರ್ಯಕರ್ತರ ವಿಶ್ವಾಸ ಗಳಿಸಿ ಸಂಘಟಿತವಾಗಿ ಎಲ್ಲರನ್ನು ಜೊತೆ ಕರೆದುಕೊಂಡು ಹೋದ ಪರಿಣಾಮ ಗೋವಾ ದಂತ ಕ್ಷೇತ್ರ ಯಾವಾಗಲೂ ಪೂರ್ಣ ಬಹುಮತವಿಲ್ಲದ ಸರ್ಕಾರ ಬರುತ್ತಿದ್ದ ಕಡೆ ಪೂರ್ಣ ಬಹುಮತ ಬರುವ ಹಾಗೆ ತಮ್ಮ ಕಾಣಿಕೆ ನೀಡಿದ್ದು ಹಾಗು ಮಧ್ಯಪ್ರದೇಶದಲ್ಲೂ ಬಾರಿ ಬಹುಮತ ಬರುವಲ್ಲಿ ಸಹ ತಮ್ಮ ಕಾಣಿಕೆ ನೀಡಿದ್ದಾರೆ, ಅದೆ ಬೇರೆ ಯಾರೆ ಈ ತರ ಫಲಿತಾಂಶ ತಂದಿದ್ದರೆ ಇಸ್ಟೊತ್ತಿಗೆ ಹುಲಿ ಸಿಂಹ ಎಲ್ಲಾ ಬಿರುದು ಬರುತಿತ್ತು.. ಇರಲಿ

ನಾನು ಚಿಕ್ಕಮಗಳೂರು ಮೌಂಟನ್ ವ್ಯೂ ಶಾಲೆಯಲ್ಲಿ ಹೈ ಸ್ಕೂಲ್ ಓದುತ್ತಿದ್ದಾಗಿನಿಂದ CT ರವಿ ಅಣ್ಣ ರವರನ್ನ ನೋಡುತಿದ್ದೇನೆ, ಆದರೆ ಪರಿಚಯ ಮಾತ್ರ ಎರಡು ವರೆ ದಶಕಗಳ ಕಾಲದ್ದು, ನಿರಂತರ ಹೋರಾಟದ ಮನೋಭಾವ, ಬಿಜೆಪಿ ಯ ಯಾವುದೆ ಬಹಿರಂಗ ಅಥವಾ in door ಕಾರ್ಯಕ್ರಮ ವಿರಲಿ ಎಲ್ಲಾ ಸಬಿಕರನ್ನ ತನ್ನ ವಿಚಾರಗಳು ಹಾಗು ಅದನ್ನ ಮಂಡಿಸುವ ಶೈಲಿ ಇಂದ ಇಡಿ ಸಭೆಯನ್ನೇ ತನ್ನ ನುಡಿಯ ಕೊನೆ ಅಕ್ಷರದ ತನಕ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವವ ಕೆಲವೇ ಕೆಲವು ನಾಯಕರಲ್ಲಿ CT ರವಿ ಅಣ್ಣ ಅಗ್ರಗಣ್ಯ ನಾಯಕ
ತನ್ನನ್ನು ಸೈದ್ಧಂತಿಕವಾಗಿ ವಿರೋಧಿಸುವ ವಿರೋದಿಗಳ ಮನೆಯಲ್ಲೂ ಸಹ CT ರವಿ ಅಣ್ಣ ಪರಿಚಿತ
ನೋಡೋದಿಕ್ಕೆ ಹತ್ತಾರು ಜನರನ್ನ ಒಂದೆ ಏಟಿಗೆ ಹೊಡೆಯುವ ಆಳು ಅಲ್ಲದಿದ್ದರೂ, ದೇಶ ಮತ್ತು ಧರ್ಮದ ವಿಚಾರವಾಗಿ ವಿರೋಧಿಗಳು, ಹಾಗು ಮಾತಾoದರೂ ಪ್ರಾಯೋಗಿಸುವ ನೂರಾರು narrative, ಮತ್ತು ದಾರಿ ತಪ್ಪಿಸುವ ವಿಚಾರಗಳ ಬಾಣಕ್ಕೆ ತನ್ನ ಪ್ರಖರವಾದ ವಿಚಾರಗಳಿಂದ ಪ್ರತಿರೋದ ಒಡ್ದುತ್ತ, ಪ್ರತಿ ಭಾಣವನ್ನು ಪ್ರಾಯೋಗಿಸಿ ವಿರೋಧಿಗಳು ಗಾಯಗೊಳುವಂತೆ ಮಾಡುತ್ತಾರೆ
ಪಕ್ಷವನ್ನು ಸಹ ಪ್ರತಿ ಹೆಜ್ಜೆಗೂ ಸಮರ್ಥಿಸುವ CT ರವಿ ಅಣ್ಣ ರನ್ನ ಸೋಲಿಸಲು ತಮ್ಮವರೆ ಕೈ ಜೋಡಿಸಿದ್ದು ಅರಗಿಸಿಕೊಳ್ಳಲಾಗದ ಸತ್ಯ
ತನಗೆ ಕೊಟ್ಟ ರಾಷ್ಟ್ರ ಮಟ್ಟದ ಜವಾಬ್ದಾರಿ ನಿಮಿತ್ತ ಸಮಯದ ಪರಿವೆ ಇಲ್ಲದೆ ರಾಜ್ಯ ದೇಶ ಸುತ್ತುವ ಸಂದರ್ಭದಲ್ಲಿ, ತನನ್ನು ಆಯ್ಕೆ ಮಾಡಿದ ವಿಧಾನ ಸಭಾ ಕ್ಷೇತ್ರದಲ್ಲಿ ಸಮಯ ಕೊಡಲು ಸಾಧ್ಯವಾಗದೆ, ತನ್ನ ನಂಬಿಕಸ್ತರ ಹೆಗಲಿಗೆ ಜವಾಬ್ದಾರಿ ಹೊರಸಿ ಸಂಘಟನೆ ಅಂತ ಸುತ್ತುವಾಗ ಎಲ್ಲೊ ಒಂದು ಕಡೆ ಅದೆ ಸ್ವಲ್ಪ ಕಾರ್ಯಕರ್ತರು ಜನರ ನಡುವೆ ಅಂತರ ಸೃಷ್ಟಿ ಅಯ್ತೆ,
ಇನ್ನು ಒಬ್ಬ ಸಾಮಾನ್ಯ ಕೃಷಿ ಕುಟುಂಬದ ಒಕ್ಕಲಿಗ ಸಮುದಾಯದ ಹುಡುಗ ಈ ಪಾಟಿ ಬೆಳೆಯುವುದು ಬೇರೆ ಪಕ್ಷದ ಪ್ರಾಬಾವಿ ಒಕ್ಕಲಿಗ ನಾಯಕರಿಗೆ ಅರಗಿಸಿಕೊಳ್ಳರಾದ ವಿಷ್ಯವಾಗಿತ್ತು,

ಸಕಲೇಶಪುರ ಮಂಡಲದ ಪ್ರಧಾನ ಕಾರ್ಯದರ್ಶಿ ಆಗಿ ಅ ಮೂರು ವರ್ಷ ಸರಿಯಾಗಿ ನಿದ್ದೆ ಮಾಡಲು ಸಮಯವಿಲ್ಲದೆ, ಸ್ವಂತಕ್ಕೂ ಸಮಯ ಕೊಡಲು ಆಗದೆ ಪಕ್ಷ ಸಂಘಟನೆ ಮಾಡಿದ ನನ್ನಂತ ಸಾಮಾನ್ಯ ಕಾರ್ಯಕರ್ತನಿಗೆ ಈ ಪಾಟಿ ಕೆಲಸದ load ಇರಬೇಕಾದರೆ ಇನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಅವರ ಕೆಲಸದ load ಇನ್ನೆಷ್ಟಿರ ಬೇಡ,ಜಿಲ್ಲೆ ಜಿಲ್ಲೆ ರಾಜ್ಯ ರಾಜ್ಯಗಳನ್ನ ನಿರಂತರ ಪ್ರವಾಸ ಮಾಡಬೇಕು
ಇಂತವರು ಹಗಲು ರಾತ್ರಿ ಸಂಚಾರ ಮಾಡಲೇ ಬೇಕು,ಇಂತ ಪ್ರಯಾಣದ ಅವಧಿ ಇವರಿಗೆ ತನ್ನ ಕಾರಿನ ಸೀಟ್ ಶಯನ ಗೃಹದ ಹಾಸಿಗೆ, ಅದೆ ಸಮಯ ಅವರಿಗೆ ನಿದ್ದೆ, ಇಂತ ವ್ಯಕ್ತಿ ತನ್ನಜವಾಬ್ದಾರಿ ಕರ್ತವ್ಯ ನಿರ್ವಹಣೆಗೆ ಹೋಗಬೇಕಾದರೆ ಆದ ಅಪಘಾತ, ಇವರ ಕಾರಿನ ಚಾಲಕ ಚಾಲನೆ ಮಾಡುವಾಗ ಆಗಿದ್ದ ಆಕಸ್ಮಿಕ ಅಪಘಾತ ವನ್ನ ಇವರೆ ಮಾಡಿದ್ದು ಅನ್ನುವ narrative ಸೃಷ್ಟಿ, ವಿಚಾರಧಾರೆ ಗಳಿಂದ ಎದುರಿಸಲು ಸಾಧ್ಯವಿಲ್ಲ ದ ಕಿರಾತಕರಿಗೆ ಇಂತ ಸುಳ್ಳು ಸುದ್ದಿ ಸೃಷ್ಟಿಸುವುದೆ ಘನಂದಾ ರಿ ಕೆಲಸ, ಇಂತ ವಿಷಯದಲ್ಲೂ ರಾಜಕೀಯ mileage ತೆಗೆದುಕೊಳ್ಳುವ ಅವರನ್ನ ರಾಜಕೀಯ ವಾಗಿ ಮುಗಿಸುವ ಹೀನ ಮನಸ್ಥಿತಿ ವಿರೋಧಿಗಳದ್ದು
ಬದ್ದ ವೈರಿಗಳಾದರೂ CT ರವಿ ಅವರನ್ನ ಸೋಲಿಸಲು ಬಲೆ ಹಣಿದು ಸ್ವಪಕ್ಷಿಯರ ತೆರೆಮರೆಯ ಕೈ ಚಳಕ ದಿಂದ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲುವಂತೆ ಮಾಡಲಾಯಿತು.ಇಂತ ಅನೈತಿಕ ಒಡಂಬಡಿಕೆಯ ಹೊರತಾಗಿ ಸಹ CT ರವಿ ಅಣ್ಣ ಗೆಲ್ಲ ಬಹುದಿತ್ತು,ಎಲ್ಲೊ ಮನುಷ್ಯರಲ್ಲಿ ಕೆಲವೊಮ್ಮೆ ಲೋಪ ಗಳು ಆಗುವುದು ಸಹಜ ಅದನ್ನ ಸರಿ ಪಡಿಸಿಕೊಂಡು ಮುಂದೆ ಹೋಗಬಹುದು, ಆದರೆ ದೋಷಗಳು ಇರಬಾರದು ಅದು ಸರಿ ಪಡಿಸಲು ಆಗದ್ದು

ಒಬ್ಬ ವ್ಯಕ್ತಿ ಸೋಲುವುದು ಅಂಕಿ ಅಂಶಗಳ ಲೆಕ್ಕಾಚಾರದಿಂದಲ್ಲ ಬದಲಿಗೆ ಸಾರ್ವಜನಿಕ ವಾಗಿ ಮರೆಯಾಗುವುದು, ಆದರೆ CT ರವಿ ಅಣ್ಣ ಮತ್ತೆ ಇನ್ನಷ್ಟು ಸಕ್ರಿಯವಾಗಿ, ತನ್ನ ಕ್ಷೇತ್ರದದಲ್ಲಷ್ಟೇ ಅಲ್ಲದೆ ಎಲ್ಲ ಕಡೆ ಕಾರ್ಯಕರ್ತರ ಜೊತೆ ಮೊದಲಿಗಿಂತನು connect ಆಗಿ ನಾಯಕನಾಗಿ ಹೊಮ್ಮುತ್ತಿದ್ದಾರೆ. ಎಷ್ಟೇ ಜನರ ಮದ್ಯೆ ಇದ್ರೂ ಸಹ ಸಂಘಟನೆ ಮಾಡುವ ಕಾರ್ಯಕರ್ತನನ್ನ ಗುರುತು ಹಿಡಿದು ಹತ್ತಿರ ಕರೆದು ಮಾತನಾಡಿಸಿ ಒಂದೆರಡು ಪ್ರೋತ್ಸಾಹ ದಾಯಕ ನುಡಿಗಳನ್ನ ನುಡಿಯುವ ಅವರ ಗುಣ ಮೆಚ್ಚುವಂತದ್ದು.
ಇಂತ ವ್ಯಕ್ತಿ ಯನ್ನ ಮುಗಿಸಿದರೆ , ಸಂಘಟನೆ ಯಲ್ಲಿ ಮತ್ತು ಸಾರ್ವಜನಿಕರ ಮದ್ಯೆ aggressive ಆಗಿ ಕೆಲಸ ಮಾಡುವ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರನ್ನು ಈ ಮೂಲಕ ಸಂದೇಶ ಕೊಟ್ಟು ಬೆದರಿಸಿ ಮುಗಿಸಬಹುದು ಮತ್ತೆ ಪದೆ ಪದೆ ತಮ್ಮದೆ ಆಡಳಿತ ನಡೆಸಬಹುದು ಅನ್ನುವ ದುರಾಲೋಚನೆ ಇಂದ ಮಾಡಿದ ವಿರೋಧಿ ಗಳ ದುಸ್ಸಾಹಸ ವನ್ನ ದೇಶದ ಜನತೆ ನೋಡಿದೆ
ಪ್ರಜಾಪ್ರಭುತ್ವ ದ ಚುನಾವಣೆ ಫಲಿತಾಂಶದ ಸಂಖ್ಯೆ ಯಲ್ಲಿ ಏರಿಳಿತ ಇದ್ದದ್ದೆ, ಈ ಸಮಯದಲ್ಲಿ ತಮ್ಮನ್ನು ತಾವು research ಮಾಡಿಕೊಂಡು recharge ಮಾಡಿಕೊಂಡು ಮತ್ತಷ್ಟು update ಆಗಲು ಈ ಸಮಯ ಬಳಸಿಕೊಂಡು, ಮುಂದೆ ಪಕ್ಷದ ಮತ್ತಷ್ಟು ಉನ್ನತ ಜವಾಬ್ದಾರಿ ಹೊತ್ತುಕೊಂಡು ಕಾರ್ಯಕರ್ತರ ಜೊತೆ ನಿಲ್ಲುವ ವಿಶ್ವಾಸ ವಿದೆ
ಇನ್ನು ಒಬ್ಬ ಸಾಮಾನ್ಯ ರೈತನ ಮಗ, ತನ್ನ ಸಾಮರ್ಥ್ಯ ದಿಂದ ರಾಜಕೀಯ ವಾಗಿ, ಹಾಗು ಆರ್ಥಿಕವಾಗಿ ಈ ಮಟ್ಟಿಗೆ ಬೆಳೆದದ್ದು ವಿರೋಧಿಗಳಿಗೆ ಸಹಿಸಲಸಾಧ್ಯ ವಾದದು, ಹಾಗಾಗಿ ಅವರ ಆರ್ಥಿಕ ವಿಚಾರವಾಗಿ ಪದೆ ಪದೆ ಅವರನ್ನ ಹೀಗಳಿಯುವ ಕೆಲಸ ವಿರೋಧಿ ಗಳಿಂದ ಆಗುತ್ತಿದೆ, ತನ್ನ ಸಾಮರ್ಥ್ಯ ದಿಂದ ಒಂದು ಗ್ರಾಮದಿಂದ ರಾಷ್ಟ್ರೀಯ ಮಟ್ಟಕ್ಕೆ ಬೆಳೆದ ವ್ಯಕ್ತಿ, ತನ್ನ ಸಾಮರ್ಥ್ಯ ದಿಂದ ಆರ್ಥಿಕವಾಗಿ ಬೆಳೆಯಬಾರದು ಅನ್ನುವ ಕಾನೂನು ಇದೆಯಾ ?
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್
ಕರ್ನಾಟಕ ದಲ್ಲಿ ಅಧಿಕಾರಿಕ್ಕೆ ಬರಲು,ತನ್ನ ಪ್ರಭಾವ ಬೀರಿ ಬಿಜೆಪಿ ಯ ಕೆಲವು ನಾಯಕರುಗಳು ಬೇರೆ ಪಕ್ಷ ಕಟ್ಟು ವಂತೆ ಮಾಡಿ ವೋಟ್ ವಿಭಜನೆ ಮಾಡಿ ಅಧಿಕಾರಕ್ಕೆ ಬಂದವರಿಗೆ, CT ರವಿ ಅಣ್ಣ ನ ಮೇಲೆ ಯಾಕೆ ಯಾವುದೆ IT ಅಥವಾ ಇನ್ಯಾವುದೇ ದಾಳಿ ಮಾಡಿ ಅವರ ಆರ್ಥಿಕ ಮೂಲ ಕಂಡು ಹಿಡಿಯ ಬಹುದ್ದಿತ್ತಲ್ಲ ? ಸಂಪೂರ್ಣ ಲೆಕ್ಕ ಇರಬೇಕಾದರೆ ಅಲ್ಲೇನಿದೆ ಶೋದಿಸಲು,ಅಲ್ಲಿ ದಾಳಿ ಮಾಡಲು ಪುರಾವೆ ಬೇಕಲ್ಲ,
ವಿರೋಧಿಗಳಿಂದ ಯತ ಪ್ರಕಾರ ಬರಿ ಅಪಪ್ರಚಾರ
ತನ್ನ ವಿಚಾರದಾರೆ ಗಳಿಂದ ಕರ್ನಾಟಕ ಮತ್ತು ತನ್ನ ಉಸ್ತುವಾರಿ ರಾಜ್ಯ ಗಳಾದ ಗೋವಾ, ಮಧ್ಯಪ್ರದೇಶ ಹಾಗೂ ಹಲವಾರು ರಾಜ್ಯಗಳ ಲಕ್ಷಾಂತರ ಕಾರ್ಯಕರ್ತರಿಗೆ ಸ್ಫೂರ್ತಿ ಆಗಿರುವ ಕೋಟ್ಯಂತರ ಜನರ ಮನೆ ಮಾತಾಗಿರುವ CT ರವಿ ಅಣ್ಣ ಕೋಟಿ ಜನರ ರವಿ ನೆ ಹೌದು
ನೆನ್ನೆ ಅವರ ಜನುಮದಿನ, ಅವರಿಗೂ ಅವರ ಕುಟುಂಬಕ್ಕೂ ಭಗವಂತ ಆಯುರಾರೋಗ್ಯ ಐಶ್ವರ್ಯ ಮತ್ತಷ್ಟು ಯಶಸ್ಸು ಅನುಗ್ರಹಿಸಲಿ ಎಂದು ಆಶಿಸುತ್ತ
ಮತ್ತೊಮ್ಮೆ ಜನುಮದಿನದ ಹಾರ್ದಿಕ ಶುಭಾಶಯಗಳು ರವಿ ಅಣ್ಣ,
ಎಲ್ಲ ಕಾರ್ಯಕರ್ತರು ಸದಾ ನಿಮ್ಮೊಂದಿಗೆ

✍️ ಅವರೇಕಾಡು ಪೃಥ್ವಿ

About Author

Leave a Reply

Your email address will not be published. Required fields are marked *

You may have missed