लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರೈತ ಸಮುದಾಯ ಎಂದರೆ ವಿಭಿನ್ನ ಆಲೋಚನೆಗಳ ಒಂದು ಕೂಟ ಹಾಗೂ ಅದೊಂದು ಘನತೆಯ ಬದುಕು…..

1 min read

ಅವಿನ್ ಟಿವಿ ಸುದ್ದಿಜಾಲ ✒️: ರೈತ ಸಮುದಾಯ ಎಂದರೆ ವಿಭಿನ್ನ ಆಲೋಚನೆಗಳ ಒಂದು ಕೂಟ ಹಾಗೂ ಅದೊಂದು ಘನತೆಯ ಬದುಕು.

ಇಂತಹ ರೈತ ಸಮುದಾಯದ ಘನತೆಯ ಬದುಕಿಗೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು ನಾಗರೀಕ ಸಮಾಜ ಮತ್ತು ಆಳುವ ಸರ್ಕಾರದ ಲಕ್ಷಣ.

ಅನೇಕ ಬಾರಿ ರೈತರ ಘನತೆಗೆ ಧಕ್ಕೆಯಾದಾಗ ಅದು ಆಸ್ಪೋಟಗೊಂಡು ಚಳುವಳಿಯ ರೂಪ ಪಡೆದು ಹೊಸ ಪ್ರವೇಶಕ್ಕೆ ಕಾರಣವಾಗಿದೆ.

ನಮ್ಮ ನಮ್ಮ ಹೊಲಗದ್ದೆಗಳೂಳಗೆ ಯಾವುದೇ ವಿಶ್ವವಿದ್ಯಾಲಯಕ್ಕೆ ಕಡಿಮೆ ಇಲ್ಲದಂತಹ ಅಗಾಧವಾದ ಜ್ಞಾನವಿದೆ, ಅಷ್ಟೇ ಏಕೆ ? ಯಾವುದೇ ಮಣ್ಣಿನ ವಿಜ್ಞಾನಿಗಿಂತ ಮಿಗಿಲಾಗಿ, ಮಣ್ಣನ್ನು ತಿಂದು ನೋಡಿ ಈ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬಹುದು ಎಂದು ತಿಳಿಸುವ ರೈತಾಪಿ ತಜ್ಞರು ನಮ್ಮ ಹಳ್ಳಿಗಳೊಳಗೆ ಇಂದಿಗೂ ಇದ್ದಾರೆ. ಅಕ್ಷರ ಕಲಿಯದ ಓದು ಬರಹ ಬಾರದ ರೈತರ ಬಾಯೊಳಗಿರುವ ಇಂತಹ ಜ್ಞಾನ ಹೆಚ್ಚೆಚ್ಚು ಪಸರಿಸಿ, ಅದು ಶಾಲಾ ಕಾಲೇಜು ವಿಶ್ವವಿದ್ಯಾಲಯದ ಕೊಠಡಿಯೊಳಗೆ ಹೋಗಬೇಕಾಗಿದೆ.

ಇಲ್ಲಿ ಪ್ರಾರ್ಥಿಸುವ ತುಟಿಗಳಿಗಿಂತ ದುಡಿಯುವ ಕೈಗಳಿಗೆ ಮಹತ್ವದ ಪ್ರಾಧಾನ್ಯತೆ ಇದೆ .ನಾವು ತಿನ್ನುವ ಮೂರು ಹೊತ್ತಿನ ಊಟದ ಹಿಂದೆ ರೈತನ ಬೆವರು ಅಗಾಧವಾಗಿ ಬಸಿದಿರುತ್ತದೆ.

ಈ ಕಾರಣಕ್ಕೆ, ಯಾವುದೇ ಸಮಾಜವು ತರ್ಕಕ್ಕೆ ಬೀಳದೆ ರೈತ ಸಮುದಾಯಕ್ಕೆ ಆದ್ಯ ಸ್ಥಾನವನ್ನು ಕೊಟ್ಟು ತನ್ನ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ,ಚಿಕ್ಕಮಗಳೂರಿನ ಕ್ಯಾತನಬೀಡು ಪ್ರತಿಷ್ಠಾನವು ಸಖರಾಯಪಟ್ಟಣಕ್ಕೆ ಅಂಟಿಕೊಂಡಿರುವ ಜಾನ್ಸಾಲೆ ಎಸ್ಟೇಟಿನ ಲಕ್ಸಾಂಬ ಕೆರೆಯ ತಟದಲ್ಲಿರುವ ಯಶಸ್ವಿ ಕೃಷಿಕ ರವೀಶ್ ಅವರ ಮನೆ ಅಂಗಳದಲ್ಲಿ, ಸ್ಥಳೀಯ ರೈತರು ಒಂದುಗೂಡಿ, ರೈತರ ಬದುಕು ಬವಣೆ ಕುರಿತು ಸಂವಾದ ಮಾಡಿ, ಇತಿಹಾಸ ಪ್ರಸಿದ್ಧ ಲಕ್ಸಾಂಬ ಕೆರೆಯು ಒತ್ತುವರಿಯಾಗಿರುವ ಬಗ್ಗೆ ಹೋರಾಟ ರೂಪಿಸಿ, ಕೆರೆಕಟ್ಟೆ ಸಂರಕ್ಷಣೆ ಮಾಡಲು ಇತ್ತೀಚೆಗೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ವಿವಿಧ ಸಂಘಟನೆಯ ನೀರಾವರಿ ಹೋರಾಟಗಾರರು, ಸಾಮಾಜಿಕ ಚಳುವಳಿಗಾರರು ಭಾಗವಹಿಸಿ ಕೃಷಿ ಕ್ಷೇತ್ರದ ಬಗ್ಗೆ ಬೆಳಕು ಚೆಲ್ಲಿದರು.
••••••••••••••••••
ಡಿ. ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed