.,…….ನಿಧನ…
ಹಾದಿವೊಣಿ ಮೊನಪ್ಪಪೂಜಾರಿ.(95).ಇನ್ನಿಲ್ಲ…
ಮೂಡಿಗೆರೆ ತಾಲೂಕು ಬಾಳೂರು ಹೋಬಳಿಯ ಕೂವೆ ಗ್ರಾಮ ಹಾದಿಹೋಣಿ ಊರಿನ ಹಿರಿಯರು ಆದ ಮೋನಪ್ಪ ಪೂಜಾರಿಯವರು (95)ವರ್ಷ ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ .
ಇವರು ಬಹಳ ವರ್ಷಗಳ ಹಿಂದೆ ಕೂವೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ ಹಾಗೂ ಬಾಳೆಹೊನ್ನೂರು ಬಿಲ್ಲವ ಸಂಘದ ಸದಸ್ಯರಾಗಿ ಸಹ ಸೇವೆ ಸಲ್ಲಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಅವಿರತವಾಗಿ ಶ್ರಮಿಸಿರುತ್ತಾರೆ ಇವರನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿದೆ.
ಇವರ ಮಕ್ಕಳು ಮೊಮ್ಮಕ್ಕಳು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಇಂದಿಗೂ ಸಹ ಕಾರ್ಯನಿರತರಾಗಿರುತ್ತಾರೆ ಮೋನಪ್ಪ ಪೂಜಾರಿಯವರ ಅಗಲಿಕೆ ಸಮಾಜಕ್ಕೆ ಹಾಗೂ ಇವರ ಕುಟುಂಬಕ್ಕೆ ತುಂಬಲಾರದ ನಷ್ಟ ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ
ಇವರ ಅಂತ್ಯಕ್ರಿಯೆಯನ್ನು ನಾಳೆ ಇವರ ಸ್ವಗೃಹದಲ್ಲಿ ನೆರವೇರಿಸಲಾಗುವುದು

