लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂರು ವರ್ಷ ಕಳೆದರು ಪೋಡಿ ಮಾಡದ ಭೂಮಾಪಕರು

ಪ್ರತಿಭಟನೆ ಅನಿವಾರ್ಯ ಎಂ.ಮಂಜುನಾಥ್‌

ಮೂಡಿಗೆರೆ : ನಮ್ಮ ಜಮೀನು ನಮ್ಮ ಹಕ್ಕಿಗೆ ಒಂದಲ್ಲ ಒಂದು ವಿಚಾರವಾಗಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿಯನ್ನು ತಾಲ್ಲೂಕು ಆಡಳಿತ ಒದಗಿಸುತ್ತಿದೆ ಎಂದು ರೈತ ಮುಖಂಡರು, ಭಗಿರಥ ಎಸ್ಟೇಟ್ ಮಾಲೀಕರಾದ ಎಂ.ಮಂಜುನಾಥ್ ತಿಳಿಸಿದ್ದಾರೆ.

ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು ನಮ್ಮ ಕೆಲಸವಾಗಬೇಕೆಂದರೇ ಒಂಟಿಯಾಗಿ ಕುಳಿತು ಪ್ರತಿಭಟನೆ ಮಾಡಿದರೆ ಮಾತ್ರವೇ ಅಧಿಕಾರಿಗಳು ಎಚ್ಚೆತ್ತು ಕೊಳ್ಳುತ್ತಾರೆ ಇಲ್ಲವೆಂದರೇ ಇಲ್ಲಾ ಎಂದ ಅವರು, 2022 ರ ಫೆಬ್ರವರಿ 3ರಂದು ಕಡಿದಾಳು ಗ್ರಾಮದ ಸ.ನಂ.76 ನ್ನು ತುರ್ತಾಗಿ ಪೋಡಿ ಮಾಡಿ ವರದಿ ಸಲ್ಲಿಸಲು ತಹಸೀಲ್ದಾ‌ರ್ ರವರು ಶ್ರೀ ಭೂದಾಖಲೆಗಳ ನಿರ್ದೇಶಕರಿಗೆ ಸೂಚನೆ ನೀಡಿರುತ್ತಾರೆ. ಆದರೆ ಭೂದಾಖಲೆಗಳ ನಿರ್ದೇಶಕರು ಮೂರು ವರ್ಷ ಶ್ರೀ ಕಳೆದರೂ ತಹಸೀಲ್ದಾರ್‌ರವರ ಸೂಚನೆ ಪಾಲಿಸಿ ವರದಿ ನೀಡಿರುವುದಿಲ್ಲ.

2025 ರ ಏಪ್ರಿಲ್ 24 ರಂದು ಸರ್ವೆಯರಾದ ಉದಯ ಎಂಬುವವರು ಸ.ನಂ.76 ರ ಎಲ್ಲಾ ಹಕ್ಕುದಾರರಿಗೆ 3ನೇ ನಮೂನೆಯಲ್ಲಿ ನೋಟೀಸು ನೀಡಿ ಅಳತೆ ಕಾರ್ಯಕ್ಕೆ ಜಮೀನಿಗೆ ಬಂದು ಅನುಭವದ ಕೊರತೆಯಿಂದ, ಹಿತಾಸಕ್ತಿಗಳ ಒತ್ತಡದಿಂದ, ತರಭೇತಿ ಕೊರತೆಯಿಂದ ಮತ್ತು ಭೂ ಕಂದಾಯ ಕಾಯ್ದೆಗಳ ಅರಿವಿನ ಕೊರತೆಯಿಂದ ಅಳತೆ ಕಾರ್ಯವನ್ನು

ನಿಯಮಾನುಸಾರ ನೊಡುವಲ್ಲಿ ವಿಫಲರಾಗಿದ್ದು. ಸರ್ವೆಯರ್‌ರವರು ಅಳತೆ ಕಾರ್ಯ ನಿರ್ವಹಿಸಲು ಕಾನೂನಿನ ಅಡಚಣೆಯನ್ನು ಮುಂದು ಮಾಡಿ ಕಡತವನ್ನು ಚಾಲನೆ ಮಾಡಿರುವುದಿಲ್ಲ ಎಂದು ಆರೋಪಿಸಿದರು.

ಭೂ ಕಂದಾಯ ನಿಯಮದ 3ನೇ ನಮೂನೆಯಲ್ಲಿ ರೈತರಿಗೆ ನೋಟೀಸು ನೀಡಿದ ನಂತರ ಹಕ್ಕುದಾರರು ತಕರಾರು ಮಾಡಿದರೆ ಅಳತೆ ಕಾರ್ಯವನ್ನು ನಿಲ್ಲಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಎಲ್ಲಾ ಹಕ್ಕುದಾರರ ಹಕ್ಕುದಾಖಲೆ, ಕ್ರಯಪತ್ರ ಮತ್ತು ವಿಭಾಗ ಪತ್ರಗಳ ವಿಸ್ತೀರ್ಣಕ್ಕೆ ಅನುಸಾರವಾಗಿ ಅಳತೆ ಕಾರ್ಯ ನಿರ್ವಹಿಸಿ ನಕ್ಷೆಗಳನ್ನು ತಯಾರಿಸಿ ಮೇಲಾಧಿಕಾರಿ ಗಳಿಗೆ ವರದಿ ಸಲ್ಲಿಸುವುದು 14ನೇ ನಮೂನೆಯಲ್ಲಿ ಕಡ್ಡಾಯವಾಗಿರುತ್ತದೆ ಎಂದ ಅವರು. ಸರ್ವೆಯರ್‌ರವರು ಜಮೀನಿಗೆ ಬಂದು ಹೋಗಿ ಕಡತವನ್ನು ಕಛೇರಿಗೆ ಸಲ್ಲಿಸಿ 2 ತಿಂಗಳು ಕಳೆದರೂ ಹಿರಿಯ ಅಧಿಕಾರಿಗಳು ಸರ್ವೆಯರ್‌ರವರು ನೀಡಿದ ಕಡತವನ್ನು ಪರಿಶೀಲಿಸಿ ಮುಂದಿನ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.

ಹಿರಿಯ ಅಧಿಕಾರಿಗಳು ನ್ಯಾಯಾಲಯದ ತಡೆ ಆಜ್ಞೆ ಇಲ್ಲದೇ ಇರುವುದರಿಂದ ಸರ್ವೆ ಕಾರ್ಯ ಮಾಡಬಹುದೆಂದು

ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಹಿತಾಸಕ್ತಿ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಒಳಗಾಗಿ ಕಡತವನ್ನು ಮುಂದುವರಿಸಿಲ್ಲದ್ದು

ಕಂಡು ಬರುತ್ತದೆ. ಸರ್ಕಾರದ ಕಂದಾಯ ಮಂತ್ರಿಗಳು ಪೋಡಿ ಮುಕ್ತ ಕಾರ್ಯಕ್ಕೆ ಹೆಚ್ಚು ಆದ್ಯತೆ ನೀಡಿದ್ದರೂ ಅಧಿಕಾರಿಗಳಸ್ಪಂದನೆ ಕಡಿಮೆಯಾಗಿರುವುದು ಕಂಡು ಬರುತ್ತದೆ. ಮೂರು ವರ್ಷಗಳ ಕಾಲ ವಿಳಂಬವಾಗಿರುವ ಕಡತವನ್ನು ಮುಂದುವರಿಸಿ ಕೂಡಲೇ ತಹಸೀಲ್ದಾರ್‌ರವರಿಗೆ ತುರ್ತು ವರದಿ ನೀಡುವಂತೆ ಮತ್ತು ಒಂದು ವಾರದಲ್ಲಿ ಕ್ರಮ ವಹಿಸದಿದ್ದರೆ ಕಛೇರಿ ಒಳಗಡೆ ಒಂಟಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

About Author

Leave a Reply

Your email address will not be published. Required fields are marked *

You may have missed