ಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿ;
1 min read
ಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿ; ಪ್ರಕರಣ ದಾಖಲು
ಮೂಡಿಗೆರೆ: ಜಿ. ಹೊಸಳ್ಳಿ ಗ್ರಾಮದ ಬುಡಕಟ್ಟು
ಮಹಿಳಾ ಕೃಷಿಕ ಸಂಘದ ದೂರಿನ ಮೇರೆಗೆ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟದ ವಿರುದ್ಧ ಶುಕ್ರವಾರ(ಮಾ.14) ಕಾರ್ಯಾಚರಣೆ ನಡೆಸಿದ್ದಾರೆ.
ಕೃಷ್ಣಪ್ಪ ಬಿನ್ ಲೇಟ್ ಗಂಗಯ್ಯ ಅವರಿಗೆ ಸೇರಿದ ‘ನಮನ ಅಂಗಡಿ’ ಯ ಮೇಲೆ ದಾಳಿ ನಡೆಸಿದಾಗ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6.750 ಲೀಟರ್ ಮದ್ಯ ಮತ್ತು 5.300 ಲೀಟರ್ ಬಿಯರ್ ಪತ್ತೆಯಾಗಿದೆ.
ಅಧಿಕೃತ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿರುವುದನ್ನು ದೃಢಪಡಿಸಿದ ನಂತರ, ಅಬಕಾರಿ ಇಲಾಖೆ ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರಿಸಿದೆ. ಈ ದಾಳಿಯು ಗ್ರಾಮಸ್ಥರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇನ್ನಷ್ಟು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.