ಸೌಹಾರ್ದತೆಯ ಮನಸ್ಸು.
1 min read
ಸೌಹಾರ್ದತೆಯ ಮನಸ್ಸು.
ಮೂಡಿಗೆರೆ : ಮಹಾ ಶಿವರಾತ್ರಿ ಅಂಗವಾಗಿ ಬಹು ದೂರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗಿ ದರ್ಶನ ಪಡೆಯುತ್ತಾರೆ. ಹೀಗೆ ಸಾಗುವ ಭಕ್ತಾದಿಗಳಿಗೆ, ಮೂಡಿಗೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಬಿಳಗುಳ ಗ್ರಾಮದ ನೂರುಲ್ ಹುದಾ ಜುಮ್ಮಾ ಮಸೀದಿಯ ಮುಸ್ಲಿಂ ಬಂದುಗಳು ಇಂದು ಬೆಳ್ಳಗೆಯಿಂದಲೇ ಪಾದಯಾತ್ರಿಗಳಿಗೆ ಹಣ್ಣುಗಳು ಮತ್ತು ತಂಪುಪಾನಿಯ ವಿತರಿಸಿದರು.
ಹಿಂದೂ ಮುಸ್ಲಿಂರ ಭಾಂದವ್ಯಕ್ಕೆ ದೂರದ ಊರಿಂದ ನಡೆದು ಬಂದ ಪಾದಯಾತ್ರೆ ಭಕ್ತಾದಿಗಳು ನೂರುಲ್ ಹುದಾ ಜುಮ್ಮಾ ಮಸೀದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಮಾಜಿ ಶಾಸಕರಾದ ಎಂ ಪಿ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂಧರ್ಭದಲ್ಲಿ ನೂರುಲ್ ಹುದಾ ಜುಮಾ ಮಸ್ಜಿದ್ ಬಿಳಗುಳ ಇದರ ಅಧ್ಯಕ್ಷರಾದ ಅಹಮದ್, ಕಾರ್ಯದರ್ಶಿಗಳಾದ ಮೊಹಮ್ಮದ್ ಬಾಬಾ, ಸಮಾಜ ಸೇವಕರಾದ ಅಬ್ದುಲ್ ರೆಹಮಾನ್, ಯೂತ್ ಕಮಿಟಿ ಅಧ್ಯಕ್ಷರಾದ ಕೆ ಕೆ ಸಿದ್ದೀಕ್, ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಚಂದ್ರು ಒಡೆಯರ್,ಅಲ್ತಾಫ್ ಬಿಳಗುಳ,ಅಬ್ಬು ಕತ್ತಾರ್,ಹನೀಫ್ ಮಿಲ್ಟ್ರಿ. ಅಬ್ದುಲ್ಲ,ಹೋಟೆಲ್ ಶಂಶುದ್ದಿನ್,ಶಂಶುದ್ದೀನ್ ಬಿಳಗುಳ, ಪುಟ್ಟಣ್ಣ, ಅರವಿಂದ್ ಬಿಳಗುಳ, ಹೈಟ್ ನಾಗ,ಮದರಸ ಮಕ್ಕಳು,ಗ್ರಾಮಸ್ಥರು.
ಕಾಫಿನಾಡು ಸಮಾಜ ಸೇವಕ ಸಂಘದ ಅದ್ಯಕ್ಷರಾದ ಹಸೈನಾರ್ ಬಿಳಗುಳ.ಪದಾದಿಕಾರಿಗಳು ಮತ್ತು ಸದಸ್ಯರುಗಳು.ಮತ್ತು ಸಾರ್ವಜನಿಕರು ಸಹಕರಿಸಿದರು.