लाइव कैलेंडर

February 2025
M T W T F S S
 12
3456789
10111213141516
17181920212223
2425262728  
05/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಳಸ – ಹೊರನಾಡು ಸಂಪರ್ಕ ರಸ್ತೆ : ಏಪ್ರಿಲ್ 25. ರವರೆಗೆ ವಾಹನ ಸಂಚಾರ ನಿಷೇಧ

1 min read

ಕಳಸ – ಹೊರನಾಡು ಸಂಪರ್ಕ ರಸ್ತೆ : ಏಪ್ರಿಲ್ 25. ರವರೆಗೆ ವಾಹನ ಸಂಚಾರ ನಿಷೇಧ

ಚಿಕ್ಕಮಗಳೂರು: ಕಳಸ ತಾಲ್ಲೂಕಿನ ಕಳಸ-ಹೊರನಾಡು ರಸ್ತೆಯಲ್ಲಿ ಏಪ್ರಿಲ್ 25.ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ
ಹೆಬ್ಬಾಳೆ ಸೇತುವೆಯ ತಡೆಗೋಡೆ ಮತ್ತು ಅಪ್ರೋಚ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಳಸ-ಹೊರನಾಡು ಸಂಪರ್ಕಿಸಲು ಬದಲೀ ರಸ್ತೆಯಾದ ಹಳುವಳ್ಳಿ-ದಾರಿಮನೆ ಕ್ರಾಸ್ ರಸ್ತೆ ಬಳಸಬೇಕಾಗಿದೆ.ಹೊರನಾಡು ರಸ್ತೆ ಏಕಪಥದ ರಸ್ತೆಯಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಶೃಂಗೇರಿಯಿಂದ ಹೊರನಾಡಿಗೆ ಬರುವ ವಾಹನಗಳನ್ನು ಶೃಂಗೇರಿ-ಕೂಳೂರು-ಕೊಗ್ರೆ-ಶಾಂತಿಗ್ರಾಮ-ಬೈಲುಮನೆ-ಮೆಣಸಿನಹಾಡ್ಯ-ಬಲಿಗೆ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ಈ ರಸ್ತೆಯು ತೀವ್ರ ತಿರುವುಗಳಿಂದ ಕೂಡಿರುವುದರಿಂದ ಉದ್ದ ಚಾರ್ಸಿ ವಾಹನಗಳ (ಬಸ್ಸು, ಲಾರಿ ಇತರೆ ಲಾಂಗ್ ಚಾರ್ಸಿ) ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರು ಆದೇಶಿಸಿದ್ದಾರೆ.

About Author

Leave a Reply

Your email address will not be published. Required fields are marked *