लाइव कैलेंडर

February 2025
M T W T F S S
 12
3456789
10111213141516
17181920212223
2425262728  
05/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾರ್ಗಸೂಚಿಯಂತೆ ಕಟ್ಟಡ ನಿರ್ಮಿಸಿ…

ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
ರಾಜ್ಯ ಹೆದ್ದಾರಿ ಸಂಖ್ಯೆ 252 ದಾರದಹಳ್ಳಿ ಗ್ರಾಮದ ಬಿಳ್ಳೂರಿನ ಮೂಲಕ ಹಾದುಹೋಗಿದೆ. ಈ ರಸ್ತೆಯನ್ನೇ ಐಆರ್‌ಸಿ ಇಂಡಿಯನ್ ರೋಡ್ ಕಾಂಗ್ರೆಸ್ ಮಾರ್ಗ ಸೂಚಿಯಂತೆ ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡಬೇಕು. ಈ ರಸ್ತೆಯ ಎರಡು ಭಾಗಗಳನ್ನು ಮೆಸ್ಕಾಂ ಇಲಾಖೆ, ಟೆಲಿಫೋನ್ ಇಲಾಖೆ ಹಾಗೂ ಕಟ್ಟಡ ನಿರ್ಮಾಣಕಾರರು ಕಬಳಿಸುತ್ತಿದ್ದಾರೆ. ರೋಡ್ ಕಾಂಗ್ರೆಸ್ ದಾಖಲಿತ ರಸ್ತೆಯ ಭೂಗಡಿ ರೇಖೆ, ಕಟ್ಟಡ ರೇಖೆ, ವಾಹನ ನಿಯಂತ್ರಣ ರೇಖೆಗಳನ್ನು ಹಾಗೂ Component of Road ರಸ್ತೆ ಘಟಕಗಳನ್ನು ಸ್ಪಷ್ಟವಾಗಿ ವಿವರಿಸಿದೆ.

ರಸ್ತೆಯ ಬಹು ಮುಖ್ಯ ಘಟಕವಾದ shoulder ವಾಹನ ಓಡಾಡುವ ಬಿಳಿ ಪಟ್ಟೆಯ ಗುರುತಿನಿಂದ 2-5 ಮೀಟರ್ ವಿಸ್ತಾರ ಇರಬೇಕು. ಇದನ್ನು ವಾಹನ ನಿಲುಗಡೆಗೆ ಮತ್ತು ರಿಪೇರಿ ಕೆಲಸಕ್ಕೆ ಅವಕಾಶವಾಗುವಂತೆ ನಿರ್ವಹಣೆ ಮಾಡಬೇಕು. ನಂತರ ರಸ್ತೆಯ ನೀರು ಹರಿಯಲು ಚರಂಡಿಯನ್ನು ಮಾಡಲಾಗಿದೆ. ಈ ಎರಡು ಪ್ರದೇಶಗಳನ್ನು ವಿದ್ಯುತ್ ಇಲಾಖೆ, ಟೆಲಿಫೋನ್ ಇಲಾಖೆ ಮತ್ತು ಅಕ್ರಮ ಕಟ್ಟಡ ಕಟ್ಟಿ ಕಬಳಿಸಲಾಗಿದೆ. ಚರಂಡಿಯಲ್ಲಿ ವಿದ್ಯುತ್ ಕಂಬಗಳನ್ನು ನಿಲ್ಲಿಸಲಾಗಿದೆ. shoulder ಭಾಗದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. shoulder ಭಾಗವನ್ನು ತುರ್ತು ಸನ್ನಿವೇಶದಲ್ಲಿ ವಾಹನ ಓಡಾಟಕ್ಕೆ ಬಳಸಲಾಗುತ್ತದೆ. ಆದ್ದರಿಂದ ಇದರ ವಿಸ್ತಾರ ವಾಹನ ಓಡಾಟಕ್ಕೆ ಅನುಕೂಲವಾಗಿರಬೇಕು. ಬೋರ್ಡ್ ಅಳವಡಿಸಿದೆ. ಹೀಗೆ ಲೋಕೋಪಯೋಗಿ ಇಲಾಖೆಯವರು ರಸ್ತೆಯ ಸೌಂದರ್ಯವನ್ನು ಹಾಳು ಮಾಡಿದ್ದಾರೆ. ದಾಖಲಿತ ರಸ್ತೆಯ ಭೂ ಅಗಲದ ರೇಖೆ, ಕಟ್ಟಡ ರೇಖೆ ಹಾಗೂ ವಾಹನ ನಿಯಂತ್ರಣ ರೇಖೆಯನ್ನು ಕ್ರಮವಾಗಿ ಗುರುತಿಸಿ ರಸ್ತೆಯ ವಿಸ್ತಾರದ ಬಗ್ಗೆ ಲೋಕೋಪಯೋಗಿ ಇಲಾಖೆ ಸಾರ್ವಜನಿಕರು ದೂರು ನೀಡಿದರೂ ಕ್ರಮ ವಹಿಸುತ್ತಿಲ್ಲ. ರಸ್ತೆಗೆ ಸೇರಿದ ಜಾಗವನ್ನು ಕಬಳಿಕೆಯಾಗದಂತೆ ಕ್ರಮ ವಹಿಸುತ್ತಿಲ್ಲ. ರಸ್ತೆಯು ನಿರಂತರ ಕಬಳಿಕೆ ಆಗುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯು shoulder ಭಾಗವನ್ನು ಕಳೆದುಕೊಂಡಿರುವುದರಿಂದ ವಾಹನಗಳು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿವೆ. ಇತ್ತೀಚೆಗೆ ದೋಷಪೂರಿತ ರಸ್ತೆ ನಿರ್ಮಾಣ ಕ್ರಿಮಿನಲ್ ಅಪರಾದವೆಂದು ಸುಪ್ರೀಂಕೋರ್ಟ್ ತಿಳಿಸಿದರೂ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಮೂಡಿಗೆರೆಯಲ್ಲಿ ಲೋಕೋಪಯೋಗಿ ಇಲಾಖೆಯವರು 30 ವರ್ಷಗಳ ಹಿಂದೆ ಕಟ್ಟಿದ ಮಿನಿ ವಿಧಾನಸೌಧ ಶಿಥಿಲವಾಗಿ ಹಲವು ವರ್ಷ ಕಳೆದಿದ್ದು, ಕಛೇರಿ ಮಳೆಗಾಲದಲ್ಲಿ ನೀರು ಸೋರುತ್ತಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ರಿಪೇರಿ ಕೆಲಸ ಸಾಗುತ್ತಿದೆ. ಅದೇ ರೀತಿ ಮರಳು ಗಣಿಗಾರಿಕೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿದ್ದು, ನದಿಯಲ್ಲಿ ಆಳ ಗಣಿಗಾರಿಕೆ ಮಾಡಿದ್ದರಿಂದ ಅನೇಕ ಸೇತುವೆಗಳು ಮುರಿದು ಬಿದ್ದವು ಹೀಗೆ ಲೋಕೋಪಯೋಗಿ ಇಲಾಖೆ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿಲ್ಲ. ಮೂಡಿಗೆರೆ ಉಪ ವಿಭಾಗ ಸಹಾಯಕ ಇಂಜಿನಿಯರ್‌ರವರು ರಾಜ್ಯ ಹೆದ್ದಾರಿಯ 252 ರ ದಾಖಲಿತ ರಸ್ತೆಯ ಭೂಗಡಿ ಕಟ್ಟಡ ರೇಖೆ, ನಿಯಂತ್ರಣ ರೇಖೆಗಳನ್ನು ಗುರುತಿಸುವಲ್ಲಿ ಪಾರದರ್ಶಿಕವಾಗಿ ಗುರುತಿಸಲು ಕ್ರಮ ವಹಿಸದೇ ಇರುವುದರಿಂದ ಸಹಾಯಕ ಕಾರ್ಯಪಾಲಕರು ಮೇಲ್ಕಂಡ ರಸ್ತೆಯ ಅಂಗ ಭಾಗಗಳನ್ನು ಲಿಖಿತವಾಗಿ ವಿವರಿಸಲು ಕಛೇರಿ ಮುಂದೆ ಧರಣಿ ನಡೆಸಲಾಗುವುದು. ಸತ್ಯಾಗ್ರಹ ಮಾಡಿ ಗಮನಕ್ಕೆ ತರಲಾಗುವುದು. ರಸ್ತೆ ಸುರಕ್ಷತೆಯನ್ನು ಕಾಪಾಡಲು ಆಗ್ರಹಿಸಲಾಗುವುದು. ವಾರ್ಷಿಕ ಚರಂಡಿ ರಿಪೇರಿ ಹೆಸರಿನಲ್ಲಿ ಬಿಲ್ ಮಾಡಲಾಗುತ್ತಿದೆ.
ಅತ್ರಿಕಾ ಗೊಷ್ಟಿಯಲ್ಲಿ
ಶ್ರೀ ಎಂ.ಮಂಜುನಾಥ್,ರೈತ ಸಂಘದ ರಾಜ್ಯ ಉಪಾಧ್ಯಕ್ಷರು. ಮೂಡಿಗೆರೆ ತಾಲೂಕಿನ ಅದ್ಯಕ್ಷರಾದ.ಪುಟ್ಟಸ್ವಾಮಿಗೌಡ.ಕಾರ್ಯದರ್ಶಿ. ಕೆ.ಜಿ.ಚಂದ್ರೆಗೌಡ.ಎಂ.ಎನ್.ಚಂದ್ರೆಗೌಡ..ನಾಗೇಶ್.ಹೆಚ್.ಎಸ್.ಶ್ರೀನಿವಾಸಗೌಡ.ಕೆ.ವಿ.ಇದ್ದರು.

 

https://nisargacare.com/services/                   https://nisargacare.com/services/

Stroke Paralysis Treatment In Bangalore Karnataka |old age homes in bangalore | senior citizen helpline number in bangalore | Rehabilitation Center in Bangalore |
homestay for the aged , home stay for the aged home for aged in bangalore,home for the aged bangalore, Home for Mentally Retarded , Bedridden , Handicapped & Disabled Health Care Centre , Home Nursing Care ,Old Age Homes ,Alzheimer care ,dementia care , dementia care nursing,Home Nursing Services Bangalore We Provide Good Facility with Food Accommodation 24/7 Nursing care, Medical, Doctor, Hygienic, Good Air , Garden , Neat & Clean, Old Age Homes , For movable Person , Bedridden & Disabled Care Centre , http://www.navachaithanya.com

About Author

Leave a Reply

Your email address will not be published. Required fields are marked *