लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಕ್ಷಿಣ ಕನ್ನಡ ಜಿಲ್ಲೆಯ,ಮಂಗಳೂರು ತಾಲ್ಲೂಕಿನ,ಉಳ್ಳಾಲದಲ್ಲಿ ಕ್ರಿಕೆಟ್ ಪಂದ್ಯಾಟದ ವೇಳೆ ಬ್ಯಾಟ್ಸ್ ಮೆನ್ ಹೊಡೆದ ಚೆಂಡು ಮರದಲ್ಲಿದ್ದ ಜೇನಿನ ಗೂಡಿಗೆ ತಾಗಿದ್ದು,ಇದರಿಂದ ರೊಚ್ಚಿಗೆದ್ದ ಜೇನುನೊಣಗಳು ಕ್ರಿಕೆಟ್ ಗ್ರೌಂಡಿನಲ್ಲಿದ್ದವರ ಮೇಲೆ ಅಟ್ಟಾಡಿಸಿ ದಾಳಿ ನಡೆಸಿದ ಘಟನೆ ಉಳ್ಳಾಲದ ಒಂಬತ್ತುಕೆರೆ ಸಮೀಪ ನಡೆದಿದೆ.

ದಿನಾಂಕ 04/02/2024ರ ಭಾನುವಾರದಂದು ಸೋಮವೇಶ್ವರದ ಒಂಭತ್ತುಕೆರೆಯ ಅನಿಲ ಕಾಂಪೌಂಡ್ ಎಂಬಲ್ಲಿ ಸ್ಥಳೀಯರು ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದರು.ಈ ವೇಳೆ ಘಟನೆ ನಡೆದಿದೆ.

ಕ್ರಿಕೆಟ್ ಗ್ರೌಂಡಿಗೆ ಸಮೀಪವಿದ್ದ ತೆಂಗಿನ ಮರದಲ್ಲಿ ಜೇನುಗೂಡು ಕಟ್ಟಿತ್ತು.ಜೇನುಗೂಡಿಗೆ ಚೆಂಡು ಬಡಿದ ಕೆಲವೇ ಕ್ಷಣಗಳಲ್ಲಿ ಕ್ರಿಕೆಟ್ ಮೈದಾನವನ್ನು ಆಕ್ರಮಿಸಿಕೊಂಡ ಜೇನುನೊಣಗಳು ಬ್ಯಾಟ್ಸ್ ಮೇನ್ ಸಹಿತ ಎಲ್ಲ ಆಟಗಾರರ ಮೇಲೆ ದಾಳಿ ನಡೆಸಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ಜೇನುನೊಣಗಳ ದಾಳಿಯಿಂದಾಗಿ ಕೊನೆಗೆ ಪಂದ್ಯಾಟವನ್ನು ರದ್ದುಗೊಳಿಸಲಾಗಿದೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *

You may have missed