लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕಾಲ್ನಡಿಗೆಯಲ್ಲಿ ಮುಸ್ಲಿಮರ ಪವಿತ್ರ ಸ್ಥಳ ಮಕ್ಕಾ ತಲುಪಿದ ಕೇರಳದ ಯುವಕ.”

1 min read


ಅವರ ಹೆಸರೇ ಶಿಹಾಬ್ ಚೊಟ್ಟೂರ್. 370 ದಿನಗಳಲ್ಲಿನ ಇವರ 8,640 ಕಿ.ಮೀ ಪ್ರಯಾಣವು ಪಾಕಿಸ್ತಾನ, ಇರಾನ್, ಇರಾಕ್, ಕುವೈತ್ ಮತ್ತು ಅಂತಿಮವಾಗಿ ಸೌದಿ ಅರೇಬಿಯಾದ ಮೂಲಕ ಕೊನೆಗೊಂಡಿತು.

ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ವಳಂಚೇರಿ ಕೊಟ್ಟಕ್ಕಲ್ ಮೂಲದ ಶಿಹಾಬ್ ಚೊಟ್ಟೂರ್ ಅವರು ಜೂನ್ 2, 2022 ರಂದು ಹಜ್ ಮಾಡಲು ಕೇರಳದಿಂದ ಸೌದಿ ಅರೇಬಿಯಾಕ್ಕೆ ಮ್ಯಾರಥಾನ್ ನಡಿಗೆಯನ್ನು ಪ್ರಾರಂಭಿಸಿ ಅವರು ಈ ತಿಂಗಳು ಮಕ್ಕಾ ತಲುಪಿದ್ದಾರೆ.

ಶಿಹಾಬ್ ಕಾಲ್ನಡಿಗೆಯಲ್ಲಿ ಭಾರತ, ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ಮೂಲಕ ಪ್ರಯಾಣಿಸಿ ಮೇ ಎರಡನೇ ವಾರದಲ್ಲಿ ಕುವೈತ್ ನಿಂದ ಸೌದಿ ಅರೇಬಿಯಾದ ಗಡಿಯನ್ನು ದಾಟಿದರು.
ಸೌದಿ ಅರೇಬಿಯಾವನ್ನು ಪ್ರವೇಶಿಸಿದ ನಂತರ ಶಿಹಾಬ್ ಪ್ರಮುಖ ಇಸ್ಲಾಮಿಕ್ ಯಾತ್ರಾ ಸ್ಥಳವಾದ ಮದೀನಾಕ್ಕೆ ಹೋದರು.ಮಕ್ಕಾಗೆ ತೆರಳುವ ಮೊದಲು ಅವರು ಮದೀನಾದಲ್ಲಿ 21 ದಿನಗಳನ್ನು ಕಳೆದಿದ್ದರು.ಶಿಹಾಬ್ ಮದೀನಾ ಮತ್ತು ಮಕ್ಕಾ ನಡುವಿನ 440 ಕಿ.ಮೀ ದೂರವನ್ನು ಕೇವಲ ಒಂಬತ್ತು ದಿನಗಳಲ್ಲಿ ಕ್ರಮಿಸಿದ್ದಾರೆ. ಶಿಹಾಬ್ ತನ್ನ ತಾಯಿ ಝೈನಾಬಾ ಜೊತೆಗೆ ಹಜ್ ಮಾಡಲಿದ್ದು ಅವರು ಕೇರಳದಿಂದ ನೇರವಾಗಿ‌ ಮೆಕ್ಕಾಗೆ ಆಗಮಿಸಿದ ನಂತರ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ.ಇನ್ನು ತನ್ನದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಶಿಹಾಬ್, ಕೇರಳದಿಂದ ಪವಿತ್ರ ನಗರ ಮಕ್ಕಾ ಪ್ರಯಾಣದ ಕುರಿತು ತನ್ನ ವೀಕ್ಷಕರಿಗೆ ನಿಯಮಿತವಾಗಿ ಅಪ್ಡೇಟ್ ನೀಡುತ್ತಿದ್ದರು.

ಕಳೆದ ವರ್ಷ ಜೂನ್ ನಲ್ಲಿ ತನ್ನ ಹಜ್ ಪ್ರಯಾಣವನ್ನು ಪ್ರಾರಂಭಿಸಿದ ನಂತರ ಶಿಹಾಬ್ ವಾಘಾ ಗಡಿಯನ್ನು ತಲುಪುವ ಮೊದಲು ದೇಶದ ಹಲವಾರು ರಾಜ್ಯಗಳ ಮೂಲಕ ನಡೆದುಕೊಂಡು ಹೋಗಿದ್ದರು. ಈ ಮೂಲಕ ಅವರು ಪಾಕಿಸ್ತಾನವನ್ನು ಪ್ರವೇಶಿಸಲು ಬಯಸಿದ್ದರು.

ಆದರೆ ಇಲ್ಲಿ ವೀಸಾ ಇಲ್ಲದ ಕಾರಣ ಪಾಕಿಸ್ತಾನದ ವಲಸೆ ಅಧಿಕಾರಿಗಳು ಅವರನ್ನು ತಡೆದಿದ್ದರಿಂದ ಅವರು ಮೊದಲ ಅಡೆತಡೆಯನ್ನು ಎದುರಿಸಿದರು.

ಹೀಗಾಗಿ ಟ್ರಾನ್ಸಿಟ್ ವೀಸಾ ಪಡೆಯಲು ಅವರು ವಾಘಾದ ಶಾಲೆಯಲ್ಲಿ ತಿಂಗಳುಗಟ್ಟಲೆ ಕಾಯಬೇಕಾಯಿತು. ಅಂತಿಮವಾಗಿ, 2023 ರ ಫೆಬ್ರವರಿಯಲ್ಲಿ ಶಿಹಾಬ್ ಟ್ರಾನ್ಸಿಟ್ ವೀಸಾವನ್ನು ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಅವರು ಪಾಕಿಸ್ತಾನವನ್ನು ಪ್ರವೇಶಿಸಿದರು. ಅಲ್ಲಿ ಸ್ವಲ್ಪ ವಿರಾಮದ ನಂತರ ಸೌದಿ ಅರೇಬಿಯಾಕ್ಕೆ ಅವರ ಪ್ರಯಾಣ ಪುನರಾರಂಭವಾಯಿತು. ನಾಲ್ಕು ತಿಂಗಳ ನಂತರ ಶಿಹಾಬ್ ಚೊಟ್ಟೂರ್ ಅವರು ತನ್ನ ಕನಸಿನ ಪವಿತ್ರ ಸ್ಥಳವನ್ನು ಮುಟ್ಟಿದ್ದಾರೆ.

ಬರಹ ಕೃಪೆ.

ಶಾಹಿನ್ ಅತ್ತಾಜೆ.

ಬಂಗಾಡಿ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *