“ಮಂಗಳೂರು ಮೂಲದ ನಿವಾಸಿ ಸೌದಿ ಅರೇಬಿಯಾದಲ್ಲಿ ಮೃತ್ಯು.”
1 min read
ದಿನಾಂಕ 09/06/2023ರ ಶನಿವಾರದಂದು ಮಾಣಿ ಸಮೀಪದ ಸೂರಿಕುಮೇರ್ ನಿವಾಸಿ ಹೃದಯಾಘಾತದಿಂದ ಗುರುವಾರ ರಾತ್ರಿ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಸೂರಿಕುಮೇರ್ ನಿವಾಸಿ ದಿ.ಸುಣ್ಣ ಅಬುಬಕ್ಕರ್ ರವರ ಪುತ್ರ ಅಬ್ದುಲ್ ರಝಾಕ್(52) ಎಂದು ತಿಳಿದು ಬಂದಿದೆ.
ಕಳೆದ 15 ವರ್ಷಗಳಿಂದ ವಿದೇಶದಲ್ಲಿ ವೃತ್ತಿಯಲ್ಲಿ ಇದ್ದ ಇವರು ರಜೆಯಲ್ಲಿ ಮನೆಗೆ ಬಂದು ಮೂರು ತಿಂಗಳ ಹಿಂದೆಯಷ್ಟೇ ವಾಪಸ್ ಸೌದಿ ಅರೇಬಿಯಾಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.ಸೌದಿ ಅರೇಬಿಯಾದಲ್ಲಿ ಶುಕ್ರವಾರ ಆಡಳಿತ ಕಛೇರಿಗಳಿಗೆ ವಾರದ ರಜೆ ಇರುವ ಹಿನ್ನೆಲೆಯಲ್ಲಿ ಮೃತ ಶರೀರದ ಅಂತ್ಯಕ್ರಿಯೆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.







