ಶ್ರೀ ವಿದ್ಯಾ ಭಾರತಿ ಶಾಲೆಗೆ ಸತತ 11ನೇ ಬಾರಿ ಶೇಕಡಾ ನೂರರ ಫಲಿತಾಂಶ…..
1 min readಶ್ರೀ ವಿದ್ಯಾಭಾರತಿ ಪ್ರೌಢಶಾಲೆ ಬಣಕಲ್.2022-23 ನೇ ಸಾಲಿನ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಸತತ 11ನೇ ಬಾರಿ ಶೇಕಡಾ 100. ಫಲಿತಾಂಶ ಬಂದಿದೆ.
ಶಾಲೆಯಿಂದ ಒಟ್ಟು 24 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 24 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಇದರಲ್ಲಿ A+ – 2 A – 4 B+ – 8 B – 7 C+ -3 C – 0
ರಚನಾ .ಸಿ.ಎಂ. – 625 ಕ್ಕೆ 581 ಅಂಕಗಳನ್ನು ಪಡೆದು 92.96 ಶೇಕಡಾ ಫಲಿತಾಂಶದೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ
ಪ್ರತೀಕ್.ಬಿ.ಎ. – 625ಕ್ಕೆ 564 ಅಂಕಗಳನ್ನು ಪಡೆದು 90.24 ಶೇಕಡಾ ಫಲಿತಾಂಶದೊಂದಿಗೆ ದ್ವಿತೀಯ ಪಡೆದಿರುತ್ತಾನೆ
ತೃತೀಯ ಭಾಷೆ ಹಿಂದಿ ವಿಷಯದಲ್ಲಿ ಪ್ರತೀಕ್ ಬಿ.ಎ ಎಂಬ ವಿದ್ಯಾರ್ಥಿ 100 / 100 ಅಂಕ ಪಡೆದಿರುತ್ತಾನೆ
ಶಾಲೆಯು ಸತತವಾಗಿ 11ನೇ ಬಾರಿ ಶೇಕಡಾ ನೂರಕ್ಕೆ ನೂರು ಫಲಿತಾಂಶ ಬರಲು ಶ್ರಮಿಸಿದ ಶಿಕ್ಷಕರು ಹಾಗೂ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಸರ್ವ ಸದಸ್ಯರು ತುಂಬು ಹೃದಯದಿಂದ ಅಭಿನಂದಿಸಿದರು.
ವರದಿ.....
ಮಗ್ಗಲಮಕ್ಕಿ ಗಣೇಶ್.
ಬೀರೋ ನ್ಯೂಸ್ ಅವಿನ್ ಟಿವಿ.

