ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ, 17 ಜನರಿಗೆ IOL ಶಸ್ತ್ರಚಿಕಿತ್ಸೆ || ಲಯನ್ಸ್ ಕ್ಲಬ್ ಮೂಡಿಗೆರೆ
1 min read
ಲಯನ್ಸ್ ಕ್ಲಬ್ ಮೂಡಿಗೆರೆ ವತಿಯಿಂದ ದಿನಾಂಕ 23/02/22 ರಂದು ಎಂಜಿಎಂ ಆಸ್ಪತ್ರೆ ಮೂಡಿಗೆರೆ ಯಲ್ಲಿ ಆರೋಗ್ಯ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ IOL ಅಳವಡಿಕೆ ಶಿಬಿರ ವನ್ನ ಹಮ್ಮಿಕೊಳ್ಳಲಾಗಿತ್ತು.ಶಿಬಿರದಲ್ಲಿ 17 ಜನರು ಚಿಕಿತ್ಸೆ ಗೊಳಪಟ್ಟರು. ಲಯನ್ಸ್ ಕ್ಲಬ್ ಮೂಡಿಗೆರೆ ಅಧ್ಯಕ್ಷರಾದ ಶ್ರೀ ಬಿಎಲ್.ರಂಗನಾಥಗೌಡ ಇವರು ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ನಂತರದ ಕಣ್ಣಿನ ರಕ್ಷಣೆ, ಔಷಧೋಪಚಾರದ ಬಗ್ಗೆ ಆರೋಗ್ಯ ಶಿಕ್ಷಣ ನೀಡಿದರು. ಲಯನ್ ಹಳೇ ಕೋಟೆ ರಮೇಶ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಲ.ಮಾಜಿ ರಾಜ್ಯಪಾಲರಾದ ಶ್ರೀ ಸುಂದರೇಶ್ವರ ರವರು ಲಯನ್ಸ್ ಕ್ಲಬ್ ಮೂಡಿಗೆರೆಯ ಸಮಾಜ ಮುಖಿ ಕರ್ಯಕ್ರಮ ಗಳ ಬಗ್ಗೆ ವಿವರಣೆ ನೀಡಿದರು. ಲ.ಕರ್ಯರ್ಶಿ ಜಯಕುಮಾರ್ ಸ್ವಾಗತಿಸಿ ಲ.ಲಕ್ಷಣಗೌಡ ವಂದಿಸಿದರು. ಸಭೆಯಲ್ಲಿ ಸಿಪ್ರಿಯನ್ ಲೋಬೋ ಖಜಾಂಚಿ ಹಾಜರಿದ್ದರು.